ಮೆಲ್ಬೋರ್ನ್: ಕ್ರಿಕೆಟ್ ಮೈದಾನದಲ್ಲಿ ರನ್ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ವೇಳೆ ಹಲವಾರು ತಮಾಷೆಯ ಘಟನೆಗಳು ನಡೆಯುತ್ತಿರುತ್ತವೆ. ಅದು ಮೈದಾನದಲ್ಲಿ ಸಾಮಾನ್ಯ ಸಂಗತಿಯಾಗಿದ್ದ ಅಂತಹದ್ದೇ ಘಟನೆ ಆಸ್ಟ್ರೇಲಿಯಾ ದೇಶಿ ಕ್ರಿಕೆಟ್ ವೇಳೆ ನಡೆದಿದೆ.
ಆ್ಯಶಸ್ ಸರಣಿಯ ವೇಳೆ ಸ್ಟಿವ್ ಸ್ಮಿತ್ ನಂತರ ಆಸ್ಟ್ರೇಲಿಯಾ ತಂಡದಲ್ಲಿ ಕೇಳಿಬಂದ ಹೆಸರೇ ಮಾರ್ನಸ್ ಲಾಬುಶೇನ್. ಇದೀಗ ಆ್ಯಶಸ್ ಸರಣಿ ಮುಗಿದ ಬಳಿಕ ದೇಶಿ ಕ್ರಿಕೆಟ್ಗೆ ಮರಳಿರುವ ಮಾರ್ನಸ್ ಆ್ಯರೋನ್ ಫಿಂಚ್ ನೇತೃತ್ವದ ವಿಕ್ಟೋರಿಯಾ ವಿರುದ್ಧದ ಏಕದಿನ ಪಂದ್ಯದ ವೇಳೆ ಕ್ಷೇತ್ರ ರಕ್ಷಣೆ ಮಾಡುವಾಗ ಚೆಂಡನ್ನು ಹಿಡಿಯಲು ಯತ್ನಿಸಿದಾಗ ಪ್ಯಾಂಟ್ ಕಳಚಿಕೊಂಡರೂ ರನ್ಔಟ್ ಮಾಡಲು ಯಶಸ್ವಿಯಾದ ಘಟನೆ ಸಂಬಂಧಿಸಿದೆ.
ಪ್ಯಾಂಟ್ ಕಳಚಿ ಬಿದ್ದರೂ ರನ್ ಔಟ್ ಮಿಸ್ ಅಗ್ಲಿಲ್ಲ!
ಕ್ವೀನ್ಸ್ಲ್ಯಾಂಡ್ ತಂಡದ ಪರ ಆಡುತ್ತಿರುವ ಲಾಬುಶೇನ್ ಎದುರಾಳಿ ತಂಡದ ಡಿಲ್ ಸದರ್ಲ್ಯಾಂಡ್ ಬಾರಿಸಿದ ಚೆಂಡನ್ನು ವೇಗವಾಗಿ ಹಿಡಿಯಲು ಓಡಿದಾಗ ಪ್ಯಾಂಟ್ ಜಾರಿಕೊಂಡಿದೆ. ಆದರೆ ಅದನ್ನು ಲೆಕ್ಕಿಸದ ಲಾಬುಶೇನ್ ಚೆಂಡನ್ನು ಹಿಡಿದು ಕೀಪರ್ಗೆ ಎಸೆದು ಎದುರಾಳಿ ಬ್ಯಾಟ್ಸ್ಮನ್ ರನ್ಔಟ್ಗೆ ಕಾರಣರಾಗಿದ್ದಾರೆ.
- " class="align-text-top noRightClick twitterSection" data="
">
ಈ ವಿಡಿಯೋವನ್ನು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಟ್ಚಿಟರ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಲಾಬುಶೇನ್ ಅವರ ಕ್ರೀಡೋತ್ಸಾಹದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.