ETV Bharat / sports

4 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಹೆಚ್ಚು ಬಾರಿ 30 ವಿಕೆಟ್​: ವಿಶ್ವದಾಖಲೆ ನಿರ್ಮಿಸಿದ ಆರ್​. ಅಶ್ವಿನ್ - ಬಿಎಸ್​ ಚಂದ್ರಶೇಖರ್​

ರವಿಚಂದ್ರನ್ ಅಶ್ವಿನ್​ ಕೊನೆಯ ಪಂದ್ಯದಲ್ಲಿ 8 ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಒಟ್ಟಾರೆ ಸರಣಿಯಲ್ಲಿ 32 ವಿಕೆಟ್​ ಪಡೆದಿದ್ದಾರೆ. ಈ ಮೂಲಕ ಟೆಸ್ಟ್​ ಸರಣಿಯಲ್ಲಿ 30+ ವಿಕೆಟ್​ಗಳನ್ನು 2 ಬಾರಿ ಪಡೆದ ಮೊದಲ ಭಾರತೀಯ ಮತ್ತು 4 ಪಂದ್ಯಗಳ ಸರಣಿಯಲ್ಲಿ ಈ ಸಾಧನೆ ಮಾಡಿದ ವಿಶ್ವದ ಏಕಮಾತ್ರ ಬೌಲರ್​ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ.

ರವಿಚಂದ್ರನ್​ ಅಶ್ವಿನ್​
ರವಿಚಂದ್ರನ್​ ಅಶ್ವಿನ್​
author img

By

Published : Mar 6, 2021, 6:12 PM IST

ಅಹ್ಮದಾಬಾದ್​: ಇಂಗ್ಲೆಂಡ್ ವಿರುದ್ಧ 4 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಭಾರತ ತಂಡದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್​ 32 ವಿಕೆಟ್ ಪಡೆಯುವ ಮೂಲಕ ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ 4 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 2 ಬಾರಿ 30ಕ್ಕಿಂತ ಹೆಚ್ಚು ವಿಕೆಟ್​ ಪಡೆದ ಬೌಲರ್​ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ.

ರವಿಚಂದ್ರನ್ ಅಶ್ವಿನ್​ ಕೊನೆಯ ಪಂದ್ಯದಲ್ಲಿ 8 ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಒಟ್ಟಾರೆ ಸರಣಿಯಲ್ಲಿ 32 ವಿಕೆಟ್​ ಪಡೆದಿದ್ದಾರೆ. ಈ ಮೂಲಕ ಟೆಸ್ಟ್​ ಸರಣಿಯಲ್ಲಿ 30+ ವಿಕೆಟ್​ಗಳನ್ನು 2 ಬಾರಿ ಪಡೆದ ಮೊದಲ ಭಾರತೀಯ ಮತ್ತು 4 ಪಂದ್ಯಗಳ ಸರಣಿಯಲ್ಲಿ ಈ ಸಾಧನೆ ಮಾಡಿದ ವಿಶ್ವದ ಏಕಮಾತ್ರ ಬೌಲರ್​ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ.

ರವಿಚಂದ್ರನ್ ಅಶ್ವಿನ್​ 2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ 31 ವಿಕೆಟ್​ ಪಡೆದಿದ್ದರು.

ಅಶ್ವಿನ್ ಹೊರೆತುಪಡಿಸಿದರೆ, ಭಾರತದ ಪರ ಬಿಷನ್ ಸಿಂಗ್​ ಬೇಡಿ(31), ಹರ್ಭಜನ್​ ಸಿಂಗ್​(32),ಬಿಎಸ್​ ಚಂದ್ರಶೇಖರ್​(35), ಎಸ್​ಪಿ ಗುಪ್ಟೆ(34), ಎಂ.ಹೆಚ್.ಮಂಕಡ್​(34), ಕಪಿಲ್ ದೇವ್​(32) ಈ ಹಿಂದೆ ಟೆಸ್ಟ್​ ಸರಣಿಯಲ್ಲಿ 30ಕ್ಕೂ ಹೆಚ್ಚು ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ.

ಇದನ್ನು ಓದಿ:ಆಂಗ್ಲರ ವಿರುದ್ಧ ಭಾರತಕ್ಕೆ ಇನ್ನಿಂಗ್ಸ್ ಜಯ: WTC ಫೈನಲ್​ನಲ್ಲಿ ಕಿವೀಸ್​ ಜೊತೆ ಸೆಣಸಲಿದೆ ಕೊಹ್ಲಿ ಪಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.