ಅಹ್ಮದಾಬಾದ್: ಅಕ್ಸರ್ ಪಟೇಲ್ ದಾಳಿಗೆ ಸಿಲುಕಿದ ಇಂಗ್ಲೆಂಡ್ ತಂಡ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 205 ರನ್ಗಳಿಗೆ ಆಲೌಟ್ ಆಗಿದೆ. ಇನ್ನು ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತ ತಂಡ ಖಾತೆ ತೆರೆಯುವ ಮುನ್ನವೇ ಶುಬ್ಮನ್ ಗಿಲ್ ವಿಕೆಟ್ ಪಡೆದುಕೊಂಡಿದೆ.
-
England are all out for 205!
— ICC (@ICC) March 4, 2021 " class="align-text-top noRightClick twitterSection" data="
Axar Patel is the pick of the bowlers with returns of 4/68.#INDvENG | https://t.co/6OuUwURcgX pic.twitter.com/UHk8tQCIp9
">England are all out for 205!
— ICC (@ICC) March 4, 2021
Axar Patel is the pick of the bowlers with returns of 4/68.#INDvENG | https://t.co/6OuUwURcgX pic.twitter.com/UHk8tQCIp9England are all out for 205!
— ICC (@ICC) March 4, 2021
Axar Patel is the pick of the bowlers with returns of 4/68.#INDvENG | https://t.co/6OuUwURcgX pic.twitter.com/UHk8tQCIp9
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಈ ಪಂದ್ಯದಲ್ಲೂ ಇಂಗ್ಲೆಂಡ್ನ ಆರಂಭಿಕರು ಉತ್ತಮ ಆರಂಭ ಒದಗಿಸಿಕೊಡುವಲ್ಲಿ ವಿಫಲರಾದರು. ಡೊಮಿನಿಕ್ ಬೆಸ್ (2) ಮತ್ತು ಜಾಕ್ ಕ್ರಾಲೆ(9) ಅಕ್ಷರ್ ಪಟೇಲ್ಗೆ ವಿಕೆಟ್ ಒಪ್ಪಿಸಿದರು.
ನಂತರ ಬಂದ ಜಾನಿ ಬೈರ್ಸ್ಟೋವ್ 28 ರನ್ ಮತ್ತು ರೂಟ್ 5 ರನ್ಗಳಿಸಿ ವೇಗಿ ಸಿರಾಜ್ಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಒಂದಾದ ಆಲ್ರೌಂಡರ್ ಬೆನ್ ಸ್ಟೋಕ್ಸ್ ಮತ್ತು ಒಲಿ ಪೋಪ್ 5ನೇ ವಿಕೆಟ್ ಜೊತೆಯಾಟದಲ್ಲಿ 43 ರನ್ಗಳಿಸಿದರು.
121 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 6 ಬೌಂಡರಿ ಸಹಿತ 55 ರನ್ಗಳಿಸಿದ್ದ ಬೆನ್ ಸ್ಟೋಕ್ಸ್ ಯುವ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಓವರ್ನಲ್ಲಿ ಎಲ್ಬಿ ಬಲೆಗೆ ಬಿದ್ದರು. ನಿಧಾನಗತಿ ಆಟಕ್ಕೆ ಮೊರೆ ಹೋದ ಪೋಪ್ 87 ಎಸೆತಗಳಲ್ಲಿ 2 ಬೌಂಡರಿ ಸಹಿತ 29 ರನ್ಗಳಿಸಿದ್ದಲ್ಲದೆ, ಲಾರೆನ್ಸ್ ಜೊತೆಗೆ 45 ರನ್ಗಳ ಜೊತೆಯಾಟ ನೀಡಿ ತಂಡವನ್ನು 150ರ ಗಡಿ ದಾಟಿಸಿ ಅಶ್ವಿನ್ಗೆ ಮೊದಲ ಬಲಿಯಾದರು.
ಇವರ ವಿಕೆಟ್ ಬೀಳುತ್ತಿದ್ದಂತೆ ಇಂಗ್ಲೆಂಡ್ ತಂಡ ಸತತ 3 ವಿಕೆಟ್ ಕಳೆದುಕೊಂಡಿತು. 74 ಎಸೆತಗಳಲ್ಲಿ 46 ರನ್ಗಳಿಸಿದ್ದ ಲಾರೆನ್ಸ್, 1 ರನ್ಗಳಿಸಿದ್ದ ಫೋಕ್ಸ್ ಹಾಗೂ 6 ರನ್ಗಳಿಸಿದ್ದ ಡೊಮಿನಿಕ್ ಬೆಸ್ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.
ಆದರೆ ಕೊನೆಯ ವಿಕೆಟ್ಗೆ ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್(10) ಹಾಗೂ ಜಾಕ್ ಲೀಚ್ (7) 16 ರನ್ಗಳ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು.
ಇತ್ತೀಚಿನ ವರದಿಯಂತೆ ಮೊದಲ ಓವರ್‌ನಲ್ಲೇ ಶುಬಮನ್ ಗಿಲ್ ವಿಕೆಟ್ ಕಳೆದುಕೊಂಡಿದ್ದು, ಕ್ರೀಸ್‌ನಲ್ಲಿ ರೋಹಿತ್ ಶರ್ಮಾ ಹಾಗು ಚೇತೇಶ್ವರ್ ಪೂಜಾರ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಭಾರತದ ತಮ್ಮ ಅದ್ಭುತ ಬೌಲಿಂಗ್ ದಾಳಿಯನ್ನು ಮುಂದುವರಿಸಿದ ಅಕ್ಷರ್ ಪಟೇಲ್ 68ಕ್ಕೆ 4, ರವಿಚಂದ್ರನ್ ಅಶ್ವಿನ್ 47ಕ್ಕೆ 3, ಮೊಹಮ್ಮದ್ ಸಿರಾಜ್ 45ಕ್ಕೆ 2 ಮತ್ತು ಸುಂದರ್ 14ಕ್ಕೆ 1 ವಿಕೆಟ್ ಪಡೆದರು ಮಿಂಚಿದರು.