ನಾಗ್ಪುರ: ಸರಣಿ ಜಯಕ್ಕೆ ಎರಡೂ ತಂಡಗಳಿಗೂ ನಿರ್ಣಾಯಕವಾದ ಅಂತಿಮ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡ ಬೌಲಿಂಗ್ ಆಯ್ದುಕೊಂಡಿದೆ.
ಸರಣಿ ಭಾರತ ತಂಡದಲ್ಲಿ ಆಲ್ರೌಂಡರ್ ಕೃನಾಲ್ ಪಾಂಡ್ಯ ಬದಲಿಗೆ ಕನ್ನಡಿಗ ಮನೀಶ್ ಪಾಂಡೆಗೆ ಅವಕಾಶ ಕಲ್ಪಿಸಲಾಗಿದೆ. ಬಾಂಗ್ಲಾತಂಡ ಕೂಡ ಆಲ್ರೌಂಡರ್ ಮೊಸದ್ದಿಕ್ ಹೊಸೈನ್ ಬದಲಿಗೆ ಮೊಹಮ್ಮದ್ ಮಿಥುನ್ ಅವರಿಗೆ ಅವಕಾಶ ಕಲ್ಪಿಸಿದೆ.
ಭಾರತ ತಂಡ:
ರೋಹಿತ್ ಶರ್ಮಾ(ನಾಯಕ), ಶಿಖರ್ ಧವನ್, ಕೆ.ಎಲ್. ರಾಹುಲ್, ಶ್ರೇಯಸ್ ಐಯ್ಯರ್, ರಿಷಭ್ ಪಂತ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ,ಮನೀಶ್ ಪಾಂಡೆ, ಯುಜ್ವೇಂದ್ರ ಚಹಾಲ್, ದೀಪಕ್ ಚಹರ್, ಖಲೀಲ್ ಅಹ್ಮದ್
ಬಾಂಗ್ಲಾದೇಶ ತಂಡ:
ಲಿಟನ್ ದಾಸ್, ಸೌಮ್ಯ ಸರ್ಕಾರ್, ಮೊಹಮ್ಮದ್ ನೈಮ್, ಮಹ್ಮದುಲ್ಲಾ(ನಾಯಕ), ಮುಷ್ಫಿಕರ್ ರಹೀಂ, ಮೊಸೆದ್ದಿಕ್ ಹೊಸೈನ್, ಅನಿಮುಲ್ ಇಸ್ಲಾಂ, ಶೈಫುಲ್ ಇಸ್ಲಾಂ, ಮುಸ್ತಫಿಜುರ್ ರಹ್ಮಾನ್, ಅಲ್ ಅಮಿನ್ ಹೊಸೈನ್, ಆಫೀಫ್ ಹೊಸೈನ್