ETV Bharat / sports

ಐಸಿಸಿಯ ಬೌಂಡರಿ ನಿಯಮ ಟ್ರೋಲ್​ ಮಾಡಿದ ಬಿಗ್​ಬಿ; ಅಮಿತಾಬ್​ ಲೆಕ್ಕಾಚಾರ ಹೇಗಿದೆ ನೋಡಿ?

ವಿಶ್ವಕಪ್​ ಫೈನಲ್​ನಲ್ಲಿ ಇಂಗ್ಲೆಂಡ್​ ತಂಡವನ್ನು ಬೌಂಡರಿಗಳ ಆಧಾರದ ಮೇಲೆ ವಿನ್ನರ್​ ಎಂದು ಘೋಷಿಸಿರುವ ಐಸಿಸಿ ನಿಯಮದ ವಿರುದ್ಧ ಮಾಜಿ ಕ್ರಿಕೆಟರ್​ಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಬಾಲಿವುಡ್​ ನಟ ಅಮಿತಾಬ್​ ಬಚ್ಚನ್​ ಐಸಿಸಿ ನಿಯಮವನ್ನು ತಮಾಷೆಯಾಗಿ ಟ್ರೋಲ್​ ಮಾಡಿದ್ದಾರೆ.

author img

By

Published : Jul 16, 2019, 1:15 PM IST

ಅಮಿತಾಬ್​

ಮುಂಬೈ: ವಿಶ್ವಕಪ್​ ಫೈನಲ್​ನಲ್ಲಿ ಇಂಗ್ಲೆಂಡ್​ ತಂಡವನ್ನು ಬೌಂಡರಿಗಳ ಆಧಾರದ ಮೇಲೆ ವಿನ್ನರ್​ ಎಂದು ಘೋಷಿಸಿರುವ ಐಸಿಸಿ ನಿಯಮದ ವಿರುದ್ಧ ಅನೇಕ ಮಾಜಿ ಕ್ರಿಕೆಟರ್​ಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಬಾಲಿವುಡ್​ ನಟ ಅಮಿತಾಬ್​ ಬಚ್ಚನ್​ ಐಸಿಸಿಯ ನಿಯಮವನ್ನು ತಮಾಷೆಯಾಗಿ ಟ್ರೋಲ್​ ಮಾಡಿದ್ದಾರೆ.

ಫೈನಲ್​ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ್ದ ನ್ಯೂಜಿಲ್ಯಾಂಡ್​ 241 ರನ್ ​ಗಳಿಸಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್​ ಕೂಡ 241 ರನ್​ಗಳಿಸಿತು. ವಿಜೇತರಿಗಾಗಿ ಸೂಪರ್ ಓವರ್​ ಮೊರೆ ಹೋಗಲಾಯಿತಾದರೂ ಅಲ್ಲೂ ಕೂಡ ಎರಡೂ ತಂಡಗಳು 15 ರನ್ ​ಗಳಿಸಿದವು. ಕೊನೆಗೆ ಐಸಿಸಿ ನಿಯಮದ ಪ್ರಕಾರ, ಹೆಚ್ಚು ಬೌಂಡರಿಗಳಿಸಿದ ಇಂಗ್ಲೆಂಡ್ ತಂಡವನ್ನು ವಿಜೇತ ತಂಡವಾಗಿ ಘೋಷಿಸಲಾಯಿತು.

  • T 3227 - आपके पास 2000 रूपये, मेरे पास भी 2000 रुपये,
    आपके पास 2000 का एक नोट, मेरे पास 500 के 4 ...
    कौन ज्यादा अमीर???

    ICC - जिसके पास 500 के 4 नोट वो ज्यादा रईस.. #Iccrules😂😂🤣🤣
    प्रणाम गुरुदेव
    Ef~NS

    — Amitabh Bachchan (@SrBachchan) July 15, 2019 " class="align-text-top noRightClick twitterSection" data=" ">

ಈ ವಿಚಾರವನ್ನು ಟ್ರೋಲ್​ ಮಾಡಿರುವ ಅಮಿತಾಬ್​, ನಿಮ್ಮ ಹತ್ತಿರ 2,000 ರೂಪಾಯಿ ಇದೆ, ನನ್ನ ಹತ್ತಿರ 2,000 ಇದೆ. ಆದರೆ ನಿಮ್ಮ ಹತ್ತಿರ 2,000 ರೂಪಾಯಿಯ ಒಂದು ನೋಟಿದೆ. ನನ್ನ ಹತ್ತಿರ 500 ರೂಪಾಯಿಯ 4 ನೋಟುಗಳಿವೆ. ಹಾಗಾಗಿ ಯಾರ ಬಳಿ ಹೆಚ್ಚು ದುಡ್ಡಿದೆ? ಎಂದು ಪ್ರಶ್ನೆ ಮಾಡಿದ್ದಾರೆ.

500 ರೂಗಳ ನಾಲ್ಕು ನೋಟು ಹೊಂದಿರುವವರ ಬಳಿ ಹೆಚ್ಚು ದುಡ್ಡಿದೆ ಎಂಬುದು ಐಸಿಸಿ ಲೆಕ್ಕಾಚಾರ ಎಂದು ಟ್ವೀಟ್​ ಮಾಡುವ ಮೂಲಕ ಐಸಿಸಿ ಕಾಲೆಳೆದಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.