ನವದೆಹಲಿ: ದೇಶದಲ್ಲಿ ದಿನಕಳೆದಂತೆ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾಗಲೆ ದಿನಕ್ಕೆ ಮೂರರಿಂದ ನಾಲ್ಕೂ ಸಾವಿರ ಹೊಸ ಸೋಂಕಿತರ ಹೆಚ್ಚಾಗುತ್ತಿದ್ದಾರೆ.
ಬೆಂಗಳೂರು, ಮುಂಬೈ ನಂತಹ ಬೃಹತ್ ನಗರಗಳಲ್ಲಿ ಕೊರೊನಾ ಪರೀಕ್ಷೆ ನಡೆಸಲು ಈಗಾಗಲೆ ಸರ್ಕಾರಿ ಕಚೇರಿಗಳು, ಮದುವೆ ಛತ್ರಗಳು, ಶಾಲಾ ಕಾಲೇಜುಗಳು,ಲಾಡ್ಜ್ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದೀಗ ಆ ಪಟ್ಟಿಗೆ ಕ್ರಿಕೆಟ್ ಸ್ಟೇಡಿಯಂಗಳು ಸೇರಿವೆ.
ಇತ್ತೀಚೆಗಷ್ಟೆ ಮುಂಬೈನಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಬೆನ್ನಲ್ಲೆ ಪ್ರಸ್ತಿದ್ಧ ವಾಂಖೆಡೆ ಕ್ರೀಡಾಂಗಣವನ್ನು ಕ್ವಾರಂಟೈನ್ ಕೇಂದ್ರವನ್ನಾಗಿ ಬೃಹತ್ ಮುಂಬೈ ನಗರಪಾಲಿಕೆ ಅಲ್ಲಿ ಪರೀಕ್ಷಾ ಕೇಂದ್ರವಾಗಿ, ಸೋಂಕಿನ ಗುಣಲಕ್ಷಣಗಳುಳ್ಳವರಿಗೆ ಕ್ವಾರಂಟೈನ್ ಕೇಂದ್ರವಾಗಿ ಬಳಸಿಕೊಳ್ಳುತ್ತಿದೆ.
ಇದೀಗ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ಕೂಡ ಕೋವಿಡ್-19 ಸೆಂಟರ್ ಆಗಿ ಬದಲಾಗಿದೆ. ಕ್ರೀಡಾಂಗಣದ ಆವರಣದಲ್ಲಿ ತವರಿಗೆ ಮರಳಲು ಸಿದ್ದರಾಗಿರುವ ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದ ವಲಸೆ ಕಾರ್ಮಿಕರನ್ನು ಪರೀಕ್ಷಿಸಲು ಬಳಸಲಾಗುತ್ತಿದೆ.
ಈಗಾಗಲೆ ನಾಲ್ಕನೇ ಲಾಕ್ಡೌನ್ನಲ್ಲಿ ಕಾರ್ಮಿಕರನ್ನು ಬಸ್ಸು ಮತ್ತು ರೈಲುಗಳ ಮೂಲಕ ಅವರ ತವರಿಗೆ ತಲುಪಿಸು ಕಾರ್ಯಕ್ಕೆ ಪ್ರಮುಖ ರಾಜ್ಯಗಳ ಸರ್ಕಾರಗಳು ಮುಂದಾಗಿದೆ. ಹಾಗೆಯೇ ದೆಹಲಿ ಸರ್ಕಾರ ಕೂಡ ಈ ಕಾರ್ಯಕ್ಕೆ ಮುಂದಾಗಿದೆ.