ಚೆನ್ನೈ: ಮುಂಬೈನಲ್ಲಿ ನಡೆದ 73ನೇ ಪೊಲೀಸ್ ಆಹ್ವಾನ ಶೀಲ್ಡ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಲ್ರೌಂಡ್ ಆಟದ ಮೂಲಕ ಗಮನ ಸೆಳೆದಿದ್ದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮಗ ಕೊನೆಗೂ ಐಪಿಎಲ್ನಲ್ಲಿ ಹರಾಜಾಗಿದ್ದಾರೆ.
-
Arjun Tendulkar joins @mipaltan for INR 20 Lac. @Vivo_India #IPLAuction
— IndianPremierLeague (@IPL) February 18, 2021 " class="align-text-top noRightClick twitterSection" data="
">Arjun Tendulkar joins @mipaltan for INR 20 Lac. @Vivo_India #IPLAuction
— IndianPremierLeague (@IPL) February 18, 2021Arjun Tendulkar joins @mipaltan for INR 20 Lac. @Vivo_India #IPLAuction
— IndianPremierLeague (@IPL) February 18, 2021
ಓದಿ: ಐಪಿಎಲ್ ಹರಾಜಿನ ಮೇಲೆ ಕಣ್ಣು: ಒಂದೇ ಓವರ್ನಲ್ಲಿ ಐದು ಸಿಕ್ಸರ್ ಸಿಡಿಸಿದ ಅರ್ಜುನ್!
ಅರ್ಜುನ್ ತೆಂಡೂಲ್ಕರ್ ಎ ಗುಂಪಿನ ಪಂದ್ಯದಲ್ಲಿ ಕೇವಲ 31 ಎಸೆತಗಳಲ್ಲಿ ಅಜೇಯ 77 ರನ್ ಹಾಗೂ ಮೂರು ವಿಕೆಟ್ ಪಡೆದು ಮಿಂಚಿದ್ದರು. ಜತೆಗೆ ಒಂದೇ ಓವರ್ನಲ್ಲಿ ಐದು ಸಿಕ್ಸರ್ ಸಿಡಿಸಿ, ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆದಿದ್ದರು. ಮುಂಬೈನ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲೂ ಆಡುವ ಮೂಲಕ ಹಿರಿಯರ ತಂಡಕ್ಕೆ ಪದಾರ್ಪಣೆ ಮಾಡಿದ್ದ ಅರ್ಜುನ್ ತೆಂಡೂಲ್ಕರ್, ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನ ಹರಾಜು ಪ್ರಕ್ರಿಯೆಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿಸಿಕೊಂಡಿದ್ದರು.
20 ಲಕ್ಷ ರೂ. ಮೂಲ ಬೆಲೆ ಘೋಷಣೆ ಮಾಡಿಕೊಂಡಿದ್ದ ಅರ್ಜುನ್ ತೆಂಡೂಲ್ಕರ್ಗೆ ಮುಂಬೈ ಇಂಡಿಯನ್ಸ್ ಅಷ್ಟೇ ಹಣ ನೀಡಿ ಖರೀದಿ ಮಾಡಿದೆ.