ಲಂಡನ್: ತವರಿನಲ್ಲಿ ನಡೆದ ಮೊದಲ ಪಂದ್ಯ ಕೈಚೆಲ್ಲಿರುವ ಅತಿಥೇಯ ಇಂಗ್ಲೆಂಡ್ ಇಂದಿನಿಂದ ಆರಭವಾಗಲಿರುವ 2 ನೇ ಆ್ಯಶಸ್ ಟೆಸ್ಟ್ನಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ.
ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡ ಮೊದಲ ಪಂದ್ಯದಲ್ಲಿ 251 ರನ್ಗಳ ಭಾರಿ ಅಂತರದಿಂದ ಆಸೀಸ್ ವಿರುದ್ಧ ಮಣಿದಿತ್ತು. ಬರ್ಮಿಂಗ್ ಹ್ಯಾಮ್ನಲ್ಲಿ ಪ್ರಮುಖ ಬೌಲರ್ ಆ್ಯಂಡರ್ಸನ್ ಗಾಯಕ್ಕೊಳಗಾಗಿದ್ದೇ ಇಂಗ್ಲೆಂಡ್ ಸೋಲಿಗೆ ಕಾರಣವಾಗಿತ್ತು. ಆ್ಯಂಡರ್ಸನ್ ಇಂದಿನ ಪಂದ್ಯದಲ್ಲೂ ಕಣಕ್ಕಿಳಿಯುತ್ತಿಲ್ಲವಾದ್ದರಿಂದ ಇಂಗ್ಲೆಂಡ್ ತಂಡಕ್ಕೆ ವಿಶ್ವಕಪ್ ಹೀರೋ ಜೋಫ್ರಾ ಆರ್ಚರ್ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಲಿದ್ದಾರೆ.
ಆ್ಯಶಸ್ ಅಂದ್ರೇನು, ಆ ಹೆಸರು ಹೇಗ್ ಬಂತು ?... ಆ್ಯಶಸ್ ಸರಣಿ ಕುರಿತ ಕುತೂಹಲಕಾರಿ ಅಂಶಗಳು
ಜೋಫ್ರಾ ಆರ್ಚರ್ ಆಸ್ಟ್ರೇಲಿಯಾ ತಂಡವನ್ನು ಖಂಡಿತ ತನ್ನ ಬೌಲಿಂಗ್ನಿಂದ ಕಾಡಲಿದ್ದಾರೆ. ಅದರಲ್ಲೂ ಮೊದಲ ಟೆಸ್ಟ್ನಲ್ಲಿ 2 ಶತಕ ಬಾರಿಸಿರುವ ಸ್ಟಿವ್ ಸ್ಮಿತ್ ವಿರುದ್ಧ ಆರ್ಚರ್ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ನಾಯಕ ರೂಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೋಚ್ ಕಾಲಿಂಗ್ವುಡ್ ಕೂಡ ಆರ್ಚರ್ ಆಸ್ಟ್ರೇಲಿಯಾ ವಿರುದ್ಧ ಪಂದ್ಯ ಗೆದ್ದುಕೊಡಲಿದ್ದಾರೆ ಎಂದು ಹೇಳಿದ್ದಾರೆ.
-
Our squad for the second @Specsavers #Ashes Test! 🏴🇦🇺🏏 pic.twitter.com/GkqrJwE5f6
— England Cricket (@englandcricket) August 13, 2019 " class="align-text-top noRightClick twitterSection" data="
">Our squad for the second @Specsavers #Ashes Test! 🏴🇦🇺🏏 pic.twitter.com/GkqrJwE5f6
— England Cricket (@englandcricket) August 13, 2019Our squad for the second @Specsavers #Ashes Test! 🏴🇦🇺🏏 pic.twitter.com/GkqrJwE5f6
— England Cricket (@englandcricket) August 13, 2019
ಇತ್ತ ಮೊದಲ ಪಂದ್ಯದಲ್ಲಿ ಗೆಲುವು ಪಡೆದಿರುವ ಆಸ್ಟ್ರೇಲಿಯಾ ಅದೇ ಆತ್ಮ ವಿಶ್ವಾಸದಲ್ಲಿ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದು, 5 ಪಂದ್ಯಗಳ ಸರಣಿಯಲ್ಲಿ 2-0 ಲೀಡ್ ಪಡೆದುಕೊಳ್ಳುವ ವಿಶ್ವಾಸದಲ್ಲಿದೆ.
