ನಾಟಿಂಗ್ಹ್ಯಾಮ್: ಸೆಮಿಫೈನಲ್ ಮೇಲೆ ಕಣ್ಣಿಟ್ಟಿರುವ ಆಸೀಸ್ ಬಾಂಗ್ಲಾದೇಶದ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ.
ಆಸ್ಟ್ರೇಲಿಯ ಈ ಪಂದ್ಯದಲ್ಲಿ ಮೂರು ಬದಲಾವಣೆಗಳೊಂದಿಗೆ ಕಣಕ್ಕಿಳಿಯುತ್ತಿದ್ದರೆ ಬಾಂಗ್ಲದೇಶ 2 ಬದಲಾವಣೆ ಮಾಡಿಕೊಂಡಿದೆ.
ಆಸ್ಟ್ರೇಲಿಯಾಕ್ಕೆ ನಥನ್ ಕೌಲ್ಟರ್ನೈಲ್, ಜಂಪಾ ಹಾಗೂ ಸ್ಟೋಯ್ನಿಸ್ ತಂಡಕ್ಕೆ ಸೇರಿಕೊಂಡಿದ್ದಾರೆ. ಶಾನ್ ಮಾರ್ಶ್, ಕೇನ್ ರಿಚರ್ಡ್ಸ್ನ್ ಹಾಗೂ ಬೆಹ್ರನ್ ಡ್ರಾಫ್ ತಂಡದಿಂದ ಹೊರ ನಡೆದಿದ್ದಾರೆ.
ಬಾಂಗ್ಲಾದೇಶ ತಂಡಕ್ಕೆ ಸೈಫುದ್ದೀನ್ ಬದಲು ರುಬೆಲ್ ಹಸನ್,ಮೊಸದಿಕ್ ಹಸನ್ ಬದಲು ಸಬ್ಬೀರ್ ರಹಮಾನ್ ಅವಕಾಶ ಪಡೆದಿದ್ದಾರೆ.
ಬಾಂಗ್ಲಾದೇಶ ತಂಡ:
ತಮಿಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಶಕಿಬ್ ಅಲ್ ಹಸನ್, ಮುಷ್ಫೀಕರ್ ರಹೀಮ್, ಲಿಟ್ಟನ್ ದಾಸ್, ಮಹಮ್ಮದುಲ್ಲಾ, ಶಬ್ಬಿರ್ ರಹಮಾನ್ , ಮುಶ್ರಫೆ ಮೊರ್ತಾಜಾ, ಮೆಹದಿ ಹಸನ್, ರುಬೆಲ್ ಹುಸೇನ್, ಮುಸ್ತಫಿಜುರ್ ರೆಹಮಾನ್
ಆಸ್ಟ್ರೇಲಿಯಾ ತಂಡ:
ಡೇವಿಡ್ ವಾರ್ನರ್, ಆ್ಯರೋನ್ ಫಿಂಚ್, ಉಸ್ಮಾನ್ ಖವಾಜಾ, ಸ್ಟೀವ್ ಸ್ಮೀತ್, ಗ್ಲೆನ್ ಮ್ಯಾಕ್ಸ್ವೆಲ್, ಶಾನ್ ಮಾರ್ಶ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್, ಜಂಪಾ,ಸ್ಟೋಯ್ನೀಸ್, ಮಿಚೆಲ್ ಸ್ಟಾರ್ಕ್