ಅಹ್ಮದಾಬಾದ್: ಸಯ್ಯದ್ ಮುಸ್ತಾಕ್ ಅಲಿ ಟ್ರೋಫಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ 25 ರನ್ಗಳ ಗೆಲುವು ದಾಖಲು ಮಾಡಿರುವ ಬರೋಡಾ ಫೈನಲ್ಗೆ ಲಗ್ಗೆ ಹಾಕಿದ್ದು, ತಮಿಳುನಾಡು ತಂಡದೊಂದಿಗೆ ಸೆಣಸಾಟ ನಡೆಸಲಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬರೋಡಾ ತಂಡ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 160 ರನ್ ಪೇರಿಸಿತು. ತಂಡದ ಪರ ಕ್ಯಾಪ್ಟನ್ ದೇವದರ್ 64 ರನ್, ಕಾರ್ತಿಕ್ ಕಾಕಡೆ ಅಜೇಯ 53 ರನ್ ಗಳಿಸಿದರು.
-
Baroda are in the final! 👏👏
— BCCI Domestic (@BCCIdomestic) January 29, 2021 " class="align-text-top noRightClick twitterSection" data="
Kedar Devdhar and Co. beat Punjab by 2⃣5⃣ runs in the #SyedMushtaqAliT20 #SF2 and with it, seal a place in the #Final. 👌👌 #PUNvBDA
Scorecard 👉 https://t.co/i4nZz3tPqC pic.twitter.com/30fJ1N8zjC
">Baroda are in the final! 👏👏
— BCCI Domestic (@BCCIdomestic) January 29, 2021
Kedar Devdhar and Co. beat Punjab by 2⃣5⃣ runs in the #SyedMushtaqAliT20 #SF2 and with it, seal a place in the #Final. 👌👌 #PUNvBDA
Scorecard 👉 https://t.co/i4nZz3tPqC pic.twitter.com/30fJ1N8zjCBaroda are in the final! 👏👏
— BCCI Domestic (@BCCIdomestic) January 29, 2021
Kedar Devdhar and Co. beat Punjab by 2⃣5⃣ runs in the #SyedMushtaqAliT20 #SF2 and with it, seal a place in the #Final. 👌👌 #PUNvBDA
Scorecard 👉 https://t.co/i4nZz3tPqC pic.twitter.com/30fJ1N8zjC
ಇದನ್ನೂ ಓದಿ: ಸಯ್ಯದ್ ಮುಷ್ತಾಕ್ ಅಲಿ: ರಾಜಸ್ಥಾನ ವಿರುದ್ಧ ಭರ್ಜರಿ ಜಯ ದಾಖಲಿಸಿ ಫೈನಲ್ಗೆ ತಮಿಳುನಾಡು ಲಗ್ಗೆ!
ಸ್ಪರ್ಧಾತ್ಮಕ ಸ್ಕೋರ್ ಬೆನ್ನತ್ತಿದ್ದ ಪಂಜಾಬ್ ತಂಡ ಆರಂಭದಲ್ಲೇ ಆಘಾತ ಅನುಭವಿಸಿತು. ಆರಂಭಿಕ ಶರ್ಮಾ 5 ರನ್, ಸಿಮ್ರಾನ್ ಸಿಂಗ್ 15 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಇದಾದ ಬಳಿಕ ಬಂದ ಅನ್ಮೂಲ್ಪ್ರಿತ್ ಸಿಂಗ್, ರಮನ್ದೀಪ್ ಸಿಂಗ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಆದರೆ ಗುರುಕಿರತ್ ಸಿಂಗ್(39), ಕ್ಯಾಪ್ಟನ್ ಮಂದೀಪ್ ಸಿಂಗ್ ಅಜೇಯ 42 ರನ್ಗಳ ಹೋರಾಟ ನಡೆಸಿದರೂ ತಂಡ ಗೆಲುವಿನ ದಡ ಸೇರಲಿಲ್ಲ. ಕೊನೆಯದಾಗಿ ತಂಡ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಲಷ್ಟೇ ಶಕ್ತವಾಯಿತು.
ಬರೋಡಾ ಪರ ಲುಕ್ಮನ್ 3 ವಿಕೆಟ್, ನಿಧಿ ರಾತ್ವಾ 2 ವಿಕೆಟ್ ಪಡೆದುಕೊಂಡರೆ, ಅತಿಥಿ ಶೇಥ್, ಪಠಾಣ್ ಹಾಗೂ ಕಾರ್ತಿಕ್ ಕಾಕಡೆ ತಲಾ 1 ವಿಕೆಟ್ ಕಿತ್ತರು. ಬರೋಡಾ ತಂಡದ ಕೇದಾರ್ ದೇವದಾರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈಗಾಗಲೇ ರಾಜಸ್ಥಾನ ವಿರುದ್ಧ ಗೆಲುವು ಸಾಧಿಸಿ ಫೈನಲ್ಗೆ ಲಗ್ಗೆ ಹಾಕಿರುವ ತಮಿಳುನಾಡು ಹಾಗೂ ಬರೋಡಾ ತಂಡ ಫೈನಲ್ನಲ್ಲಿ ಸೆಣಸಾಟ ನಡೆಸಲಿವೆ.