ಸಿಡ್ನಿ: ವಾರ್ನರ್ ಅಬ್ಬರದ ಶತಕ ಹಾಗೂ ಮಿಚೆಲ್ ಸ್ಟಾರ್ಕ್, ನಥನ್ ಲಿಯಾನ್ ಅವರ ಬೌಲಿಂಗ್ ನೆರವಿನಿಂದ ನ್ಯೂಜಿಲ್ಯಾಂಡ್ ವಿರುದ್ಧ 3ನೇ ಪಂದ್ಯವನ್ನು ಗೆಲ್ಲುವ ಮೂಲಕ ಆಸ್ಟ್ರೇಲಿಯಾ ತಂಡ 3-0 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.
198 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡ 4ನೇ ದಿನ 218 ರನ್ ಗಳಿಸಿ ಡಿಕ್ಲೇರ್ ಘೋಷಿಸಿಕೊಂಡು 416 ರನ್ಗಳ ಟಾರ್ಗೆಟ್ ನೀಡಿತು. ವಾರ್ನರ್ ಔಟಾಗದೆ 111, ರೋನಿ ಬರ್ನ್ಸ್ 40 ಹಾಗೂ ಲಾಬುಶೇನ್ ಔಟಾಗದೆ 59 ರನ್ ಗಳಿಸಿದರು.
-
Matt Henry will not bat due to his thumb injury, which means Australia have won by 279 runs!
— ICC (@ICC) January 6, 2020 " class="align-text-top noRightClick twitterSection" data="
What a performance from the hosts – they take the Test series 3-0 👏#AUSvNZ pic.twitter.com/Q3Hz01dMU8
">Matt Henry will not bat due to his thumb injury, which means Australia have won by 279 runs!
— ICC (@ICC) January 6, 2020
What a performance from the hosts – they take the Test series 3-0 👏#AUSvNZ pic.twitter.com/Q3Hz01dMU8Matt Henry will not bat due to his thumb injury, which means Australia have won by 279 runs!
— ICC (@ICC) January 6, 2020
What a performance from the hosts – they take the Test series 3-0 👏#AUSvNZ pic.twitter.com/Q3Hz01dMU8
416 ರನ್ಗಳ ಟಾರ್ಗೆಟ್ ಪಡೆದ ನ್ಯೂಜಿಲ್ಯಾಂಡ್ ತಂಡ ಆಸ್ಟ್ರೇಲಿಯಾ ಬೌಲಿಂಗ್ ದಾಳಿಗೆ ಸಿಲುಕಿ 136 ರನ್ಗಳಿಗೆ ಸರ್ವಪತನ ಕಂಡು 279 ರನ್ಗಳ ಹೀನಾಯ ಸೋಲು ಕಂಡಿತು.
ಮಿಂಚಿನ ಬೌಲಿಂಗ್ ದಾಳಿ ನಡೆಸಿದ ಮಿಚೆಲ್ ಸ್ಟಾರ್ಕ್( 3 ವಿಕೆಟ್), ನಥನ್ ಲಿಯಾನ್(5) ಹಾಗೂ ಪ್ಯಾಟ್ ಕಮ್ಮಿನ್ಸ್ ಒಂದು ವಿಕೆಟ್ ಪಡೆದು ಮಿಂಚಿದರು.
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 454 ರನ್ ಗಳಿಸಿದ್ದರೆ, ನ್ಯೂಜಿಲ್ಯಾಂಡ್ 256 ರನ್ ಗಳಿಸಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಆಕರ್ಶಕ ದ್ವಿಶತಕ ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ ಅಜೇಯ ಅರ್ಧಶತಕ ಸಿಡಿಸಿದ ಮಾರ್ನಸ್ ಲಾಬುಶೇನ್ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.