ಮೆಲ್ಬೋರ್ನ್: ಭಾರತದ ವಿರುದ್ಧ ಜನವರಿಯಲ್ಲಿ ನಡೆಯುವ ಏಕದಿನ ಸರಣಿಗೆ ಆಯ್ಕೆಯಾಗಿದ್ದ ವೇಗಿ ಸೀನ್ ಅಬಾಟ್ ಗಾಯಗೊಂಡ ಹಿನ್ನಲೆಯಲ್ಲಿ ಬ್ಯಾಟಿಂಗ್ ಆಲ್ರೌಂಡರ್ ಡಾರ್ಸಿ ಶಾರ್ಟ್ ಆಸ್ಟ್ರೇಲಿಯಾ ತಂಡ ಸೇರಿಕೊಂಡಿದ್ದಾರೆ.
ಅಬಾಟ್ ಬಿಗ್ಬ್ಯಾಶ್ ಪಂದ್ಯದ ವೇಳೆ ಸೈಡ್ ಸ್ಟ್ರೈನ್(ಕಿಬ್ಬೊಟ್ಟೆ) ನೋವಿಗೆ ತುತ್ತಾಗಿದ್ದರು. ಈ ಕಾರಣದಿಂದ ಅಬಾಟ್ ಬದಲಿಗೆ ಹೋಬರ್ಟ್ ಹರಿಕೇನ್ಸ್ ತಂಡದ ಡಾರ್ಸಿ ಶಾರ್ಟ್ರನ್ನು ಕ್ರಿಕೆಟ್ ಆಸ್ಟ್ರೇಲಿಯಾ(ಸಿಎ) ಭಾರತ ವಿರುದ್ಧದ ಸರಣಿಗೆ ಆಯ್ಕೆ ಮಾಡಿದೆ.

ಡಾರ್ಸಿ ಶಾರ್ಟ್ ಯಾವುದೇ ಕ್ರಮಾಂಕದಲ್ಲಾದರು ಬ್ಯಾಟಿಂಗ್ ಮಾಡಲು ಸಮರ್ಥರಿದ್ದಾರೆ. ಜೊತೆಗೆ ಅರೆಕಾಲಿಕ ಸ್ಪಿನ್ನರ್ ಆಗಿಯೂ ತಂಡದ ಉಪಯೋಗಕ್ಕೆ ಬರಲಿದ್ದಾರೆ. 2020ರ ಟಿ20 ವಿಶ್ವಕಪ್ನಲ್ಲಿ ಹತ್ತಿರ ಬರುತ್ತಿರುವುದರಿಂದ ಅವರು ನೀಡುವ ಪ್ರದರ್ಶನ ಪ್ರಮುಖವಾಗಿದೆ ಎಂದು ಆಸೀಸ್ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ ಸಧಸ್ಯ ಟ್ರೆವರ್ ಹೋನ್ಸ್ ಹೇಳಿದ್ದಾರೆ.
ಆಸ್ಟ್ರೇಲಿಯಾ ತಂಡ ಇಂತಿದೆ:
ಆ್ಯರೊನ್ ಫಿಂಚ್(ನಾಯಕ): ಆಷ್ಟನ್ ಅಗರ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮ್ಮಿನ್ಸ್, ಪೀಟರ್ ಹ್ಯಾಂಡ್ಸ್‌ಕಾಂಬ್, ಜೋಶ್ ಹ್ಯಾಜಲ್ವುಡ್,ಮಾರ್ನಸ್ ಲ್ಯಾಬುಸ್‌ಚಾಗ್ನೆ, ಕೇನ್ ರಿಚರ್ಡ್‌ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಆಷ್ಟನ್ ಟರ್ನರ್, ಡೇವಿಡ್ ವಾರ್ನರ್ ಹಾಗೂ ಆ್ಯಡಂ ಜಂಪಾ, ಡಾರ್ಸಿ ಶಾರ್ಟ್
-
JUST IN: D'Arcy Short has been called into Australia's one-day squad for their tour of India next month https://t.co/0Gay4ukp63 #INDvAUS #BBL09 pic.twitter.com/MYr1ZkFxcG
— cricket.com.au (@cricketcomau) December 30, 2019 " class="align-text-top noRightClick twitterSection" data="
">JUST IN: D'Arcy Short has been called into Australia's one-day squad for their tour of India next month https://t.co/0Gay4ukp63 #INDvAUS #BBL09 pic.twitter.com/MYr1ZkFxcG
— cricket.com.au (@cricketcomau) December 30, 2019JUST IN: D'Arcy Short has been called into Australia's one-day squad for their tour of India next month https://t.co/0Gay4ukp63 #INDvAUS #BBL09 pic.twitter.com/MYr1ZkFxcG
— cricket.com.au (@cricketcomau) December 30, 2019