ETV Bharat / sports

ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಹೊಸ ನಿಯಮ: ಗರಿಷ್ಠ ಅಂಕವಿದ್ದರೂ 2ನೇ ಸ್ಥಾನಕ್ಕೆ ಕುಸಿದ ಭಾರತ - ICC Implements new evaluation system

ಕೋವಿಡ್​-19 ಪರಿಣಾಮ ಕೆಲವು ಟೆಸ್ಟ್​ ಪಂದ್ಯಗಳು ರದ್ದಾಗಿವೆ. ಹೀಗಾಗಿ ಗರಿಷ್ಠ ಅಂಕ ಪಡೆದಿರುವ ತಂಡದ ಬದಲು ಗರಿಷ್ಠ ಗೆಲುವಿನ ಸರಾಸರಿ ಹೊಂದಿರುವ ತಂಡಗಳು ಫೈನಲ್​ ಪ್ರವೇಶಿಸಲಿವೆ ಎಂದು ಅನಿಲ್​ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್​ ಸಮಿತಿ ಶಿಫಾರಸ್ಸು ಮಾಡಿದೆ ಎಂದು ಐಸಿಸಿ ಹೇಳಿಕೆ ಬಿಡುಗಡೆ ಮಾಡಿದೆ.

ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಹೊಸ ನಿಯಮ
ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಹೊಸ ನಿಯಮ
author img

By

Published : Nov 19, 2020, 11:03 PM IST

Updated : Nov 19, 2020, 11:28 PM IST

ಲಂಡನ್: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಭಾರತ ತಂಡ ಅತಿ ಹೆಚ್ಚು ಅಂಕ ಹೊಂದಿದ್ದರೂ ಐಸಿಸಿ ಬಿಡುಗಡೆ ಮಾಡಿರುವ ನೂತನ ನಿಯಮದನ್ವಯ ದ್ವಿತೀಯ ಸ್ಥಾನಕ್ಕೆ ಕುಸಿದಿದೆ. ಆಸ್ಟ್ರೇಲಿಯಾ ತಂಡ ಮೊದಲ ಸ್ಥಾನಕ್ಕೇರಿದೆ.

ಕೋವಿಡ್​-19 ಪರಿಣಾಮ ಕೆಲವು ಟೆಸ್ಟ್​ ಪಂದ್ಯಗಳು ರದ್ದಾಗಿವೆ. ಹೀಗಾಗಿ ಗರಿಷ್ಠ ಅಂಕ ಪಡೆದಿರುವ ತಂಡದ ಬದಲು ಗರಿಷ್ಠ ಗೆಲುವಿನ ಸರಾಸರಿ ಹೊಂದಿರುವ ತಂಡಗಳು ಫೈನಲ್​ ಪ್ರವೇಶಿಸಲಿವೆ ಎಂದು ಅನಿಲ್​ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್​ ಸಮಿತಿ ಶಿಫಾರಸ್ಸು ಮಾಡಿದೆ ಎಂದು ಐಸಿಸಿ ಹೇಳಿಕೆ ಬಿಡುಗಡೆ ಮಾಡಿದೆ.

ಪ್ರಸ್ತುತ ಐಸಿಸಿ ಬಿಡುಗಡೆ ಮಾಡಿರುವ ಪಾಯಿಂಟ್ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡ 296 ಅಂಕ ಹೊಂದಿದ್ದರೂ ಸರಣಿಯ ಗೆಲುವಿನ ಸರಾಸರಿಯಲ್ಲಿ ಶೇ. 82.2 ಪಡೆದು ಮೊದಲ ಸ್ಥಾನಕ್ಕೇರಿದೆ. ಆಸ್ಟ್ರೇಲಿಯಾ 3 ಸರಣಿಯನ್ನಾಡಿದ್ದು 7 ಪಂದ್ಯಗಳಲ್ಲಿ ಗೆಲುವು ಹಾಗೂ 2 ಸೋಲು ಕಂಡಿದೆ. ಭಾರತ ತಂಡ 4 ಸರಣಿಯನ್ನಾಡಿದ್ದು, 7 ಗೆಲುವು ಹಾಗೂ 2 ಸೋಲು ಕಂಡಿದೆ. 360 ಅಂಕ ಹೊಂದಿದ್ದರೂ ಶೇ. 75ರಷ್ಟು ಗೆಲುವಿನ ಸರಾಸರಿ ಇರುವುದರಿಂದ 2ನೇ ಸ್ಥಾನಕ್ಕೆ ಕುಸಿದಿದೆ.

ಇಂಗ್ಲೆಂಡ್​ 60.8 % (292), ನ್ಯೂಜಿಲ್ಯಾಂಡ್​ 50% (180) ಸರಾಸರಿ ಹೊಂದಿದ್ದು 3 ಮತ್ತು 4ನೇ ಸ್ಥಾನದಲ್ಲಿದೆ. ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧದ ಸರಣಿಯು ಭಾರತ ತಂಡಕ್ಕೆ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ ಪ್ರವೇಶಿಸಬೇಕಾದರೆ ನಿರ್ಣಾಯಕವಾಗಲಿದೆ.

Last Updated : Nov 19, 2020, 11:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.