ETV Bharat / sports

ಐಪಿಎಲ್​ ಬಳಿಕ ತವರು ತಂಡಕ್ಕೆ ಪಾಂಟಿಂಗ್ ನೆರವು: ಪಂಟರ್ ಗರಡಿಯಲ್ಲಿ ಸ್ಮಿತ್​, ವಾರ್ನರ್​​ ತರಬೇತಿ - ಸ್ಟೀವ್ ಸ್ಮಿತ್ ಲೇಟೆಸ್ಟ್ ನ್ಯೂಸ್

ಕಳೆದ 10 ದಿನಗಳಲ್ಲಿ ಸ್ಟೀವ್ ಸ್ಮಿತ್‌ಗೆ ಚೆಂಡು ಎಸೆದು ಪಾಂಟಿಂಗ್ ಅವರ ತೋಳುಗಳು ಬಿದ್ದುಹೋಗಿವೆ ಎಂದು ಆಸ್ಟ್ರೇಲಿಯಾದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.

Ponting
ರಿಕಿ ಪಾಂಟಿಂಗ್
author img

By

Published : Nov 25, 2020, 3:37 PM IST

ಸಿಡ್ನಿ: ಹದಿನೈದು ದಿನಗಳ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್​ನ 13 ನೇ ಆವೃತ್ತಿಯಲ್ಲಿ ದೆಹಲಿ ಕ್ಯಾಪಿಟಲ್ಸ್ ತರಬೇತುದಾರರಾಗಿದ್ದ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್, ಸ್ಟೀವ್ ಸ್ಮಿತ್‌ಗೆ ಚೆಂಡು ಎಸೆಯುವ ಮೂಲಕ (ಥ್ರೋಡೌನ್) ತರಬೇತಿ ನೀಡುತ್ತಿದ್ದಾರೆ ಎಂದು ಆಸೀಸ್ ಕೋಚ್ ಮಾಹಿತಿ ನೀಡಿದ್ದಾರೆ.

ನಾನು ಮತ್ತು ಪಾಂಟಿಂಗ್ ಒಬ್ಬರಿಗೊಬ್ಬರು ಸಹಾಯ ಮಾಡಬೇಕಾಗಿದೆ. ನಾನು 10 ವರ್ಷಗಳ ಹಿಂದೆ 2-3 ವರ್ಷಗಳ ಕಾಲ ಬ್ಯಾಟಿಂಗ್ ತರಬೇತುದಾರನಾಗಿದ್ದೆ. ಇದು ನಿಜವಾಗಿಯೂ ಕಠಿಣ ಕೆಲಸ. ದುಃಖಕರವೆಂದರೆ, ಈ ಕಾಲದಲ್ಲಿ ನಮ್ಮೊಂದಿಗೆ ಗ್ರೇಮ್ ಹಿಕ್ ಇರಲಿಲ್ಲ. ಹಿಂದೆ ನಾವು ತಂಡದೊಂದಿಗೆ ಮೈಕೆಲ್ ಡಿ ವೆನುಟೊ ಅವರನ್ನು ಹೊಂದಿದ್ದೆವು ಅವರು ಬ್ಯಾಟಿಂಗ್‌ಗೆ ಸಹಾಯ ಮಾಡುತ್ತಿದ್ದರು. ಬ್ಯಾಟ್ಸ್‌ಮನ್‌ಗಳಿಗೆ ಸಹಾಯ ಮಾಡುವುದು ಒಂದು ದೊಡ್ಡ ಪಾತ್ರವಾಗಿದೆ. ನನಗೆ ರಿಕಿ ಪಾಂಟಿಂಗ್ ಗೊತ್ತು, ಕಳೆದ 10 ದಿನಗಳಲ್ಲಿ ಸ್ಟೀವ್ ಸ್ಮಿತ್‌ಗೆ ಚೆಂಡು ಎಸೆದು ಅವರ ತೋಳುಗಳು ಬಿದ್ದುಹೋಗಿವೆ ಎಂದು ಆಸ್ಟ್ರೇಲಿಯಾದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.

ಐಪಿಎಲ್‌ನಿಂದ ಹಿಂದಿರುಗಿದ, ಸ್ಮಿತ್, ಡೇವಿಡ್ ವಾರ್ನರ್ ಮತ್ತು ಪಾಂಟಿಂಗ್ ಸಿಡ್ನಿ ಒಲಿಂಪಿಕ್ ಪಾರ್ಕ್‌ನಲ್ಲಿ ಬೀಡು ಬಿಟ್ಟಿದ್ದು, ಪ್ರತ್ಯೇಕವಾಗಿ ತರಬೇತಿ ಪಡೆಯುತ್ತಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ನಾನು ಯಾವಾಗಲೂ ಪಾಂಟಿಂಗ್​ ಜೊತೆ ತಮಾಷೆ ಮಾಡುತ್ತಿದ್ದೆ, ಸ್ಟೀವ್ ಸ್ಮಿತ್‌ಗೆ ಚೆಂಡು ಎಸೆಯುವುದು ಹೇಗೆ. ನಮ್ಮ ಹುಡುಗರು ಚೆಂಡುಗಳನ್ನು ಹೊಡೆಯಲು ಇಷ್ಟಪಡುತ್ತಾರೆ ಎಂದಿದ್ದೆ. ಇದು ನಮ್ಮ ಕೆಲಸದ ಭಾಗವಾಗಿದೆ. ನಾವು ತಯಾರಿ ಮುಂದುವರಿಸಬೇಕಾಗಿದೆ ನಮ್ಮ ಹುಡುಗರು ಸಾಧ್ಯವಾದಷ್ಟು ಉತ್ತಮವಾಗೊಳ್ಳುತ್ತಾರೆ ಥ್ರೋಡೌನ್ ತಜ್ಞರ ಮೂಲಕವೇ ನಾವು ಅದನ್ನು ಮಾಡಬೇಕು ಎಂದು ಲ್ಯಾಂಗರ್ ಹೇಳಿದ್ದಾರೆ.

ವಾರ್ನರ್, ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಪ್ಯಾಟ್​ ಕಮ್ಮಿನ್ಸ್, ಜೋಶ್ ಹ್ಯಾಜಲ್‌ವುಡ್, ಡಾನ್ ಸ್ಯಾಮ್ಸ್ ಮತ್ತು ಆಂಡ್ರ್ಯೂ ಟೈ ಅವರನ್ನು ಎದುರಿಸುತ್ತಿದ್ದಾರೆ. ಎಸ್‌ಸಿಜಿಯಲ್ಲಿ ಸ್ಟಾರ್ಕ್ ವಿರುದ್ಧ, ಮೈಕೆಲ್ ನೆಸ್ಸರ್, ಸೀನ್ ಅಬಾಟ್ ಆಟಗಾರರಿಗೆ ಸಹಾಯ ಮಾಡುತ್ತಿದ್ದಾರೆ" ಎಂದು ಲ್ಯಾಂಗರ್ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.