ETV Bharat / sports

ಭಾರತ - ಆಸ್ಟ್ರೇಲಿಯಾ 3ನೇ ಟೆಸ್ಟ್: ಸಿಡ್ನಿ ಮೈದಾನದಲ್ಲಿ 25 ರಷ್ಟು ಪ್ರೇಕ್ಷಕರಿಗೆ ಅವಕಾಶ

author img

By

Published : Jan 4, 2021, 11:14 AM IST

ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ನ್ಯೂ ಸೌತ್ ವೇಲ್ಸ್, ಜನವರಿ 7 ರಂದು ನಡೆಯುವ 3ನೇ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಳ್ಳುವ ಪ್ರೇಕ್ಷಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರೇಕ್ಷಕರ ಸಾಮರ್ಥ್ಯವು ಆರಂಭದಲ್ಲಿ ಶೇಕಡಾ 25 ಕ್ಕೆ ಸೀಮಿತವಾಗಿದೆ.

SCG to be at 25 pc capacity for third Test
ಸಿಡ್ನಿ ಮೈದಾನದಲ್ಲಿ 25 ರಷ್ಟು ಪ್ರೇಕ್ಷಕರಿಗೆ ಅವಕಾಶ

ಸಿಡ್ನಿ: ಜನವರಿ 7 ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುವ ಮೂರನೇ ಟೆಸ್ಟ್ ಪಂದ್ಯಕ್ಕೆ ಸಿಡ್ನಿ ಕ್ರಿಕೆಟ್ ಗ್ರೌಂಡ್​ ಸಾಮರ್ಥ್ಯದ ಶೇ 25 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲಾಗುವುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ದೃಢಪಡಿಸಿದೆ.

ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ನ್ಯೂ ಸೌತ್ ವೇಲ್ಸ್, ಜನವರಿ 7 ರಂದು ನಡೆಯುವ ಪಂದ್ಯದಲ್ಲಿ ಪಾಲ್ಗೊಳ್ಳುವ ಪ್ರೇಕ್ಷಕರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರೇಕ್ಷಕರ ಸಾಮರ್ಥ್ಯವು ಆರಂಭದಲ್ಲಿ ಶೇಕಡಾ 25 ಕ್ಕೆ ಸೀಮಿತವಾಗಿದೆ.

  • Acting on the advice of the NSW Government, we're working together with Venues NSW to ensure the safety of patrons attending the Vodafone Pink Test, with a crowd capacity limited to 25% initially.

    Important information for ticket holders and fans: https://t.co/5H1cc1O1HF pic.twitter.com/z0aVy4FqEG

    — Cricket Australia (@CricketAus) January 4, 2021 " class="align-text-top noRightClick twitterSection" data=" ">

ಪರಿಷ್ಕೃತ ಸಾಮಾಜಿಕವಾಗಿ ಅಂತರವಿರುವ ಆಸನ ಯೋಜನೆಯನ್ನು ಒಳಗೊಂಡಿರುವ ಬದಲಾವಣೆ ಮಾಡಿ ಮತ್ತೊಮ್ಮೆ ಟಿಕೆಟ್ ನೀಡಲಾಗುತ್ತದೆ. ಈಗಾಗಲೆ ಟಿಕೆಟ್ ಖರೀದಿಸಿರುವವರಿಗೆ ವಿಮೆ ಸೇರಿದಂತೆ ಎಲ್ಲ ಹಣವನ್ನು ಮರುಪಾವತಿ ಮಾಡಲಾಗುವುದು ಎಂದು ಹೇಳಿದೆ.

ಓದಿ ಭಾರತ ವಿರುದ್ಧದ ಮೂರನೇ ಟೆಸ್ಟ್​​​​​​ನಿಂದ ಹೊರಬಿದ್ದ ಜೇಮ್ಸ್ ಪ್ಯಾಟಿನ್ಸನ್

ಆರೋಗ್ಯಕ್ಕೆ ಸಂಬಂಧಿಸಿದಂತೆ ನ್ಯೂ ಸೌತ್ ವೇಲ್ಸ್​ನಿಂದ ಸಲಹೆಯನ್ನು ಕೇಳುತ್ತಲೇ ಇರುವುದರಿಂದ ಎಸ್‌ಸಿಜಿಯಲ್ಲಿ ನಡೆಯುವ ಮೂರನೇ ಟೆಸ್ಟ್‌ಗೆ ಅಭಿಮಾನಿಗಳು, ಸಿಬ್ಬಂದಿ, ಆಟಗಾರರು, ಪ್ರಸಾರಕರು ಮತ್ತು ಪಂದ್ಯದ ಅಧಿಕಾರಿಗಳ ಸುರಕ್ಷತೆಯು ಹೆಚ್ಚಿನ ಆದ್ಯತೆಯಾಗಿ ಮುಂದುವರಿಯುತ್ತದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮಧ್ಯಂತರ ಸಿಇಒ ನಿಕ್ ಹಾಕ್ಲೆ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.