ಸಿಡ್ನಿ: ಏಕದಿನ ಸರಣಿಯಲ್ಲಿ ಸಿಡ್ನಿ ಮೈದಾನದಲ್ಲಿ ಭಾರತದ ವಿರುದ್ಧ ಪ್ರಾಬಲ್ಯ ಸಾಧಿಸಿದ್ದ ಅತಿಥೇಯ ಆಸ್ಟ್ರೇಲಿಯಾ ಟಿ20 ಸರಣಿಯಲ್ಲಿ ಮಂಕಾಗಿದೆ. ಅನುಭವಿಗಳ ಕೊರತೆ ಒಂದು ಕಡೆಯಾದರೆ, ಭಾರತದ ಬ್ಯಾಟ್ಸ್ಮನ್ಗಳ ಎದುರು ಆಸೀಸ್ ಬೌಲರ್ಗಳು ದುರ್ಬಲರಾಗುತ್ತಿದ್ದಾರೆ. ಆದರೂ ಕೊನೆಯ ಪಂದ್ಯವನ್ನು ಗೆದ್ದು ವೈಟ್ವಾಷ್ನಿಂದ ತಪ್ಪಿಸಿಕೊಳ್ಳಲು ಬಯಸಿದೆ,
ಭಾರತ ತಂಡ ಕಳೆದ ಸತತ 9 ಪಂದ್ಯಗಳನ್ನು ಗೆಲ್ಲುವ ಮೂಲಕ ದಾಖಲೆ ಬರೆದಿದ್ದು, ಇಂದಿನ ಪಂದ್ಯದಲ್ಲೂ ತನ್ನ ಅಜೇಯ ಓಟವನ್ನು ಮುಂದುವರಿಸುವ ಇರಾದೆಯಲ್ಲಿದೆ. ಈಗಾಗಲೆ ತಂಡದ ಆರಂಭಿಕರಾದ ಕೆಎಲ್ ರಾಹುಲ್, ಶಿಖರ್ ಧವನ್ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ರಾಹುಲ್ ಮೊದಲ ಪಂದ್ಯದಲ್ಲಿ, ಧವನ್ 2ನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ನೆರವಾಗಿದ್ದರು. ಇನ್ನು ನಾಯಕ ಕೊಹ್ಲಿ ಲಯ ಕಂಡುಕೊಂಡಿದ್ದಾರೆ, ಇವರಿಗೆ ಶ್ರೇಯಸ್ ಮತ್ತು ಸಾಮ್ಸನ್ ನೆರವು ನೀಡಿದರೆ ತಂಡ ಬೃಹತ್ ಮೊತ್ತ ದಾಖಲಿಸುವುದರಲ್ಲಿ ಎರಡು ಮಾತಿಲ್ಲ.
ಇನ್ನು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅದ್ಭುತ ಸ್ಥಿರತೆಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅವರು ಏಕದಿನ ಸರಣಿಯಲ್ಲಿ 90, 28, 92 ರನ್ಗಳಿಸಿದರೆ, ಟಿ20 ಯಲ್ಲಿ 16 ಹಾಗೂ 42 ರನ್ಗಳಿಸಿ ತಂಡದ ಫಿನಿಶಿಂಗ್ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವುದರಿಂದ ಭಾರತ ತಂಡ ಕ್ಲೀನ್ ಸ್ವೀಪ್ ಕನಸನ್ನು ನನಸು ಮಾಡಲು ಕಾಯುತ್ತಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ನಟರಾಜನ್ ಹಾಗೂ ಶಾರ್ದುಲ್ ಠಾಕೂರ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಚಹಾಲ್ ಕಳೆದ ಪಂದ್ಯದಲ್ಲಿ ದುಬಾರಿಯಾಗಿರುವುದು ಭಾರತ ತಂಡ ಏಕೈಕ ಹಿನ್ನಡೆಯಾಗಿದೆ. ಏಕೆಂದರೆ ಅವರನ್ನು ಹೊರೆತು ಪಡಿಸಿದರೆ ತಂಡದಲ್ಲಿ ಬೇರೆ ಸ್ಪೆಷಲಿಸ್ಟ್ ಸ್ಪಿನ್ನರ್ ಇಲ್ಲದಿರುವುದರಿಂದ ಕೊಹ್ಲಿ ಅನಿವಾರ್ಯವಾಗಿ ಚಹಾಲ್ ಜೊತೆಯಲ್ಲೇ ಮುನ್ನಡೆಯಬೇಕಿದೆ. ಇನ್ನು ವಾಷಿಂಗ್ಟನ್ ಸುಂದರ್ ಕೂಡ ಕಳೆದ ಪಂದ್ಯದಲ್ಲಿ ಹೆಚ್ಚಿನ ರನ್ ಬಿಟ್ಟಕೊಟ್ಟಿದ್ದಾರೆ. ಇವರಿಬ್ಬರ ಬೌಲಿಂಗ್ ಪ್ರದರ್ಶನ ನಾಳಿನ ಪಂದ್ಯದ ಫಲಿತಾಂಶದ ಮೇಲೆ ಪ್ರಮುಖ ಪರಿಣಾಮ ಬೀರಲಿದೆ.
