ನವದೆಹಲಿ: ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಒಂದೇ ವರ್ಷದಲ್ಲಿ ಮೂರು ಬಾರಿ ತಮ್ಮ ತಂಡದ ನಾಯಕತ್ವ ಬದಲಿಸಿದೆ.
ವಿಶ್ವಕಪ್ಗೆ ಇನ್ನು ಎರಡು ತಿಂಗಳಿರುವಾಗ ಎಸಿಬಿ, 4 ವರ್ಷಗಳ ಕಾಲ ತಂಡದ ನಾಯಕರಾಗಿದ್ದ ಅಸ್ಗರ್ ಅಫ್ಘನ್ರನ್ನು ನಾಯಕತ್ವದಿಂದ ಕೆಳಗಿಳಿಸಿತ್ತು. ಬಳಿಕ ಏಕದಿನ ತಂಡಕ್ಕೆ ಯುವ ಆಲ್ರೌಂಡರ್ ಗುಲ್ಬುದ್ದೀನ್ ನೈಬ್, ಟಿ20ಗೆ ರಶೀದ್ ಖಾನ್ ಹಾಗೂ ಟೆಸ್ಟ್ ತಂಡಕ್ಕೆ ರಹ್ಮತ್ ಶಾ ಅವರಿಗೆ ನಾಯಕತ್ವದ ಹೊಣೆ ನೀಡಿತ್ತು. ಇದನ್ನು ತಂಡದ ಅನುಭವಿ ಆಟಗಾರರಾದ ರಶೀದ್ ಖಾನ್ ಹಾಗೂ ಮೊಹಮ್ಮದ್ ನಬಿ ಬಹಿರಂಗವಾಗಿ ಖಂಡಿಸಿದ್ದರು.
ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ ತಂಡ ತೀರಾ ಕಳಪೆ ಪ್ರದರ್ಶನ ತೋರಿದ ನಂತರ ಮೂರೂ ಮಾದರಿಯ ಕ್ರಿಕೆಟ್ಗೆ ಯುವ ಬೌಲರ್ ರಶೀದ್ ಖಾನ್ಗೆ ನಾಯಕತ್ವ ನೀಡಿತ್ತು. ಇದೀಗ ಮತ್ತೆ ವಿಂಡೀಸ್ ವಿರುದ್ಧದ ಸರಣಿಯಲ್ಲಿ ಟಿ20 ಬಿಟ್ಟು ಉಳಿದ ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿದೆ. ಇದಾದ ಬಳಿಕ, ಎಸಿಬಿ ಅಧ್ಯಕ್ಷ ಫರಾನ್ ಯುಸೆಫ್ಜಯ್ ಅವರು ಮಾಜಿ ನಾಯಕ ಅಸ್ಗರ್ ಅವರನ್ನೇ ನಾಯಕನಾಗಿ ಮರುನೇಮಕ ಮಾಡಿದ್ದಾರೆ.