ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಕುತೂಹಲ ಘಟ್ಟಕ್ಕೆ ತಲುಪಿದ್ದು, ನಾಲ್ಕನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 2 ವಿಕೆಟ್ ಕಳೆದುಕೊಂಡು 98 ರನ್ ಗಳಿಸಿದೆ.
-
🏏 STUMPS in Sydney!
— ICC (@ICC) January 10, 2021 " class="align-text-top noRightClick twitterSection" data="
Three wonderful sessions for Australia. Can India battle it out on the final day?#AUSvIND SCORECARD ▶️ https://t.co/Zuk24dsH1t pic.twitter.com/8EISzpB62l
">🏏 STUMPS in Sydney!
— ICC (@ICC) January 10, 2021
Three wonderful sessions for Australia. Can India battle it out on the final day?#AUSvIND SCORECARD ▶️ https://t.co/Zuk24dsH1t pic.twitter.com/8EISzpB62l🏏 STUMPS in Sydney!
— ICC (@ICC) January 10, 2021
Three wonderful sessions for Australia. Can India battle it out on the final day?#AUSvIND SCORECARD ▶️ https://t.co/Zuk24dsH1t pic.twitter.com/8EISzpB62l
ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್ನಲ್ಲಿ 312 ರನ್ಗಳಿಸಿ ಡಿಕ್ಲೇರ್ ಮಾಡಿದ ನಂತರ ಗೆಲ್ಲಲು 407 ರನ್ಗಳ ಕಠಿಣ ಗುರಿ ಪಡೆದ ಭಾರತ ತಂಡಕ್ಕೆ ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್ ಉತ್ತಮ ಆರಂಭ ಒದಗಿಸಿದರು. ಈ ಇಬ್ಬರು ಆಟಗಾರರು ಮೊದಲ ವಿಕೆಟ್ಗೆ 71 ರನ್ಗಳ ಜೊತೆಯಾಟವಾಡಿದರು. ಕಳೆದ ಇನ್ನಿಂಗ್ಸ್ನಲ್ಲಿ ಅರ್ಧಶತಕ ಸಿಡಿಸಿ ಭರವಸೆ ಮೂಡಿಸಿದ್ದ ಶುಬ್ಮನ್ ಗಿಲ್ 31 ರನ್ ಗಳಿಸಿ ಹೆಜಲ್ವುಡ್ಗೆ ವಿಕೆಟ್ ಒಪ್ಪಿಸಿದರು.
ಪೂಜಾರ ಜೊತೆ ಕೂಡಿ ಉತ್ತಮವಾಗಿ ಬ್ಯಾಟ್ ಬೀಸಿದ ರೋಹಿತ್ ಶರ್ಮಾ ಅರ್ಧಶತಕ ಸಿಡಿಸಿದರು. ಆದರೆ ಕಮ್ಮಿನ್ಸ್ ಎಸೆತದಲ್ಲಿ ಸಿಕ್ಸರ್ ಸಿಡಿಸಲು ಯತ್ನಿಸಿ ಸ್ಟಾರ್ಕ್ಗೆ ಕ್ಯಾಚ್ ನೀಡಿ ನಿರಾಸೆ ಅನುಭವಿಸಬೇಕಾಯಿತು.
ಅಂತಿಮವಾಗಿ ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ 2 ವಿಕೆಟ್ ಕಳೆದುಕೊಂಡು 98 ರನ್ ಗಳಿಸಿದ್ದು, ಪಂದ್ಯ ಗೆಲ್ಲಲು ಇನ್ನೂ 309 ರನ್ಗಳ ಅವಶ್ಯಕತೆ ಇದೆ. ಪೂಜಾರ 9 ಮತ್ತು ರಹಾನೆ 4 ರನ್ ಗಳಿಸಿ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯಾ ಪರ ಕಮ್ಮಿನ್ಸ್ ಮತ್ತು ಹೆಜಲ್ವುಡ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡಿದ್ದಾರೆ.