-
Hardik's match-winning knock earns him Player of the Match honours #AUSvIND pic.twitter.com/LBZSj918rr
— cricket.com.au (@cricketcomau) December 6, 2020 " class="align-text-top noRightClick twitterSection" data="
">Hardik's match-winning knock earns him Player of the Match honours #AUSvIND pic.twitter.com/LBZSj918rr
— cricket.com.au (@cricketcomau) December 6, 2020Hardik's match-winning knock earns him Player of the Match honours #AUSvIND pic.twitter.com/LBZSj918rr
— cricket.com.au (@cricketcomau) December 6, 2020
ಇನ್ನು ಸತತ 2 ಸೋಲುಗಳಿಂದ ಕಂಗೆಟ್ಟಿರುವ ಆಸ್ಟ್ರೇಲಿಯಾ ತವರಿನಲ್ಲಿ ಸರಣಿ ಸೋಲನುಭವಿಸಿ ನಿರಾಶೆಯನುಭವಿಸಿದೆ. ಸದ್ಯಕ್ಕೆ ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ವೈಟ್ವಾಷ್ ಮುಖಭಂಗವನ್ನು ತಪ್ಪಿಸಿಕೊಳ್ಳಲು ವೇಡ್ ಪಡೆ ಅಲೋಚಿಸುತ್ತಿದೆ.
ಆದರೆ ಖಾಯಂ ನಾಯಕ ಆ್ಯರೋನ್ ಫಿಂಚ್, ಡೇವಿಡ್ ವಾರ್ನರ್ ಗಾಯಕ್ಕೆ ತುತ್ತಾಗಿರುವುದು ತಂಡದಲ್ಲಿ ಭಾರಿ ಹಿನ್ನಡೆಯನ್ನುಂಟು ಮಾಡಿದೆ. ಇದರ ಜೊತೆಗೆ ವೇಗಿಗಳಾದ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾದ ವೇಗದ ಬೌಲಿಂಗ್ ವಿಭಾಗ ತೀರ ಕಳಪೆಯಾಗಿ ಕಾಣುತ್ತಿದೆ.
-
Hardik Pandya is all praise for @Natarajan_91 👌👌#TeamIndia | @hardikpandya7 | #AUSvIND pic.twitter.com/NX0nofFZZm
— BCCI (@BCCI) December 6, 2020 " class="align-text-top noRightClick twitterSection" data="
">Hardik Pandya is all praise for @Natarajan_91 👌👌#TeamIndia | @hardikpandya7 | #AUSvIND pic.twitter.com/NX0nofFZZm
— BCCI (@BCCI) December 6, 2020Hardik Pandya is all praise for @Natarajan_91 👌👌#TeamIndia | @hardikpandya7 | #AUSvIND pic.twitter.com/NX0nofFZZm
— BCCI (@BCCI) December 6, 2020
ಮಂಗಳವಾರ ನಡೆಯುವ ಪಂದ್ಯದಲ್ಲಿ ಆಸೀಸ್ಗೆ ಕೆಲವು ಬದಲಾವಣೆ ಅನಿವಾರ್ಯವಾಗಿದೆ. ಆರಂಭಿಕ ಬ್ಯಾಟ್ಸ್ಮನ್ ಡಿ ಶಾರ್ಟ್ ಬದಲು ಸ್ಟೋಯ್ನಿಸ್ ಆರಂಭಿಕನಾಗಿ ಕಣಕ್ಕಿಳಿಸಲು ಆಸೀಸ್ ತಂಡ ಚಿಂತಿಸುತ್ತಿದೆ.
ಆಸ್ಟ್ರೇಲಿಯಾ ಟಿ20 ತಂಡ: ಮ್ಯಥ್ಯೂ ವೇಡ್(ನಾಯಕ) ಸೀನ್ ಅಬಾಟ್, ನಥನ ಲಿಯಾನ್ ಅಲೆಕ್ಸ್ ಕ್ಯಾರಿ, ಜೋಶ್ ಹೇಜಲ್ವುಡ್, ಮೊಯಿಸಸ್ ಹೆನ್ರಿಕ್ಸ್, ಮಾರ್ನಸ್ ಲ್ಯಾಬುಶೆನ್, ಗ್ಲೆನ್ ಮ್ಯಾಕ್ಸ್‌ವೆಲ್, ಡೇನಿಯಲ್ ಸ್ಯಾಮ್ಸ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋನಿಸ್, ಮ್ಯಾಥ್ಯೂ ವೇಡ್, ಡಿ'ಆರ್ಸಿ ಶಾರ್ಟ್, ಆಡಮ್ ಜಂಪಾ, ಮಾರ್ಕಸ್ ಸ್ವೆಪ್ಸನ್
ಭಾರತ ಟಿ20 ತಂಡ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಮಾಯಾಂಕ್ ಅಗರ್ವಾಲ್, ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ದೀಪಕ್ ಚಹರ್, ಟಿ ನಟರಾಜನ್, ಶಾರ್ದುಲ್ ಠಾಕೂರ್