ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವ ವೇಳೆ ಬಿಳಿ ಬಣ್ಣದ ಶೂಗಳನ್ನೇ ಧರಿಸುವ ಮೂಡನಂಬಿಕೆಯನ್ನು ಹೊಂದಿರುವುದಾಗಿ ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ಕ್ಲಬ್ನ ಮ್ಯಾನೇಜರ್ ಪೆಪ್ ಗಾರ್ಡಿಯೊಲಾ ಜೊತೆ ನಡೆಸಿದ ಇನ್ಸ್ಟಾಗ್ರಾಮ್ ಸಂಭಾಷಣೆ ವೇಳೆ ಬಹಿರಂಗಗೊಳಿಸಿದ್ದಾರೆ.
ನಾನು ಬ್ಯಾಟಿಂಗ್ ಮಾಡುವಾಗ ಅದು ನನ್ನ ವಲಯವಾಗಿರುತ್ತದೆ ಮತ್ತು ಸಮಯ ಸಂಪೂರ್ಣವಾಗಿ ನನ್ನೊಂದಿಗೆ ಹತ್ತಿರವಾಗಿರುತ್ತದೆ ಎಂದು 31 ವರ್ಷದ ಕೊಹ್ಲಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಏಕದಿನ ಮತ್ತು ಟಿ-20 ಕ್ರಿಕೆಟ್ನಲ್ಲಿ ಬ್ಯಾಟಿಂಗ್ ಮಾಡುವಾಗ ಬಿಳಿಬಣ್ಣದ ಶೂಗಳನ್ನು ಧರಿಸುತ್ತಾರೆ. ಅದರಲ್ಲೂ ಬ್ಯಾಟಿಂಗ್ ಮಾಡುವಾಗ ಖಚಿತವಾಗಿ ಬಿಳಿ ಬಣ್ಣದ ಶೂಗಳನ್ನು ಧರಿಸುವ ಅವರು ಫೀಲ್ಡಿಂಗ್ ವೇಳೆ ಕೆಲವೊಮ್ಮೆ ಬದಲಿಸುತ್ತಾರೆ.
ಇನ್ನು ಕೊಹ್ಲಿ ಕೂಡ ಗಾರ್ಡಿಯೊಲಾಗೆ ನೀವು ಏನಾದರೂ ಈ ರೀತಿ ಮೂಡ ನಂಬಿಕೆ ಹೊಂದಿದ್ದಿರಾ ಎಂದು ಕೇಳಿದ್ದಕ್ಕೇ ಉ್ತತರಿಸಿ ಮಾಜಿ ಫುಟ್ಬಾಲ್ ದಿಗ್ಗಜ, "ನಾನು ಆಡುತ್ತಿದ್ದ ವೇಳೆ, ಎಲ್ಲಾ ಬೂಟುಗಳು ಕಪ್ಪು ಬಣ್ಣದ್ದಾಗಿರುತ್ತಿದ್ದವು. ಈಗ ಕಪ್ಪು ಬೂಟ್ ತೊಡುವುದು ತುಂಬಾ ಅಪರೂಪ. ಒಂದು ದಿನ ನಾನು ಕೆಂಪು ಶೂ ಧರಿಸಿದ್ದಕ್ಕೆ , ನನ್ನ ಮೆಂಟರ್ ಜೋಹಾನ್ ಕ್ರೂಫ್ ಅದನ್ನು ನೋಡಿ ಬದಲಾಯಿಸುವಂತೆ ಹೇಳಿದ್ದರು, ತಕ್ಷಣ ಕಪ್ಪು ಬಣ್ಣ ಶೂ ಧರಿಸಿದೇ ಎಂದಿದ್ದಾರೆ.
ಪ್ರಸ್ತುತ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅಭಿಮಾನಿಗಳಿಲ್ಲದೇ ನಡೆಯುತ್ತಿರುವ ಫುಟ್ಬಾಲ್ ಪಂದ್ಯಗಳು "ಸ್ನೇಹಿ ಪೂರ್ವಕ ಆಟಗಳು"(ಫ್ರೆಂಡ್ಲಿ ಗೇಮ್) ಎಂದು ಭಾವಿಸುವುದಾಗಿ ಗಾರ್ಡಿಯೊಲಾ ಅಭಿಪ್ರಾಯಪಟ್ಟರು.
" ಪ್ರೇಕ್ಷಕರಿಲ್ಲದೇ ಇದು ತುಂಬಾ ವಿಭಿನ್ನವಾಗಿದೆ. ನಾವು ಅಭಿಮಾನಿಗಳನ್ನು ತುಂಬಾ ಕಳೆದುಕೊಳ್ಳುತ್ತೇವೆ. ಮುಚ್ಚಿದ ಕ್ರೀಡಾಂಗಣದಲ್ಲಿನ ಆಟ ವಿಲಕ್ಷಣವಾಗಿದೆ" ಎಂದು ಅವರು ಹೇಳಿದರು. ಕೊಹ್ಲಿ ಕೂಡ ಗಾರ್ಡಿಯೊಲಾ ಮಾತನ್ನು ಒಪ್ಪಿಕೊಂಡರು.