ಮೆಲ್ಬೋರ್ನ್: ಆಸ್ಟ್ರೇಲಿಯಾದ ಲೆಜೆಂಡರಿ ಸ್ಪಿನ್ನರ್ ಬ್ರಾಡ್ ಹಾಗ್ ಘೋಷಣೆ ಮಾಡಿರುವ ಅವರ ನೆಚ್ಚಿನ ಏಕದಿನ ತಂಡಕ್ಕೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ನಾಯಕರನ್ನಾಗಿ ನೇಮಕ ಮಾಡಿದ್ದಾರೆ.
ಕೊರೊನಾ ಸಾಂಕ್ರಾಮಿಕ ವೈಋಸ್ ಭೀತಿಯಿಂದ ಎಲ್ಲಾ ಕ್ರಿಕೆಟಿಗರು ಮನೆಯಲ್ಲಿ ಕಾಲ ಕಳೆಯುವಂತಾಗಿದೆ,. ಈ ಸುದೀರ್ಘ ಬಿಡುವಿನ ವೇಳೆ ಎಲ್ಲಾ ಆಟಗಾರರಂತೆ ಆಸ್ಟ್ರೇಲಿಯಾದ ಮಾಜಿ ಚೈನಾಮನ್ ಬೌಲರ್ ಬ್ರಾಡ್ ಹಾಗ್ ಕೂಡ ತಮ್ಮ ನೆಚ್ಚಿನ ಏಕದಿನ ತಂಡವನ್ನು ಘೋಷಣೆ ಮಾಡಿದ್ದಾರೆ.
ಹಾಗ್ ನೆಚ್ಚಿನ ತಂಡದಲ್ಲಿ ಭಾರತದ 5 ಆಟಗಾರರು, ಆಸ್ಟ್ರೇಲಿಯಾದ ಇಬ್ಬರು, ಇಂಗ್ಲೆಂಡ್ನ ಇಬ್ಬರು, ಪಾಕಿಸ್ತಾನ ಹಾಗೂ ನ್ಯೂಜಿಲ್ಯಾಂಡ್ನ ತಲಾ ಒಬ್ಬ ಆಟಗಾರರಿಗೆ ಅವಕಾಶ ನೀಡಿದ್ದಾರೆ.
ಆರಂಭಿಕರಾಗಿ ರೋಹಿತ್ ಹಾಗೂ ವಾರ್ನರ್ಗೆ ಹಾಗ್ ಅವಕಾಶ ನೀಡಿದ್ದಾರೆ. ವಿರಾಟ್ ತಮ್ಮ ನೆಚ್ಚಿನ 3ನೇ ಕ್ರಮಾಂಕದಲ್ಲಿದ್ದರೆ, ಬಾಬರ್, ಬೆನ್ ಸ್ಟೋಕ್ಸ್ 4 ಮತ್ತು 5ನೇ ಸ್ಥಾನದಲ್ಲಿದ್ದಾರೆ. ವಿಕೆಟ್ ಕೀಪರ್ ಸ್ಥಾನಕ್ಕೆ ಇಂಗ್ಲೆಂಡ್ನ ಜಾಸ್ ಬಟ್ಲರ್ರನ್ನು ಆಯ್ಕೆ ಮಾಡಿದ್ದಾರೆ. ಆಶ್ಚರ್ಯವೆಂದರೆ ಭಾರತಕ್ಕೆ 2 ವಿಶ್ವಕಪ್ ಗೆಲ್ಲಿಸಿಕೊಟ್ಟಿರುವ ಮಹೇಂದ್ರ ಸಿಂಗ್ ಧೋನಿಯನ್ನು ತಮ್ಮ ನೆಚ್ಚಿನ 11ರ ಬಳಗದಿಂದ ಕೈಬಿಟ್ಟಿದ್ದಾರೆ.
ಇನ್ನು ಆಲ್ರೌಂಡರ್ ವಿಭಾಗಕ್ಕೆ ಸ್ಟೋಕ್ಸ್ ಜೊತೆಗೆ ಭಾರತದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಅವಕಾಶ ಪಡೆದಿದ್ದಾರೆ. ಮಿಚೆಲ್ ಸ್ಟಾರ್ಕ್, ಲೂಕಿ ಫರ್ಗ್ಯೂಸನ್ , ಮೊಹಮ್ಮದ್ ಶಮಿ ವೇಗದ ಬೌಲಿಂಗ್ನಲ್ಲಿ ಅವಕಾಶ ಪಡೆದರೆ, ಭಾರತದ ಯಜ್ವೇಂದ್ರ ಚಹಾಲ್ರನ್ನು ಹಾಗ್ ಆಯ್ಕೆ ಮಾಡಿದ್ದಾರೆ.
ಬ್ರಾಡ್ಹಾಗ್ ನೆಚ್ಚಿನ ಏಕದಿನ ತಂಡ
ರೋಹಿತ್ ಶರ್ಮಾ, ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ(ನಾಯಕ),ಬಾಬರ್ ಅಜಮ್, ಬೆನ್ ಸ್ಟೋಕ್ಸ್,, ಜಾಸ್ ಬಟ್ಲರ್,ರವೀಂದ್ರ ಜಡೇಜಾ. ಮಿಚೆಲ್ ಸ್ಟಾರ್ಕ್, ಲೂಕಿ ಫರ್ಗ್ಯೂಸನ್, ಮೊಹ್ಮಮದ್ ಶಮಿ, ಯಜ್ವೇಂದ್ರ ಚಹಾಲ್