ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಅವರ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಮನೆಯ ಮುಂದೆ ಕ್ರಿಕೆಟ್ ಆಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ಕೊರೊನಾ ಲಾಕ್ಡೌನ್ನಿಂದ ಕ್ರಿಕೆಟ್ನಿಂದ ಕಳೆದ ಮೂರು ತಿಂಗಳಿನಿಂದ ದೂರವಿರುವ ವಿರಾಟ್ ಇಂದು ತಮ್ಮ ಮನೆಯ ಮುಂದೆಯೇ ಪತ್ನಿಯೊಂದಿಗೆ ಕ್ರಿಕೆಟ್ ಆಡಿದ್ದಾರೆ.
-
Finally after soo much long time saw Virat Batting 🥳
— Virarsh (@Cheeku218) May 15, 2020 " class="align-text-top noRightClick twitterSection" data="
Virat Anushka playing cricket in building today🥳
Anushka bowls a Bouncer to Virat😂#ViratKohli #AnushkaSharma #Cricket pic.twitter.com/XFmfs3hiBt
">Finally after soo much long time saw Virat Batting 🥳
— Virarsh (@Cheeku218) May 15, 2020
Virat Anushka playing cricket in building today🥳
Anushka bowls a Bouncer to Virat😂#ViratKohli #AnushkaSharma #Cricket pic.twitter.com/XFmfs3hiBtFinally after soo much long time saw Virat Batting 🥳
— Virarsh (@Cheeku218) May 15, 2020
Virat Anushka playing cricket in building today🥳
Anushka bowls a Bouncer to Virat😂#ViratKohli #AnushkaSharma #Cricket pic.twitter.com/XFmfs3hiBt
ಇಂಟರ್ನೆಟ್ನಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ಮೊದಲು ಕೊಹ್ಲಿ ಬೌಲಿಂಗ್ ಮಾಡಿದ್ದು, ಅನುಷ್ಕಾ ಬ್ಯಾಟಿಂಗ್ ನಡೆಸಿದ್ದಾರೆ. ನಂತರ ಕೊಹ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಈ ವೇಳೆ ಅನುಷ್ಕಾ ಬೌನ್ಸರ್ ಎಸೆದಿದ್ದು, ಕೊಹ್ಲಿ ಡಿಫೆನ್ಸ್ ಆಡುವ ಮೂಲಕ ಬೌನ್ಸರ್ ತಡೆದಿದ್ದಾರೆ. ಇವರಿಬ್ಬರ ಜೊತೆಗೆ ಫೀಲ್ಡಿಂಗ್ ಹಾಗೂ ಕೀಪಿಂಗ್ಅನ್ನು ವ್ಯಕ್ತಿಯೊಬ್ಬ ನಿರ್ವಹಿಸಿತ್ತಿರುವುದು ವಿಡಿಯೋದಲ್ಲಿ ಇದೆ.
ವರದಿಗಳ ಪ್ರಕಾರ ಬಿಸಿಸಿಐ ಕ್ರಿಕೆಟಿಗರಿಗೆ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಆಯೋಜಿಸಿದೆ. ಆದರೆ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮುಂಬೈನಲ್ಲಿ ವಾಸಿಸುತ್ತಿರುವುದರಿಂದ ಅಲ್ಲಿನ ಸರ್ಕಾರ ಲಾಕ್ಡೌನ್ ಮುಂದುವರೆಸಿದ್ದು, ಅವರು ತರಬೇತಿಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ತಿಳಿದುಬಂದಿದೆ.
ಇನ್ನು ಟೀಂ ಇಂಡಿಯಾ ಮಾರ್ಚ್ ಮೊದಲ ವಾರದಲ್ಲಿ ಕಿವೀಸ್ ವಿರುದ್ಧ ಕೊನೆಯ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವಾಡಿತ್ತು.