ಮೆಲ್ಬೋರ್ನ್: ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟಿವ್ ಸ್ಮಿತ್ ನ್ಯೂಜಿಲ್ಯಾಂಡ್ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ 77 ರನ್ ಗಳಿಸುವ ಮೂಲಕ ಆಸೀಸ್ ಪರ ಅತಿ ಹೆಚ್ಚು ರನ್ಗಳಿಸಿರುವ ಟಾಪ್ 10 ಆಟಗಾರರ ಪಟ್ಟಿಗೆ ಸೇರಿದ್ದಾರೆ.
ಸ್ಮಿತ್ ಆಸ್ಟ್ರೇಲಿಯಾದ ದಿಗ್ಗಜ ಗ್ರೇಗ್ ಚಾಪೆಲ್(7,110) ಅವರನ್ನು ಹಿಂದಿಕ್ಕಿ ಆಸ್ಟ್ರೇಲಿಯಾ ಪರ ಹೆಚ್ಚು ಟೆಸ್ಟ್ ರನ್ ಗಳಿಸಿದ 10ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಸ್ಮಿತ್ ಪ್ರಸ್ತುತ ಕ್ರಿಕೆಟ್ನಲ್ಲಿ ಓರ್ವ ಅದ್ಭುತ ಬ್ಯಾಟ್ಸ್ಮನ್. ಅವರು ಮುಂದಿನ ಮೂರು ನಾಲ್ಕು ವರ್ಷಗಳಲ್ಲೂ ಕೂಡ ಇದೇ ಪ್ರದರ್ಶನ ತೋರಲಿದ್ದಾರೆ ಎಂದು ಭಾವಿಸಿದ್ದೇನೆ. ಅವರು ತಮ್ಮ ವೃತ್ತಿ ಜೀವನ ಮುಗಿಸುವುದರೊಳಗೆ ಕ್ರಿಕೆಟ್ ಇತಿಹಾಸದ ಶ್ರೇಷ್ಠ ಬ್ಯಾಟ್ಸ್ಮನ್ ಆಗಿ ಉಳಿದುಕೊಳ್ಳಲಿದ್ದಾರೆ ಎಂದು ಗ್ರೇಗ್ ಚಾಪೆಲ್ ತಿಳಿಸಿದ್ದಾರೆ.
-
Another day, another milestone for Steve Smith 🙌
— ICC (@ICC) December 26, 2019 " class="align-text-top noRightClick twitterSection" data="
He enters the top 10 of the all-time leading run-scorers for Australia in Tests!#AUSvNZ pic.twitter.com/GspcvjjQ0J
">Another day, another milestone for Steve Smith 🙌
— ICC (@ICC) December 26, 2019
He enters the top 10 of the all-time leading run-scorers for Australia in Tests!#AUSvNZ pic.twitter.com/GspcvjjQ0JAnother day, another milestone for Steve Smith 🙌
— ICC (@ICC) December 26, 2019
He enters the top 10 of the all-time leading run-scorers for Australia in Tests!#AUSvNZ pic.twitter.com/GspcvjjQ0J
ಸ್ಮಿತ್ ಪ್ರಸ್ತುತ ಟೆಸ್ಟ್ ಕ್ರಿಕೆಟ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇದ್ದಾರೆ.
ರಿಕಿ ಪಾಂಟಿಂಗ್ ಆಸ್ಟ್ರೇಲಿಯಾ ಪರ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. ಅವರು 168 ಪಂದ್ಯಗಳಿಂದ 13,378 ರನ್ ಗಳಿಸಿದ್ದಾರೆ. ನಂತರದ ಸ್ಥಾನದಲ್ಲಿ ಅಲೆನ್ ಬಾರ್ಡರ್ 11,174 ರನ್( 156 ಪಂದ್ಯ), ಸ್ಟಿವ್ ವಾ 10,927 (168), ಮೈಕಲ್ ಕ್ಲಾರ್ಕ್ 8,643(115) ರನ್ ಗಳಿಸಿದ್ದಾರೆ.
ಒಟ್ಟಾರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಸಚಿನ್ ತಂಡೂಲ್ಕರ್ 15,921 ರನ್ ಗಳಿಸಿ ಸಾರ್ವಕಾಲಿಕ ಗರಿಷ್ಠ ರನ್ ಸರದಾರರಾಗಿದ್ದಾರೆ.