ETV Bharat / sports

ಅಶ್ಟನ್ ಅಗರ್​ಗೆ ಗಾಯ, ಫಿಂಚ್​ ಆಡುವುದು ಅನುಮಾನ: ಸರಣಿ ಕಳೆದುಕೊಳ್ಳುವ ಭೀತಿಯಲ್ಲಿ ಆಸೀಸ್

ಟೆಸ್ಟ್​ ತಂಡದ ಅಗ್ರ ಸ್ಪಿನ್ನರ್ ಆಗಿರುವ ಲಿಯಾನ್ ಭಾನುವಾರ ನಡೆಯುವ 2ನೇ ಟಿ-20 ಪಂದ್ಯದಲ್ಲಿ ಆಸೀಸ್ ತಂಡ ಸೇರಿಕೊಳ್ಳಲಿದ್ದು, ಇವರು ಮಿಚೆಲ್ ಸ್ವೆಪ್​ಸನ್​ ಜೊತೆಯಾಗಿ ಕಣಕ್ಕಿಳಿಯಲಿದ್ದಾರೆ.

ನಥನ್ ಲಿಯಾನ್​
ನಥನ್ ಲಿಯಾನ್​
author img

By

Published : Dec 5, 2020, 3:36 PM IST

ಸಿಡ್ನಿ: ಆಸ್ಟ್ರೇಲಿಯಾ ತಂಡದ ಆಲ್​ರೌಂಡರ್​ ಅಶ್ಟನ್ ಅಗರ್​ ಗಾಯಗೊಂಡು ಟಿ-20 ತಂಡದಿಂದ ಹೊರಬಿದ್ದಿರುವುದರಿಂದ ಅವರ ಸ್ಥಾನಕ್ಕೆ ಹಿರಿಯ ಸ್ಪಿನ್ನರ್ ನಥನ್ ಲಿಯಾನ್ ಆಸ್ಟ್ರೇಲಿಯಾ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ಟೆಸ್ಟ್​ ತಂಡದ ಅಗ್ರ ಸ್ಪಿನ್ನರ್ ಆಗಿರುವ ಲಿಯಾನ್ ಭಾನುವಾರ ನಡೆಯುವ 2ನೇ ಟಿ-20 ಪಂದ್ಯದಲ್ಲಿ ಆಸೀಸ್ ತಂಡ ಸೇರಿಕೊಳ್ಳಲಿದ್ದು, ಇವರು ಮಿಚೆಲ್ ಸ್ವೆಪ್​ಸನ್​ ಜೊತೆಯಾಗಿ ಕಣಕ್ಕಿಳಿಯಲಿದ್ದಾರೆ.

ಈ ಕುರಿತು ಐಸಿಸಿ ಟ್ವೀಟ್​ ಮಾಡಿದ್ದು, ಗಾಯಾಳು ಆಶ್ಟನ್​ ಅಗರ್​ ಟಿ-20 ಸರಣಿಯಿಂದ ಹೊರಬಿದ್ದಾರೆ, ಅವರ ಸ್ಥಾನಕ್ಕೆ ಬಲಗೈ ಸ್ಪಿನ್ನರ್​ ನಥನ್​ ಲಿಯಾನ್​ ಆಸ್ಟ್ರೇಲಿಯಾ ತಂಡ ಸೇರಿಕೊಂಡಿದ್ದಾರೆ ಎಂದು ಐಸಿಸಿ ಟ್ವೀಟ್ ಮಾಡಿದೆ.

ಇನ್ನು ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಕ್ಯಾಮರೂನ್​ ಗ್ರೀನ್​ರನ್ನು ಭಾನುವಾರದಿಂದ ಭಾರತ ಎ ವಿರುದ್ಧ ನಡೆಯುವ ಟೆಸ್ಟ್​ ಪಂದ್ಯಕ್ಕಾಗಿ ಬಿಡುಗಡೆ ಮಾಡಲಾಗಿದೆ. ಇನ್ನು ನಾಯಕ ಫಿಂಚ್​ ಕೂಡ ಸ್ಕ್ಯಾನ್​ಗೊಳಗಾಗಿದ್ದು, ಅದರ ವರದಿ ಬಂದ ನಂತರ ಎರಡನೇ ಪಂದ್ಯಕ್ಕೆ ಲಭ್ಯರಿರುವರೇ ಎಂಬುದು ಖಚಿತವಾಗಲಿದೆ.

ಇನ್ನು ಭಾರತ ತಂಡಕ್ಕೆ ಕ್ಯಾನ್ಬೆರಾದಲ್ಲಿ ನಡೆದಿದ್ದ ಕೊನೆಯ ಏಕದಿನ ಹಾಗೂ ಮೊದಲ ಟಿ-20 ಪಂದ್ಯದಲ್ಲಿ ಗೆಲ್ಲಲು ನೆರವಾಗಿದ್ದ ರವೀಂದ್ರ ಜಡೇಜಾ ಕೂಡ ಟಿ-20 ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಬದಲು ವೇಗಿ ಶಾರ್ದುಲ್ ಠಾಕೂರ್​ ಸೇರ್ಪಡೆಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.