ರಾಜ್ಕೋಟ್(ಗುಜರಾತ್): ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಎರಡನೇ ಏಕದಿನ ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗಿದ್ದು, ಆಸೀಸ್ ಸ್ಪಿನ್ನರ್ ಆ್ಯಡಂ ಜಂಪಾ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ವೀಕ್ನೆಸ್ ಬಗ್ಗೆ ಮಾತನಾಡಿದ್ದಾರೆ.
ವಿರಾಟ್ ತನ್ನ ಇನ್ನಿಂಗ್ಸ್ ಪ್ರಾರಂಭದ ಸಮಯದಲ್ಲಿ ಲೆಗ್- ಸ್ಪಿನ್ನರ್ಗಳನ್ನ ಎದುರಿಸಲು ಕಷ್ಟಪಡುತ್ತಾರೆ. ಮೊದಲ ಪಂದ್ಯದಲ್ಲಿ ವಿರಾಟ್ 18 ಎಸೆತದಲ್ಲಿ 16 ರನ್ ಗಳಿಸಿದ್ದರು. ವಿರಾಟ್ ಕೊಹ್ಲಿ ಕಟ್ಟಿಹಾಕಲು ಯೋಜನೆ ರೂಪಿಸುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ವಿರಾಟ್ರನ್ನ 4 ಬಾರಿ ಔಟ್ ಮಾಡಿರುವುದು ನನ್ನ ವಿಶ್ವಾಸ ಹೆಚ್ಚಿಸಿದೆ ಎಂದಿದ್ದಾರೆ.
ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡುವಾಗ ಆಕ್ರಮಣಕಾರಿ ವಿಧಾನವನ್ನು ಅನುಸರಿಸಬೇಕು. ಸ್ವಲ್ಪ ಹಿಂಜರಿದರೂ ವಿರಾಟ್ ಬೌಲರ್ ಮೇಲೆ ಸವಾವಾರಿ ಮಾಡುತ್ತಾರೆ. ನೀವು ಭಾರತದ ವಿರುದ್ಧ ಆಡುವಾಗ ಉತ್ತಮವಾದ ವ್ಯಕ್ತಿತ್ವ ಹೊಂದಿರುವುದು ಅತ್ಯಂತ ಮುಖ್ಯವಾದ ವಿಷಯ ಎಂದು ಜಂಪಾ ಹೇಳಿದ್ದಾರೆ.
ಮುಂದುವರಿದಂತೆ, ನಾನು ವಿರಾಟ್ ಅವರನ್ನು ಕೆಲವು ಬಾರಿ ಔಟ್ ಮಾಡಿದ್ದೇನೆ ಆದರೂ ನನ್ನ ವಿರುದ್ಧ 100 ಸ್ಟ್ರೈಕ್ ರೇಟ್ ಹೋಂದಿದ್ದಾರೆ. ಕೊಹ್ಲಿಗೆ ಬೌಲಿಂಗ್ ಮಾಡುವುದು ತುಂಬಾ ಕಠಿಣ, ನಾನು ಬೌಲ್ ಮಾಡಿದ ಕಠಿಣ ವ್ಯಕ್ತಿಗಳಲ್ಲಿ ಅವರೂ ಒಬ್ಬರು ಎಂದು ವಿರಾಟ್ ಆಟವನ್ನ ಮೆಚ್ಚಿಕೊಂಡಿದ್ದಾರೆ.