ಅಡಿಲೇಡ್ : ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರಿದ ಆಸ್ಟ್ರೇಲಿಯಾ ತಂಡ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ್ದು, 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
ಟೀಂ ಇಂಡಿಯಾ ನೀಡಿದ್ದ 90 ರನ್ಗಳ ಸುಲಭ ಗುರಿ ಬೆನ್ನತ್ತಿದ ಆಸೀಸ್ ತಂಡ ಉತ್ತಮವಾಗಿ ಬ್ಯಾಟ್ ಬೀಸಿತು. ಮೊದಲ ಇನ್ನಿಂಗ್ಸ್ನಲ್ಲಿ ಚುರುಕಾಗಿ ಬೌಲಿಂಗ್ ನಡೆಸಿದ್ದ ವೇಗಿಗಳು ಎರಡನೇ ಇನ್ನಿಂಗ್ಸ್ನಲ್ಲಿ ಕೊಂಚ ಮಂಕಾಗಿದ್ದರು.
-
A dramatic turnaround on day three!
— ICC (@ICC) December 19, 2020 " class="align-text-top noRightClick twitterSection" data="
Australia win by 8️⃣ wickets in Adelaide to take a 1-0 lead in the series 👏
Can you describe their performance in one word?#AUSvIND 👉 https://t.co/Q10dx0r4nX pic.twitter.com/uGMS0InEHm
">A dramatic turnaround on day three!
— ICC (@ICC) December 19, 2020
Australia win by 8️⃣ wickets in Adelaide to take a 1-0 lead in the series 👏
Can you describe their performance in one word?#AUSvIND 👉 https://t.co/Q10dx0r4nX pic.twitter.com/uGMS0InEHmA dramatic turnaround on day three!
— ICC (@ICC) December 19, 2020
Australia win by 8️⃣ wickets in Adelaide to take a 1-0 lead in the series 👏
Can you describe their performance in one word?#AUSvIND 👉 https://t.co/Q10dx0r4nX pic.twitter.com/uGMS0InEHm
ಆರಂಭಿಕ ಆಟಗಾರ ಮ್ಯಾಥ್ಯೂ ವೇಡ್(33) ರನ್ಔಟ್ಗೆ ಬಲಿಯಾದ್ರೆ, ಮಾರ್ನಸ್ ಲಾಬುಶೇನ್(6) ಅಶ್ವಿನ್ಗೆ ವಿಕೆಟ್ ಒಪ್ಪಿಸಿದ್ರು. ಅಂತಿಮವಾಗಿ ಆಸ್ಟ್ರೇಲಿಯಾ ತಂಡ 21 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 93 ರನ್ ಗಳಿಸುವ ಮೂಲಕ ಮೊದಲ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಿತು.
ಎರಡನೇ ದಿನದಾಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 9 ರನ್ಗಳಿಸಿದ್ದ ಭಾರತ ಮೂರನೇ ದಿನದಲ್ಲಿ ಆರಂಭದಿಂದಲೇ ನೀರಸ ಪ್ರದರ್ಶನ ತೋರಿತು. ಪ್ಯಾಟ್ ಕಮ್ಮಿನ್ಸ್ ಮತ್ತು ಹೆಜಲ್ವುಡ್ ಬೌಲಿಂಗ್ ದಾಳಿಗೆ ಉತ್ತರಿಸಲಾಗದೆ ಪೆವಿಲಿಯನ್ ಕಡೆ ಮುಖ ಮಾಡಿದ್ರು.
ಆರಂಭಿಕ ಆಟಗಾರ ಪೃಥ್ವಿ ಶಾ ಕೇವಲ 4 ರನ್ಗಳಿಗೆ ಔಟಾದರೆ, ಮಯಾಂಕ್ ಅಗರ್ವಾಲ್ 9 ರನ್ಗಳಿಸಿದ್ದಾರೆ. ಬುಮ್ರಾ 2, ಪೂಜಾರಾ 0, ಕೊಹ್ಲಿ 4, ರಹಾನೆ 0, ವಿಹಾರಿ 8, ಸಹಾ 4, ಅಶ್ವಿನ್ 0 , ಉಮೇಶ್ ಯಾದವ್ 4, ಶಮಿ 1 ರನ್ ಗಳಿಸಿದ್ರು. ಭಾರತ ದ್ವಿತೀಯ ಇನ್ನಿಂಗ್ಸ್ನಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 36 ರನ್ ಗಳಿಸಿತು.
ಮೊದಲ ಇನ್ನಿಂಗ್ಸ್ನಲ್ಲಿ ಭಾರತ 244 ರನ್ಗಳಿಸಿದ್ರೆ, ಆಸ್ಟ್ರೇಲಿಯಾ ತಂಡ 191 ರನ್ ಗಳಿಗೆ ಸರ್ವಪತನ ಕಂಡಿತ್ತು.