ಮೊದಲ ಪಂದ್ಯದಲ್ಲಿ ಸ್ಟಿವ್ ಸ್ಮಿತ್ 2 ಶತಕ, ವೇಡ್ ಎರಡನೇ ಇನ್ನಿಂಗ್ಸ್ನಲ್ಲಿ ಮ್ಯಾಥ್ಯೂ ವೇಡ್ ಶತಕ ಬಾರಿಸಿದ್ದರೆ, ನಥನ್ ಲಯಾನ್, ಪ್ಯಾಟ್ ಕಮ್ಮಿನ್ಸ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಇಂದು ನಡೆಯುವ 2ನೇ ಟೆಸ್ಟ್ನಲ್ಲಿ ಮಿಚೆಲ್ ಸ್ಟಾರ್ಕ್ ಕಣಕ್ಕಿಳಿಯುವ ಸಾಧ್ಯತೆ ಇದೆ.
-
BREAKING: Australia's XII for the Lord's Test:
— cricket.com.au (@cricketcomau) August 13, 2019 " class="align-text-top noRightClick twitterSection" data="
Tim Paine (c/wk), David Warner, Cameron Bancroft, Usman Khawaja, Steve Smith, Travis Head, Matthew Wade, Pat Cummins, Mitchell Starc, Peter Siddle, Nathan Lyon, Josh Hazlewood #Ashes
">BREAKING: Australia's XII for the Lord's Test:
— cricket.com.au (@cricketcomau) August 13, 2019
Tim Paine (c/wk), David Warner, Cameron Bancroft, Usman Khawaja, Steve Smith, Travis Head, Matthew Wade, Pat Cummins, Mitchell Starc, Peter Siddle, Nathan Lyon, Josh Hazlewood #AshesBREAKING: Australia's XII for the Lord's Test:
— cricket.com.au (@cricketcomau) August 13, 2019
Tim Paine (c/wk), David Warner, Cameron Bancroft, Usman Khawaja, Steve Smith, Travis Head, Matthew Wade, Pat Cummins, Mitchell Starc, Peter Siddle, Nathan Lyon, Josh Hazlewood #Ashes
ಆಸ್ಟ್ರೇಲಿಯಾ: ಟಿಮ್ ಪೇನ್ (ನಾಯಕ), ಡೇವಿಡ್ ವಾರ್ನರ್, ಕ್ಯಾಮರೂನ್ ಬಾನ್‌ಕ್ರಾಫ್ಟ್, ಉಸ್ಮಾನ್ ಖವಾಜ, ಸ್ಟೀವ್ ಸ್ಮಿತ್, ಟ್ರೇವಿಸ್ ಹೆಡ್, ಮ್ಯಾಥ್ಯೂ ವೇಡ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹೆಜಲ್‌ವುಡ್, ಮಾರ್ನಸ್ ಲಬುಶೇನ್, ನಥನ್ ಲಿಯೋನ್, ಮೈಕಲ್ ನೆಸರ್, ಪೀಟರ್ ಸಿಡ್ಲ್
ಇಂಗ್ಲೆಂಡ್: ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್ (ಉಪನಾಯಕ), ಜೇಮ್ಸ್ ಆಂಡ್ರೆಸನ್, ಜೋಫ್ರಾ ಆರ್ಚರ್, ಜಾನಿ ಬೈರ್‌ಸ್ಟೋವ್, ಸ್ಟುವರ್ಟ್ ಬ್ರಾಡ್, ರೊರಿ ಬರ್ನ್ಸ್, ಜೋಸ್ ಬಟ್ಲರ್, ಸ್ಯಾಮ್ ಕರ್ರನ್, ಜೋ ಡೆನ್ಲಿ, ಜೇಸನ್ ರಾಯ್, ಒಲ್ಲಿ ಸ್ಟೋನ್ ಹಾಗೂ ಕ್ರಿಸ್ ವೋಕ್ಸ್