ETV Bharat / sports

ಮಳೆ ಹನಿಗಳ ಜೊತೆಯಲಿ ಮಗುವಾದ ಸಚಿನ್​ ತೆಂಡೂಲ್ಕರ್​: ವಿಡಿಯೋ - ಕ್ರಿಕೆಟ್​ ದೇವರು

ಕ್ರಿಕೆಟ್​ನಿಂದ ದೂರವಿದ್ದರೂ ಸಾಮಾಜಿಕ ಬಾಧ್ಯತೆಗಳಿಂದ ದೂರವಾಗದ ಸಚಿನ್​ ಕಳೆದ ಹಲವು ದಿನಗಳಿಂದ ಕೊರೊನಾ ವಿರುದ್ಧ ಹೋರಾಡಲು ಅಭಿಮಾನಿಗಳಿಗೆ ಮನವಿ ಮಾಡುತ್ತಿದ್ದಾರೆ.

ಸಚಿನ್​ ತೆಂಡೂಲ್ಕರ್​
ಸಚಿನ್​ ತೆಂಡೂಲ್ಕರ್​
author img

By

Published : Jul 16, 2020, 4:38 PM IST

ಮುಂಬೈ: ಕ್ರಿಕೆಟ್​ ದೇವರೆಂದೇ ಕರೆಸಿಕೊಳ್ಳುವ ಸಚಿನ್​ ತೆಂಡೂಲ್ಕರ್​ ಮಳೆಯಲ್ಲಿ ಮಕ್ಕಳಂತೆ ಆಟವಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಕ್ರಿಕೆಟ್​ನಿಂದ ದೂರವಿದ್ದರೂ ಸಾಮಾಜಿಕ ಬಾಧ್ಯತೆಗಳಿಂದ ದೂರವಾಗದ ಸಚಿನ್​ ಹಲವು ದಿನಗಳಿಂದ ಕೊರೊನಾ ವಿರುದ್ಧ ಹೋರಾಡಲು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಗೆ ಮನವಿ ಮಾಡುತ್ತಿದ್ದಾರೆ. ಅಲ್ಲದೆ ಇತ್ತೀಚೆಗೆ ಫ್ಲಾಸ್ಮಾ ಥೆರಫಿಗೂ ಚಾಲನೆ ನೀಡಿದ್ದ ಅವರು​ ಕೊರೊನಾದಿಂದ ಗುಣಮುಖರಾದವರು ಪ್ಲಾಸ್ಮಾ ನೀಡುವಂತೆ ವಿನಂತಿಸಿಕೊಂಡಿದ್ದರು.

ಇನ್ನು ಹಲವು ಕ್ರಿಕೆಟಿಗರ ಜೊತೆ ವಿಶ್ಲೇಷಣೆ, ಚಾಲೆಂಜ್​ಗಳಲ್ಲಿ ಸಕ್ರಿಯರಾಗುತ್ತಿದ್ದ ಸಚಿನ್ ​ಈಗ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋವೊಂದನ್ನು ಶೇರ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸಚಿನ್ ಚಿಕ್ಕ ಮಕ್ಕಳಂತೆ ಮಳೆಯಲ್ಲಿ ನೆನೆಯುತ್ತಾ ಆಟವಾಡುತ್ತಿದ್ದಾರೆ. ಈ ವಿಡಿಯೋವನ್ನು ಮಗಳು ಸಾರಾ ತೆಂಡೂಲ್ಕರ್​ ಸೆರೆ ಹಿಡಿದಿದ್ದಾರೆ.

ಕ್ಯಾಮರಾವುಮನ್​ ಸಾರಾ ತೆಂಡೂಲ್ಕರ್​ ನನ್ನ ಜೀವನದಲ್ಲಿ ಖುಷಿ ಅನುಭವಿಸುತ್ತಿರವ ಕ್ಷಣವನ್ನು ಸೆರೆ ಹಿಡಿದಿದ್ದಾಳೆ. ಈ ಮಳೆ ಹನಿಗಳು ನನಗೆ ನನ್ನ ಬಾಲ್ಯದ ನೆನಪುಗಳನ್ನು ಮರುಕಳಿಸುವಂತೆ ಮಾಡಿವೆ ಎಂದು ಸಚಿನ್ ಬರೆದುಕೊಂಡು ವಿಡಿಯೋ ಪೋಸ್ಟ್​ ಮಾಡಿದ್ದಾರೆ.

ಈ ವಿಡಿಯೋ ಸುಮಾರು 26 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. ಮಾಜಿ ಕ್ರಿಕೆಟಿಗರಾದ ಹರ್ಭಜನ್​ ಸಿಂಗ್​ ಹಾಗೂ ದಿಲೀಪ್​ ಸಿಂಗ್​ ವಿಡಿಯೋಗೆ ಕಾಮೆಂಟ್​ ಮಾಡಿದ್ದು, ಬಾಲ್ಯದ ನೆನಪುಗಳನ್ನು ಮರೆಯಬಾರದು, ನಮ್ಮ ಜೊತೆಯಲ್ಲೆ ಕೊಂಡೊಯ್ಯಬೇಕು ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.