ನವದೆಹಲಿ: ವಿಶ್ವಕಪ್ ನಂತರ ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆ ಕೋಚ್ ಸ್ಟಿವ್ ರೋಡ್ಸ್ರನ್ನು ಸೇವೆಯಿಂದ ತೆಗೆದು ಹಾಕಿದೆ, ಅವರ ಸ್ಥಾನಕ್ಕೆ ಹಂಗಾಮಿ ಕೋಚ್ ನೇಮಕ ಮಾಡಿದ್ದು, ಬ್ಯಾಟಿಂಗ್ ಕೋಚ್ ಆಗಿ ಭಾರತದ ಮಾಜಿ ಆಟಗಾರ ವಾಸಿಮ್ ಜಾಫರ್ರನ್ನು ಅಯ್ಕೆ ಮಾಡಲಾಗಿದೆ.
ಕಳೆದ ಎರಡು ತಿಂಗಳ ಹಿಂದೆ ಬಾಂಗ್ಲಾ ಕ್ರಿಕೆಟ್ ಆಕಾಡೆಮಿ ಬ್ಯಾಟಿಂಗ್ ಕೋಚ್ ಆಗಿ ಸ್ಟಿವ್ ರೋಡ್ಸ್ರನ್ನ ನೇಮಕ ಮಾಡಿತ್ತು. ಇದೀಗ ಸ್ಟಿವ್ ರೋಡ್ಸ್ ನಿವೃತ್ತಿ ಹೊಂದಿದ್ದು, ನಂತರ ಆಲ್ರೌಂಡರ್ ಖಲೀಲ್ ಮಹ್ಮದ್ ಸುಜೋನ್ ತಾತ್ಕಾಲಿಕ ಕೋಚ್ ಆಗಿದ್ದರು. ಈಗ ತಾತ್ಕಾಲಿಕ ಬ್ಯಾಟಿಂಗ್ ಕೋಚ್ ಆಗಿ ಜಾಫರ್ರನ್ನು ಬಿಸಿಬಿ ಆಯ್ಕೆ ಮಾಡಿಕೊಂಡಿದೆ. ಬೌಲಿಂಗ್ ಕೋಚ್ ಆಗಿ ಲಂಕಾ ಚಮಪ್ಕಾ ರಾಮನಾಯಕೆ ರನ್ನು ಆಯ್ಕೆ ಮಾಡಿಕೊಂಡಿದೆ.
ಜಾಫರ್ ಭಾರತ ತಂಡದ ಪರ 31 ಟೆಸ್ಟ್ಗಳನ್ನಾಡಿದ್ದು, 1944 ರನ್ ಬಾರಿಸಿದ್ದಾರೆ. 5 ಶತಕ, 2 ದ್ವಿಶತಕ ಹಾಗೂ 11 ಅರ್ಧಶತಕ ಬಾರಿಸಿದ್ದಾರೆ. ಜಾಫರ್ ಕೇವಲ 2 ಏಕದಿನ ಪಂದ್ಯಗಳಲ್ಲಿ ಮಾತ್ರ ಭಾರತ ತಂಡವನ್ನು ಪ್ರತಿನಿಧಿಸಿದ್ದರು.
ಈ ಮೂವರು ಹೊಸ ಕೋಚ್ಗಳು ಕೇವಲ ಮುಂಬರುವ ಶ್ರೀಲಂಕಾ ಪ್ರವಾಸಕ್ಕೆ ಸೀಮಿತವಾಗಿರಲಿದ್ದಾರೆ. ಬಾಂಗ್ಲಾದೇಶ ಲಂಕಾ ವಿರುದ್ಧ ಜುಲೈ 26, 28 ಹಾಗೂ 31 ರಂದು 3 ಏಕದಿನ ಪಂದ್ಯಗಳನ್ನಾಡಲಿದೆ.