ಸೌಥಾಂಪ್ಟನ್: ಶಕಿಬ್(51) ಹಾಗೂ ಮುಶ್ಫಿಕರ್ ರಹೀಮ್(83) ರ ಅರ್ಧಶತಕದ ನೆರವಿನಿಂದ ಬಾಂಗ್ಲಾದೇಶ ತಂಡ ಅಫ್ಘಾನಿಸ್ತಾನದ ವಿರುದ್ಧ 263 ರನ್ಗಳ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದ ಅಫ್ಘಾನಿಸ್ತಾನ ಬಾಂಗ್ಲಾದೇಶಕ್ಕೆ ಬ್ಯಾಟಿಂಗ್ ನೀಡಿತು. ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ ಆರಂಭಿಕನಾಗಿ ಬಡ್ತಿ ಪಡೆದು ಬಂದಿದ್ದ ಲಿಟ್ಟನ್ ದಾಸ್ ಕೇವಲ 16 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಆದರೆ, ಹಿರಿಯ ಆಟಗಾರ ತಮೀಮ್(36) ಹಾಗೂ ಶಕಿಬ್(51) ಎರಡನೇ ವಿಕೆಟ್ಗೆ 59 ರನ್ಗಳ ಜೊತೆಯಾಟ ನೀಡಿದರು.
53 ಎಸೆತಗಳಲ್ಲಿ 36 ರನ್ಗಳಿಸಿದ್ದ ತಮೀಮ್ರನ್ನು ನಬಿ ಕ್ಲೀನ್ ಬೌಲ್ಡ್ ಮಾಡಿದರು. ಇವರ ಬೆನ್ನಲ್ಲೇ ಶಕಿಬ್ 69 ಎಸೆತಗಳಲ್ಲಿ 1 ಬೌಂಡರಿ ಸಿಡಿಸಿ 51 ರನ್ಗಳಿಸಿದ್ದ ಶಕಿಬ್ ಅಲ್ ಹಸನ್ ಕೂಡ ಔಟಾದರು. ನಂತರ ಬಂದ ಸೌಮ್ಯ ಸರ್ಕಾರ್ 3 ರನ್ಗಳಿಗೆ ವಿಕೆಟ್ ಒಪ್ಪಿಸಿದರು.
-
Bangladesh finish their 50 overs on 262/7.
— ICC (@ICC) June 24, 2019 " class="align-text-top noRightClick twitterSection" data="
Mushfiqur Rahim top-scored for his side with 83 while Mujeeb Ur Rahman starred for Afghanistan with 3/39 from his 10 overs. #BANvAFG | #CWC19 pic.twitter.com/Rvfai51m9J
">Bangladesh finish their 50 overs on 262/7.
— ICC (@ICC) June 24, 2019
Mushfiqur Rahim top-scored for his side with 83 while Mujeeb Ur Rahman starred for Afghanistan with 3/39 from his 10 overs. #BANvAFG | #CWC19 pic.twitter.com/Rvfai51m9JBangladesh finish their 50 overs on 262/7.
— ICC (@ICC) June 24, 2019
Mushfiqur Rahim top-scored for his side with 83 while Mujeeb Ur Rahman starred for Afghanistan with 3/39 from his 10 overs. #BANvAFG | #CWC19 pic.twitter.com/Rvfai51m9J
ಈ ಹಂತದಲ್ಲಿ ಒಂದಾದ ವಿಕೆಟ್ ಕೀಪರ್ ರಹೀಮ್ ಹಾಗೂ ಮೊಹಮ್ಮದ್ ಉಲ್ಲಾ 6 ನೇ ವಿಕೆಟ್ಗೆ 56 ರನ್ ಸೇರಿಸುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. 27 ರನ್ಗಳಿಸಿದ್ದ ಮಹಮದುಲ್ಲಾರನ್ನು ನೈಬ್ ಔಟ್ ಮಾಡಿದರು. ಕೊನೆಯಲ್ಲಿ ರಹೀಮ್ 87 ಎಸೆತಗಳಲ್ಲಿ 83 ಹಾಗೂ ಮೊಸದ್ದೆಕ್ ಹುಸೇನ್ 24 ಎಸೆತಗಳಲ್ಲಿ 35 ರನ್ಗಳಿಸಿ ತಂಡದ ಮೊತ್ತ 250ರ ಗಡಿ ದಾಟಲು ನೆರವಾದರು.
ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ರಹೀಮ್ ಇಂದಿನ ಪಂದ್ಯದಲ್ಲೂ 83 ರನ್ಗಳಿಸಿ ಮಿಂಚಿದರು. ಇವರ ಇನ್ನಿಂಗ್ಸ್ನಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡಿತ್ತು.
ಅಫ್ಘಾನ್ ಪರ ಮುಜೀಬ್ ಉರ್ ರಹಮಾನ್ 3, ಗುಲ್ಬದ್ದೀನ್ ನೈಬ್ 2, ನಬಿ, ದವ್ಲಾತ್ ಜಾಡ್ರನ್ ತಲಾ ಒಂದು ವಿಕೆಟ್ ಪಡೆದರು.