ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಮ್ಯಾಚ್ ಫಿಕ್ಸಿಂಗ್ಗೆ ಬೆಂಬಲ ನೀಡುತ್ತಿದೆ ಎಂದು ಬಾಂಗ್ಲಾ ಕ್ರಿಕೆಟ್ ಬೋರ್ಡ್ನ ಮಾಜಿ ಅಧ್ಯಕ್ಷ ಸಬಿರ್ ಹೊಸೈನ್ ಚೌಧ್ರಿ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.
ಬಾಂಗ್ಲಾ ಕ್ರಿಕೆಟ್ ಆಟಗಾರರ ಹೋರಾಟಕ್ಕೆ ಬೆಂಬಲ ನೀಡಿ ಟ್ವೀಟ್ ಮಾಡಿರುವ ಹೊಸೈನ್ ಚೌಧ್ರಿ, ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್, ಮ್ಯಾಚ್ ಫಿಕ್ಸಿಂಗ್ ಮತ್ತು ಭ್ರಷ್ಟಾಚಾರವನ್ನ ಬೆಂಬಲಿಸುತ್ತಿರುವ ಪ್ರಪಂಚದ ಏಕೈಕ ಬೋರ್ಡ್ ಎಂದಿದ್ದಾರೆ.
-
@BCBtigers is only national sporting body in the world that promotes institutionalised #matchfixing, #corruption. Unbelievable!! Flagged this issue many times myself. Thank you @Sah75official for your courage in exposing the truth. @dailystarnews https://t.co/JpewXPPyQi @Isam84
— Saber H Chowdhury (@saberhc) October 22, 2019 " class="align-text-top noRightClick twitterSection" data="
">@BCBtigers is only national sporting body in the world that promotes institutionalised #matchfixing, #corruption. Unbelievable!! Flagged this issue many times myself. Thank you @Sah75official for your courage in exposing the truth. @dailystarnews https://t.co/JpewXPPyQi @Isam84
— Saber H Chowdhury (@saberhc) October 22, 2019@BCBtigers is only national sporting body in the world that promotes institutionalised #matchfixing, #corruption. Unbelievable!! Flagged this issue many times myself. Thank you @Sah75official for your courage in exposing the truth. @dailystarnews https://t.co/JpewXPPyQi @Isam84
— Saber H Chowdhury (@saberhc) October 22, 2019
ಈ ವಿಚಾರದ ಬಗ್ಗೆ ನಾನು ಹಲವು ಬಾರಿ ಮಾತನಾಡಿದ್ದೆ. ಆದ್ರೆ ಈ ವಿಚಾರವನ್ನ ಬಯಲಿಗೆಳೆದ ಕ್ರಿಕೆಟ್ ಆಟಗಾರ ಶಕಿಬ್ ಅಲ್ ಹಸನ್ ಧೈರ್ಯಕ್ಕೆ ಧನ್ಯವಾದಗಳು ಎಂದು ಟ್ಟಿಟ್ಟರ್ನಲ್ಲಿ ತಿಳಿಸಿದ್ದಾರೆ. ಆಟಗಾರರ ಪ್ರತಿಭಟನೆಯ ಸಮಯದಲ್ಲಿ ಮಾಜಿ ಅಧ್ಯಕ್ಷರೇ ಇಂತಹ ಹೇಳಿಕೆ ನೀಡಿರೋದು ಹಲವು ಚರ್ಚೆಗಳನ್ನ ಹುಟ್ಟುಹಾಕಿದೆ.
ಬಾಂಗ್ಲಾ ಕ್ರಿಕೆಟ್ ಬೋರ್ಡ್ ವಿರುದ್ಧ ಸಮರ ಸಾರಿರುವ ಆಟಗಾರರು, ಹನ್ನೊಂದು ಅಂಶಗಳ ಬೇಡಿಕೆ ಈಡೇರಿಸುವವರೆಗೆ ಯಾವುದೇ ಕ್ರಿಕೆಟ್ ಚಟುವಟಿಕೆಗಳಲ್ಲೂ ತಾವು ಭಾಗಿಯಾಗುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಟಿ-20 ಸರಣಿ ಅನುಮಾನ ಎಂದೇ ಹೇಳಲಾಗುತ್ತಿದೆ.