ETV Bharat / sports

ರಹಾನೆ-ಜಡೇಜಾ ಜೊತೆಯಾಟಕ್ಕೆ ಬಳಲಿದ ಆಸೀಸ್ : 2ನೇ ದಿನದಾಟದ ಅಂತ್ಯಕ್ಕೆ ಭಾರತ ಮುನ್ನಡೆ - ರಹಾನೆ ಜಡೇಜಾ ಜೊತೆಯಾಟ

ನಾಯಕನಿಗೆ ಉತ್ತಮ ಸಾಥ್ ನೀಡಿದ ಜಡೇಜಾ ಕೂಡ ಆಸೀಸ್ ಬೌಲರ್​ಗಳ ಬೆವರಿಳಿಸಿದ್ರು. ಕುಸಿಯುತ್ತಿದ್ದ ಭಾರತಕ್ಕೆ ಆಸರೆಯಾದ ಈ ಜೋಡಿ 6ನೇ ವಿಕೆಟ್​ಗೆ 104 ರನ್​ ಕಲೆ ಹಾಕಿದೆ..

Australia vs India
ರಹಾನೆ - ಜಡೇಜಾ ಜೊತೆಯಾಟ
author img

By

Published : Dec 27, 2020, 1:09 PM IST

ಮೆಲ್ಬೋರ್ನ್ : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ 2ನೇ ದಿನದ ಅಂತ್ಯದಲ್ಲಿ ಮಳೆ ಸುರಿದ ಪರಿಣಾಮ ದಿನದಾಟ ಅಂತ್ಯಗೊಂಡಿದೆ. ನಾಯಕ ಅಜಿಂಕ್ಯಾ ರಹಾನೆ ಮತ್ತು ಜಡೇಜಾ ಜೊತೆಯಾಟದಿಂದ ಭಾರತ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 82 ರನ್​ಗಳ ಮುನ್ನಡೆ ಸಾಧಿಸಿದೆ.

ಮೊದಲ ದಿನದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 36 ರನ್​ ಗಳಿಸಿದ್ದ ಭಾರತ 2ನೇ ದಿನ ಬ್ಯಾಟಿಂಗ್ ಆರಂಭಿಸಿತು. ದಿನದ ಆರಂಭದಲ್ಲಿ ಚುರುಕಿನ ಬೌಲಿಂಗ್ ನಡೆಸಿದ ಕಮ್ಮಿನ್ಸ್, ಗಿಲ್ (45) ಮತ್ತು ಪುಜಾರಾ (17) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ್ರು. ನಂತರ ಬಂದ ವಿಹಾರಿ ಕೂಡ 21 ರನ್ ಗಳಿಸಿ ಲಿಯಾನ್​ಗೆ ವಿಕೆಟ್ ಒಪ್ಪಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಪಂತ್ 40 ಎಸೆತಗಳಲ್ಲಿ 29 ರನ್ ಗಳಿಸಿ ಸ್ಟಾರ್ಕ್​ ಎಸೆತದಲ್ಲಿ ಪೇನ್​ಗೆ ಕ್ಯಾಚ್​ ನೀಡಿ ನಿರ್ಗಮಿಸಿದ್ರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ತಾಳ್ಮೆಯಿಂದ ಬ್ಯಾಟ್ ಬೀಸಿದ ನಾಯಕ ಅಜಿಂಕ್ಯಾ ರಹಾನೆ ಟೆಸ್ಟ್ ಕ್ರಿಕೆಟ್​ನಲ್ಲಿ 12ನೇ ಶತಕ ಸಿಡಿಸಿದ್ರು.

ನಾಯಕನಿಗೆ ಉತ್ತಮ ಸಾಥ್ ನೀಡಿದ ಜಡೇಜಾ ಕೂಡ ಆಸೀಸ್ ಬೌಲರ್​ಗಳ ಬೆವರಿಳಿಸಿದ್ರು. ಕುಸಿಯುತ್ತಿದ್ದ ಭಾರತಕ್ಕೆ ಆಸರೆಯಾದ ಈ ಜೋಡಿ 6ನೇ ವಿಕೆಟ್​ಗೆ 104 ರನ್​ ಕಲೆ ಹಾಕಿದೆ. ಮಳೆಯ ಕಾರಣದಿಂದ ದ್ವಿತೀಯ ದಿನದಾಟ ಅಂತ್ಯವಾಗಿದ್ದು, ಭಾರತ ತಂಡ 5 ವಿಕೆಟ್ ನಷ್ಟಕ್ಕೆ 277 ರನ್​ ಗಳಿಸಿ 82 ರನ್​ಗಳ ಮುನ್ನಡೆ ಸಾಧಿಸಿದೆ.

ಅಜಿಂಕ್ಯಾ ರಹಾನೆ 104 ರನ್ ಮತ್ತು ಜಡೇಜಾ 40 ರನ್ ಗಳಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯಾ ಪರ ಸ್ಟಾರ್ಕ್ ಮತ್ತು ಕಮ್ಮಿನ್ಸ್ ತಲಾ 2 ವಿಕೆಟ್ ಪಡೆದ್ರೆ, ನಾಥನ್ ಲಿಯಾನ್ ಒಂದು ವಿಕೆಟ್ ಪಡೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.