ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ನಾಯಕ ಅಜಿಂಕ್ಯಾ ರಹಾನೆ ರನ್ಔಟ್ಗೆ ವಿಕೆಟ್ ಒಪ್ಪಿಸುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಇದೇ ಮೊದಲ ಬಾರಿಗೆ ರನ್ಔಟ್ಗೆ ಬಲಿಯಾಗಿದ್ದಾರೆ.
ರಹಾನೆ ಏಕದಿನ ಕ್ರಿಕೆಟ್ನಲ್ಲಿ 4 ಬಾರಿ ಮತ್ತು ಟಿ20 ಕ್ರಿಕೆಟ್ನಲ್ಲಿ ಒಂದು ಬಾರಿ ರನ್ಔಟ್ಗೆ ವಿಕೆಟ್ ಒಪ್ಪಿಸಿದ್ದರು. ಆದರೆ ಟೆಸ್ಟ್ ಕ್ರಿಕೆಟ್ನ 112 ಇನ್ನಿಂಗ್ಸ್ಗಳಲ್ಲಿ ಇದೇ ಮೊದಲ ಬಾರಿಗೆ ರನ್ ಕದಿಯುವ ಯತ್ನದಲ್ಲಿ ವಿಫಲರಾಗಿದ್ದಾರೆ.
ಒಂದೇ ಸರಣಿಯಲ್ಲಿ ಇಬ್ಬರು ವಿಭಿನ್ನ ನಾಯಕರು ರನ್ಔಟ್
ಒಂದೇ ಸರಣಿಯಲ್ಲಿ ಇಬ್ಬರು ವಿಭಿನ್ನ ನಾಯಕರು ರನ್ಔಟ್ ಆಗಿರುವುದು ಇದು ಎರಡನೇ ಬಾರಿ. ಕೊಹ್ಲಿ ಅಡಿಲೇಡ್‌ನಲ್ಲಿ ರನ್ಔಟ್ಗೆ ಬಲಿಯಾಗಿದ್ರೆ, ಇಂದು ರಹಾನೆ ಅದೇ ರೀತಿ ಔಟ್ ಆಗಿದ್ದಾರೆ. ಇದಕ್ಕೂ ಮೊದಲು 2004 ರಲ್ಲಿ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ನಾಯಕನಾಗಿದ್ದ ದ್ರಾವಿಡ್ ಎರಡನೇ ಟೆಸ್ಟ್‌ನಲ್ಲಿ ರನ್‌ಔಟ್ ಆಗಿದ್ರೆ, ಮೂರನೇ ಟೆಸ್ಟ್ ಪಂದ್ಯದಲ್ಲಿ ನಾಯಕನಾಗಿದ್ದ ಗಂಗೂಲಿ ಕೂಡ ರನ್ ಕದಿಯುವ ಯತ್ನದಲ್ಲಿ ವಿಫಲರಾಗಿದ್ರು.
ಶತಕ ಸಿಡಿಸಿ ರನ್ಔಟ್ ಆದ ಭಾರತದ ಮೂರನೇ ನಾಯಕ
ರಹಾನೆ ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಸಿಡಿಸಿದ ನಂತರ ರನ್ಔಟ್ಗೆ ಬಲಿಯಾದ ಭಾರತದ ಮೂರನೇ ನಾಯಕನಾಗಿದ್ದಾರೆ. ಈ ಹಿಂದೆ 1951 ರಲ್ಲಿ ವಿಜಯ್ ಹಜಾರೆ ಮತ್ತು 2006ರಲ್ಲಿ ರಾಹುಲ್ ದ್ರಾವಿಡ್ ಶತಕ ಸಿಡಿಸಿ ರನ್ಔಟ್ ಆಗಿದ್ದರು.