ಮ್ಯಾಂಚೆಸ್ಟರ್: ಅತಿಥೇಯ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ತಂಡ ನಾಲ್ಕನೇ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ 185 ರನ್ಗಳ ಜಯ ಸಾಧಿಸಿದೆ.
ಕೊನೆಯ ದಿನ 383 ರನ್ಗಳ ಗುರಿ ಪಡೆದಿದ್ದ ಇಂಗ್ಲೆಂಡ್ ನಾಲ್ಕನೆ ದಿನ18 ರನ್ಗಳಿಸಿ 2 ವಿಕೆಟ್ ಕಳೆದುಕೊಂಡು ಅಘಾತ ಅನುಭವಿಸಿತ್ತು. 5ನೇ ದಿನ ಡ್ರಾ ಸಾಧಿಸಲು ಶತಪ್ರಯತ್ನ ನಡೆಸಿದರಾದರೂ ಆಸೀಸ್ ಬೌಲರ್ಗಳ ಮುಂದೆ ನಿಲ್ಲಲಾರದೆ ಹೋದರು.
ಜೋಸ್ ಬಟ್ಲರ್ 111 ಎಸೆತಗಳಲ್ಲಿ 34, ಕ್ರೈಗ್ ಓವರ್ಟನ್ 105 ಎಸೆತಗಳಲ್ಲಿ 21, ಬ್ಯೈರ್ಸ್ಟೋವ್ 61 ಎಸೆತಗಳಲ್ಲಿ 25, ಜೋ ಡೆನ್ಲಿ 123 ಎಸೆತಗಳಲ್ಲಿ 53 ಹಾಗೂ ರಾಯ್ 67 ಎಸೆಗಳಲ್ಲಿ 31 ರನ್ಗಳಿಸಿ ಸೋಲು ತಪ್ಪಿಸಲು ನಡೆಸಿದ ಎಲ್ಲಾ ಪ್ರಯತ್ನವೂ ವಿಫಲವಾಯಿತು. ಕೊನೆಗೆ 91.3 ಓವರ್ಗಳಲ್ಲಿ 197ರನ್ಗಳಿಗೆ ಆಲೌಟ್ ಆಗುವ ಮೂಲಕ 185 ರನ್ಗಳಿಂದ ಸೋಲೊಪ್ಪಿಕೊಂಡಿತು.
-
England fought hard, but Australia were just too good.
— ICC (@ICC) September 8, 2019 " class="align-text-top noRightClick twitterSection" data="
A superb, dramatic final day ends with the tourists having won by 185 runs.#Ashes scorecard 👇https://t.co/zrb0K55IBc pic.twitter.com/ZH45ItuUxm
">England fought hard, but Australia were just too good.
— ICC (@ICC) September 8, 2019
A superb, dramatic final day ends with the tourists having won by 185 runs.#Ashes scorecard 👇https://t.co/zrb0K55IBc pic.twitter.com/ZH45ItuUxmEngland fought hard, but Australia were just too good.
— ICC (@ICC) September 8, 2019
A superb, dramatic final day ends with the tourists having won by 185 runs.#Ashes scorecard 👇https://t.co/zrb0K55IBc pic.twitter.com/ZH45ItuUxm
ಆಸ್ಟ್ರೇಲಿಯಾ ಪರ ಕಮ್ಮಿನ್ಸ್ 4 ವಿಕೆಟ್, ಹೆಜಲ್ವುಡ್ , ನಥನ್ ಲಯಾನ್ ತಲಾ ಎರಡು ವಿಕೆಟ್ ಪಡೆದರೆ, ಸ್ಟಾರ್ಕ್ ಹಾಗೂ ಲಾಬಸ್ಚಾಗ್ನೆ ಒಂದು ವಿಕೆಟ್ ಪಡೆದರು.
ಇದಕ್ಕು ಮೊದಲು ಬ್ಯಾಟಿಂಗ್ ನಡೆಸಿದ್ದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 497 ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ 186 ರನ್ಗಳಿಸಿ ಡಿಕ್ಲೇರ್ ಘೋಷಿಸಿಕೊಂಡಿತ್ತು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 301 ರನ್ಗಳಿಗೆ ಆಲೌಟ್ ಆಗಿತ್ತು.
ಮೊದಲ ಇನ್ನಿಂಗ್ಸ್ನಲ್ಲಿ 211 ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ 82 ರನ್ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಸ್ಟೀವ್ ಸ್ಮಿತ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.