ETV Bharat / sports

ಕೊಹ್ಲಿ ವಿರುದ್ಧ ಹೋರಾಟಕ್ಕೆ ಉತ್ಸುಕರಾಗಿದ್ದಾರೆ ಈ 600 ವಿಕೆಟ್‌ಗಳ​ ಸರದಾರ - ವಿರಾಟ್​ ಕೊಹ್ಲಿ ಆ್ಯಂಡರ್ಸನ್​ ಪೈಪೋಟಿ

"ನಾನು ಅವರ ವಿರುದ್ಧ 2014ರಲ್ಲಿ ಯಶಸ್ವಿಯಾಗಿದ್ದೆ. ಆದರೆ 2018ರಲ್ಲಿ ನಂಬಲಸಾಧ್ಯವಾದ ಬ್ಯಾಟ್ಸ್​ಮನ್​ ಆಗಿ ಅವರು ಕಮ್​ಬ್ಯಾಕ್​​ ಮಾಡಿದ್ದರು" ಎಂದು ಟೆಸ್ಟ್​ ಕ್ರಿಕೆಟ್​ನಲ್ಲಿ ಗರಿಷ್ಠ ವಿಕೆಟ್​ ಪಡೆದಿರುವ ಈ ವೇಗದ ಬೌಲರ್​ ಹೇಳಿದ್ದಾರೆ.

ವಿರಾಟ್​ ಕೊಹ್ಲಿ - ಜೇಮ್ಸ್ ಆ್ಯಂಡರ್ಸನ್​
ವಿರಾಟ್​ ಕೊಹ್ಲಿ - ಜೇಮ್ಸ್ ಆ್ಯಂಡರ್ಸನ್​
author img

By

Published : Aug 30, 2020, 3:27 PM IST

ಲಂಡನ್​: ಪಾಕಿಸ್ತಾನ ವಿರುದ್ಧದ ಟೆಸ್ಟ್​ ಸರಣಿಯಲ್ಲಿ 600 ವಿಕೆಟ್​ ಪಡೆದು ದಾಖಲೆ ಬರೆದಿದ್ದ ಜೇಮ್ಸ್​ ಆ್ಯಂಡರ್ಸನ್​ ಇಂಗ್ಲೆಂಡ್​ ತಂಡ ಮುಂದಿನ ವರ್ಷಾರಂಭದಲ್ಲಿ ಭಾರತ ಪ್ರವಾಸ ಕೈಗೊಂಡಾಗ ವಿರಾಟ್​ ಕೊಹ್ಲಿ ಅವರನ್ನು ಎದುರಿಸಲು ಉತ್ಸುಕನಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ.

ಕೆಲ ವರ್ಷಗಳಿಂದ ಕೊಹ್ಲಿ ಹಾಗೂ ಆ್ಯಂಡರ್ಸನ್​ ನಡುವೆ ತೀವ್ರವಾದಕಾದಾಟ ನಡೆಯುತ್ತಿದೆ. ಇಂಗ್ಲೆಂಡ್ ನೆಲದಲ್ಲಿ ಆ್ಯಂಡರ್ಸನ್​ ಪ್ರಾಬಲ್ಯ ಸಾಧಿಸಿದರೆ, ಭಾರತದಲ್ಲಿ ಕೊಹ್ಲಿ ಕಿಂಗ್​ ಆಗಿದ್ದಾರೆ. ಆದರೆ ಕೊಹ್ಲಿ 2018ರ ಸರಣಿಯಲ್ಲಿ ಇಂಗ್ಲೆಂಡ್​ ನೆಲದಲ್ಲೂ ಅದ್ಭುತ ಪ್ರದರ್ಶನ ತೋರಿದ್ದರು. ಇದೀಗ 2021 ಆರಂಭದಲ್ಲಿ ಇಂಗ್ಲೆಂಡ್​ ತಂಡ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಕೊಹ್ಲಿ ವಿರುದ್ಧ ಕಠಿಣ ಪೈಪೋಟಿಗೆ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

