ETV Bharat / sports

ಗಾಯಗೊಂಡ ಸ್ಮಿತ್​ ಗೇಲಿ ಮಾಡಿದ ಇಂಗ್ಲೆಂಡ್​​ ಅಭಿಮಾನಿಗಳ ವರ್ತನೆ ಖಂಡಿಸಿದ ಆಸ್ಟ್ರೇಲಿಯಾ ಪಿಎಂ

author img

By

Published : Aug 19, 2019, 6:36 PM IST

ತೀವ್ರವಾಗಿ ಗಾಯಗೊಂಡಿದ್ದ ಸ್ಮಿತ್​ ಪೆವಿಲಿಯನ್​ಗೆ ತೆರಳುವಾಗ ಇಂಗ್ಲೆಂಡ್​ ಅಭಿಮಾನಿಗಳು ಹಿಯಾಳಿಸಿ ಗೇಲಿ ಮಾಡಿದ್ದನ್ನು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್​ ಮೋರಿಸನ್​ ತೀವ್ರವಾಗಿ ಖಂಡಿಸಿದ್ದಾರೆ.

Ashes 2019

ಲಂಡನ್​: ತೀವ್ರ ಗಾಯಗೊಂಡಿದ್ದ ಸ್ಮಿತ್​ ಪೆವಿಲಿಯನ್​ಗೆ ತೆರಳುವಾಗ ಇಂಗ್ಲೆಂಡ್​ ಅಭಿಮಾನಿಗಳು ಹಿಯಾಳಿಸಿ ಗೇಲಿ ಮಾಡಿದ್ದನ್ನು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ತೀವ್ರವಾಗಿ ಖಂಡಿಸಿದ್ದಾರೆ.

ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಸ್ಕಾಟ್​ ಮೋರಿಸನ್​ ಸ್ಮಿತ್​ರನ್ನು ಹಿಯಾಳಿಸಿದ್ದಕ್ಕೆ ಕಿಡಿಕಾರಿದ್ದಾರೆ. 2ನೇ ಟೆಸ್ಟ್​ನ 4ನೇ ದಿನ ಇಂಗ್ಲೆಂಡ್​ನ ವೇಗಿ ಜೋಫ್ರಾ ಆರ್ಚರ್ ಎಸೆದ ಬೌನ್ಸರ್​ ಸ್ಮಿತ್​ ಕುತ್ತಿಗೆಗೆ ಬಿದ್ದು ಕ್ರೀಸ್​ನಲ್ಲೇ ಕುಸಿದು ಬಿದ್ದಿದ್ದರು. ಈ ಸಂದರ್ಭದಲ್ಲಿ ಸ್ಮಿತ್​ ವೈದ್ಯರ ಸಲಹೆಯಂತೆ ಮೈದಾನ ತೊರೆಯಲು ನಿರ್ಧರಿಸಿದ್ದರು. ಈ ವೇಳೆ ಇಂಗ್ಲೆಂಡ್​​ ಅಭಿಮಾನಿಗಳು ಸ್ಮಿತ್​ರನ್ನು ಎಂದಿನಂತೆ ಗೇಲಿ ಮಾಡಿದ್ದಾರೆ.

ಈ ಘಟನೆ ಆಸೀಸ್​ ಪ್ರಧಾನಿಯನ್ನು ಕೆರಳಿಸಿದ್ದು, ಸ್ಮಿತ್​ ಒಂದು ವರ್ಷದ ಬಳಿಕ ಕ್ರಿಕೆಟ್​ ಆಡುತ್ತಿದ್ದು, ಮೊದಲ ಟೆಸ್ಟ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇದನ್ನು ನೋಡಿ ಆದರೂ ಇಂಗ್ಲೆಂಡ್​ ಅಭಿಮಾನಿಗಳು ಅವರನ್ನು ಗೌರವದಿಂದ ಕಾಣಬೇಕು. ಈ ಪಂದ್ಯ ಡ್ರಾ ನಲ್ಲಿ ಅಂತ್ಯಗೊಂಡರೂ ಲಾರ್ಡ್ಸ್​ನಲ್ಲಿ ಪ್ರೇಕ್ಷಕರು ಸ್ಮಿತ್​ರನ್ನು ನಡೆಸಿಕೊಂಡ ರೀತಿಯಿಂದ ಇಡೀ ಆ್ಯಶಸ್​ ಫೌಲ್​ ಆಯಿತು ಎಂದು ಅಸಮಧಾನ ಹೊರಹಾಕಿದ್ದಾರೆ.

ಸ್ಮಿತ್​ ಒಬ್ಬ ಚಾಂಪಿಯನ್​ ಬ್ಯಾಟ್ಸ್​ಮನ್​, ಆತನನ್ನು ಅವಹೇಳನ ಮಾಡುವವರಿಗೆ ಬ್ಯಾಟ್​ ಮತ್ತು ಬಾಲ್​ನಿಂದ ಉತ್ತರಿಸಿ ಆ್ಯಶಸ್​ ಟ್ರೋಫಿಯನ್ನು ತವರಿಗೆ ತರುತ್ತಾರೆಂದು ನಾವು ಭಾವಿಸಿದ್ದೇವೆ ಎಂದು ಮೋರಿಸನ್​ ತಿಳಿಸಿದ್ದಾರೆ.

ಸ್ಮಿತ್​ ಕಳೆದ ಕೆಲವು ವರ್ಷಗಳಿಂದ ಕ್ರಿಕೆಟ್​ನಲ್ಲಿ ತಾವೊಬ್ಬ ಚಾಂಪಿಯನ್​ ಆಟಗಾರ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ನನಗೆ ಅವರನ್ನು ಕಂಡರೆ ಹೆಮ್ಮೆಯನ್ನಿಸುತ್ತದೆ. ಅವರ ಅತ್ಯುತ್ತಮ ಪ್ರದರ್ಶನವನ್ನು ಕಂಡ ಮೇಲಾದರೂ ಇಂಗ್ಲೆಂಡ್ ಅಭಿಮಾನಿಗಳು ಅವರಿಗೆ ಗೌರವ ಕೊಡುವುದನ್ನು ಕಲಿತುಕೊಳ್ಳಬೇಕು ಎಂದಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.