ದುಬೈ: ಬುಧವಾರ ಐಪಿಎಲ್ನ ಫೈನಲ್ನಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಟ್ರೋಫಿ ತಂದುಕೊಟ್ಟಿರುವ ರೋಹಿತ್ ಶರ್ಮಾ, ದುಬೈಗೆ ಬಂದ ನಂತರ ಫಿಟ್ನೆಸ್ ಸಾಬೀತು ಪಡಿಸಲು ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಗೆ ಆಗಮಿಸಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ರೋಹಿತ್ ಶರ್ಮಾ ಐಪಿಎಲ್ ವೇಳೆ ಗಾಯಕ್ಕೊಳಗಾಗಿದ್ದರು. ಚೇತರಿಸಿಕೊಂಡು ಮತ್ತೆ ಐಪಿಎಲ್ನಲ್ಲಿ ಆಡಿದ್ದರೂ ಅವರು ಗಾಯದ ಪ್ರಮಾಣ ಹೇಗಿದೆ ಎಂಬುದನ್ನು ಎನ್ಸಿಎನಲ್ಲಿ ಪುನರ್ವಸತಿಗೆ ಒಳಗಾಗಿ ತೋರಿಸಬೇಕಿದೆ. ಹಾಗಾಗಿ ಮುಂಬೈಗೆ ಬಂದು ದೀಪಾವಳಿ ಮುಗಿದ ನಂತರ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಗೆ ಸೇರಿಕೊಳ್ಳಲಿದ್ದಾರೆ.
-
Updates - India’s Tour of Australia
— BCCI (@BCCI) November 9, 2020 " class="align-text-top noRightClick twitterSection" data="
The All-India Senior Selection Committee met on Sunday to pick certain replacements after receiving injury reports and updates from the BCCI Medical Team.
More details here - https://t.co/8BSt2vCaXt #AUSvIND pic.twitter.com/Ge0x7bCRBU
">Updates - India’s Tour of Australia
— BCCI (@BCCI) November 9, 2020
The All-India Senior Selection Committee met on Sunday to pick certain replacements after receiving injury reports and updates from the BCCI Medical Team.
More details here - https://t.co/8BSt2vCaXt #AUSvIND pic.twitter.com/Ge0x7bCRBUUpdates - India’s Tour of Australia
— BCCI (@BCCI) November 9, 2020
The All-India Senior Selection Committee met on Sunday to pick certain replacements after receiving injury reports and updates from the BCCI Medical Team.
More details here - https://t.co/8BSt2vCaXt #AUSvIND pic.twitter.com/Ge0x7bCRBU
ಗಾಯದಿಂದ ಚೇತರಿಸಿಕೊಂಡರಾಷ್ಟ್ರೀಯ ಆಟಗಾರರು ಎನ್ಸಿಎನಲ್ಲಿ ಫಿಟ್ನೆಸ್ ಪರೀಕ್ಷೆಗೆ ಒಳಗಾಗಬೇಕಾಗಿದೆ . ಹಾಗಾಗಿ ದೀಪಾವಳಿ ಮುಗಿಸಿಕೊಂಡು ರೋಹಿತ್ ಬೆಂಗಳೂರಿಗೆ ಬರಲಿದ್ದಾರೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಅವರು ತಂಡದ ಪ್ರಮುಖ ಭಾಗವಲಿದ್ದಾರೆ. ವಿರಾಟ್ ಕೊಹ್ಲಿ ಕೊನೆಯ ಮೂರು ಟೆಸ್ಟ್ಗಳಿಗೆ ಅಲಭ್ಯರಾಗುವುದರಿಂದ ರೋಹಿತ್ ಪಾತ್ರ ಮಹತ್ವವಾಗಲಿದೆ ಎಂದು ಬಿಸಿಸಿಐ ಮೂಲ ತಿಳಿಸಿದೆ.
ಡಿಸೆಂಬರ್ 17ರಿಂದ ಟೆಸ್ಟ್ ಸರಣಿ ಆರಂಭವಾಗಿಲಿದೆ. ಇದು ಡೇ ಅಂಡ್ ನೈಟ್ ಟೆಸ್ಟ್ ಪಂದ್ಯವಾಗಲಿದೆ. ನಂತರ ಡಿಸೆಂಬರ್ 26ರಿಂದ 30ರ ವರೆಗೆ ಬಾಕ್ಸಿಂಗ್ ಡೇ ಟೆಸ್ಟ್, ಜನವರಿ 7-11 ಹಾಗೂ 15-19ರವರೆಗ 3 ಮತ್ತು 4ನೇ ಟೆಸ್ಟ್ ನಡೆಯಲಿದೆ.