ವಿರಾಟ್​ ಕೊಹ್ಲಿ - ಜೇಮ್ಸ್ ಆ್ಯಂಡರ್ಸನ್​
ಜೇಮ್ಸ್ ಆ್ಯಂಡರ್ಸನ್​-ವಿರಾಟ್​ ಕೊಹ್ಲಿ

"ಅಂತಹ ಗುಣಮಟ್ಟವುಳ್ಳ ಬ್ಯಾಟ್ಸ್​ಮನ್​ಗೆ ಬೌಲಿಂಗ್​ ಮಾಡುವುದು ಕಷ್ಟ. ಇದೊಂದು ಕಠಿಣವಾದ ಯುದ್ಧ ವಾಗಿದ್ದರೂ, ಅದನ್ನು ನಾನು ಆನಂದಿಸುತ್ತೇನೆ. ಏಕೆಂದರೆ ನೀವು ಯಾವಾಗಲೂ ಉತ್ತಮ ಬ್ಯಾಟ್ಸ್​ಮನ್‌ಗಳನ್ನು ಔಟ್​ ಮಾಡಲು ಬಯಸುತ್ತೀರ" ಎಂದು ಬ್ರಿಟಿಷ್​ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

2014ರಲ್ಲಿ ಭಾರತ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಆ್ಯಂಡರ್ಸನ್ ಕೊಹ್ಲಿಯನ್ನು ತುಂಬಾ ಕಾಡಿದ್ದರು. ಬಲಗೈ ವೇಗಿ ನಾಲ್ಕು ಬಾರಿ ಭಾರತದ ನಾಯಕನನ್ನು ಔಟ್​ ಮಾಡಿದ್ದರು. ಆ ಸರಣಿಯಲ್ಲಿ ಕೊಹ್ಲಿ ತಮ್ಮ 10 ಇನ್ನಿಂಗ್ಸ್‌ಗಳಲ್ಲಿ ಕೇವಲ 134 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಆದರೆ ಕೊಹ್ಲಿ 2018ರ ಪ್ರವಾಸದಲ್ಲಿ ಸಂಪೂರ್ಣವಾಗಿ ವಿಭಿನ್ನ ಬ್ಯಾಟ್ಸ್‌ಮನ್‌ ಆಗಿ ಮರಳಿದ್ದಾರೆ. ಅವರು ಆ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್​ಗಳಿಸಿದ ಬ್ಯಾಟ್ಸ್​ಮನ್ ಕೂಡಾ ಹೌದು. ಎರಡು ಶತಕ ಮತ್ತು ಮೂರು ಅರ್ಧಶತಕಗಳೊಂದಿಗೆ 593 ರನ್ ಗಳಿಸಿ ಗಮನ ಸೆಳೆದಿದ್ದರು.

ವಿರಾಟ್​ ಕೊಹ್ಲಿ - ಜೇಮ್ಸ್ ಆ್ಯಂಡರ್ಸನ್​
ವಿರಾಟ್​ ಕೊಹ್ಲಿ - ಜೇಮ್ಸ್ ಆ್ಯಂಡರ್ಸನ್​

2014 ಹಾಗೂ 2018ರಲ್ಲಿ ಕೊಹ್ಲಿಯಲ್ಲಿ ಕಂಡ ಬದಲಾವಣೆಗಳ ಬಗ್ಗೆ ವಿವರಿಸಿದ ಆ್ಯಂಡರ್ಸನ್​, "2019ರಲ್ಲಿ ಕೆಲವು ಕಠಿಣ ಎಸೆತಗಳನ್ನು ತಪ್ಪಿಸಿಕೊಳ್ಳುವಲ್ಲಿ ಅವರು ವಿಶೇಷ ಕೌಶಲ ಪ್ರದರ್ಶಿಸಿದರು. ಅದೇ ರೀತಿ ಲೆಗ್ಸ್​ನಲ್ಲಿ ಬಲಿಷ್ಟವಾಗಿದ್ದರಿಂದ ತುಂಬಾ ಸುಲಭವಾಗಿ ರನ್​ ಗಳಿಸುತ್ತಿದ್ದರು" ಎಂದು ಜಿಮ್ಮಿ ತಾವು ಕಂಡ ವ್ಯತ್ಯಾಸಗಳನ್ನು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.