ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ ಸೆಮಿಫೈನಲ್ನಲ್ಲಿ ಟೀಂ ಇಂಡಿಯಾ ಹಿರಿಯ ಆಟಗಾರ ಎಂಎಸ್ ಧೋನಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದು ಅನೇಕ ವಿವಾದಗಳಿಗೆ ಕಾರಣವಾಗಿತ್ತು. ಇದೀಗ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಇದೇ ವಿಷಯವಾಗಿ ಮಾತನಾಡಿದ್ದಾರೆ.
ವಿಶ್ವಕಪ್ ಸೆಮಿಫೈನಲ್ನಲ್ಲಿ ದಿನೇಶ್ ಕಾರ್ತಿಕ್ ಹಾಗೂ ಹಾರ್ದಿಕ್ ಪಾಂಡ್ಯ ಬ್ಯಾಟ್ ಬೀಸಿದ ಬಳಿಕ ಮೈದಾನಕ್ಕಿಳಿದಿದ್ದ ಧೋನಿ, ಕೊನೆ ಓವರ್ನಲ್ಲಿ ವಿಕೆಟ್ ಒಪ್ಪಿಸಿದ್ದರು. ಅವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಅನೇಕ ಕ್ರಿಕೆಟ್ ದಿಗ್ಗಜರು ಹಾಗೂ ಸುಪ್ರೀಂಕೋರ್ಟ್ನ ಸಿಎಸಿ ಸಮಿತಿ ಕೂಡ ಇದೇ ವಿಷಯವಾಗಿ ಆಕ್ರೋಶ ವ್ಯಕ್ತ ಪಡಿಸಿತ್ತು.
ಆರಂಭದಲ್ಲೇ ನಾವು ಬೇಗ ವಿಕೆಟ್ ಕಳೆದುಕೊಂಡಿದ್ದರಿಂದ ಮಧ್ಯಮ ಕ್ರಮಾಂಕದಲ್ಲಿ ಕೆಲ ಹೊತ್ತು ಮೈದಾನದಲ್ಲಿ ನಿಂತು ಬ್ಯಾಟ್ ಬೀಸುವ ಆಟಗಾರರ ಅವಶ್ಯಕತೆ ನಮಗೆ ಬೇಕಾಗಿತ್ತು. ಹೀಗಾಗಿ ದಿನೇಶ್ ಕಾರ್ತಿಕ್ಗೆ 5ನೇ ಕ್ರಮಾಂಕಕ್ಕೆ ಬಡ್ತಿ ನೀಡಿ, ಧೋನಿ ಅವರನ್ನ 7ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವಂತೆ ತಿಳಿಸಲಾಗಿತ್ತು. ಇದು ಕೊಹ್ಲಿಗೆ ಕೂಡಾ ಗೊತ್ತಿತ್ತು. ಕೋಚ್ ರವಿಶಾಸ್ತ್ರಿ ಕೂಡ ಇದೇ ವಿಷಯವಾಗಿ ಡ್ರೆಸ್ಸಿಂಗ್ ರೂಂನಲ್ಲಿ ಎಲ್ಲರೊಂದಿಗೂ ಮಾತನಾಡಿದ್ದರು ಎಂದು ತಿಳಿಸಿದ್ದರು.
ನಾವು ಸೆಮಿಫೈನಲ್ನಲ್ಲಿ ಸೋಲು ಕಂಡ ಬಳಿಕ ಮಾತನಾಡಿದ್ದು, ಧೋನಿಯನ್ನ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕಳುಹಿಸಿದ್ದು ತಂಡದ ನಿರ್ಧಾರವಾಗಿತ್ತು ಎಂದು ಸಂಜಯ್ ಬಂಗಾರ್ ತಿಳಿಸಿದ್ದಾರೆ.