ETV Bharat / sports

'ಡ್ಯಾಡೀಸ್​​ ಆರ್ಮಿ' ಸೇರಿದ ಮತ್ತೊಬ್ಬ ಸಿಎಸ್​ಕೆ ಆಟಗಾರ: ರಾಯುಡು ದಂಪತಿಗೆ ಹೆಣ್ಣು ಮಗು ಜನನ

ರಾಯುಡು ತಂದೆಯಾದ ವಿಚಾರವನ್ನು ಸಿಎಸ್​ಕೆ ತನ್ನ ಅಧಿಕೃತ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದೆ. ಅಪ್ಪನಾಗಿರುವ ಸಂಭ್ರಮದಲ್ಲಿರುವ ರಾಯುಡುಗೆ ಭಾರತದ ಕ್ರಿಕೆಟಿಗರು ಶುಭಾಶಯ ಕೋರಿದ್ದಾರೆ.

ಅಂಬಾಟಿ ರಾಯುಡು-ಸಿಎಸ್​ಕೆ
ಅಂಬಾಟಿ ರಾಯುಡು-ಸಿಎಸ್​ಕೆ
author img

By

Published : Jul 13, 2020, 2:03 PM IST

ಹೈದರಾಬಾದ್​: ಭಾರತದ ಆಟಗಾರ ಅಂಬಾಟಿ ರಾಯುಡು ಹಾಗೂ ಚೆನ್ನಪಲ್ಲಿ ವಿದ್ಯಾ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ರಾಯುಡು ಕೂಡ ಸಿಎಸ್​ಕೆಯ ಡ್ಯಾಡ್ಸ್​ ಆರ್ಮಿ ಸೇರಿಕೊಂಡಿದ್ದಾರೆ. ಈಗಾಗಲೆ ಚೆನ್ನೈ ಸೂಪರ್​ ಕಿಂಗ್ಸ್​ನಲ್ಲಿರುವ ಧೋನಿ, ರೈನಾ, ಬ್ರಾವೋ, ಪ್ಲೆಸಿಸ್​, ಇಮ್ರಾನ್​ ತಾಹೀರ್​, ಹರ್ಭಜನ್​ ಸಿಂಗ್​, ವ್ಯಾಟ್ಸ್​​ನ್​​ ಸೇರಿದಂತೆ ತಂಡದಲ್ಲಿ ಹೆಚ್ಚಿನ ಆಟಗಾರರು ತಂದೆಯಾಗಿದ್ದಾರೆ.

ರಾಯುಡು ತಂದೆಯಾದ ವಿಚಾರವನ್ನು ಸಿಎಸ್​ಕೆ ತನ್ನ ಅಧಿಕೃತ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದೆ. ಅಪ್ಪನಾಗಿರುವ ಸಂಭ್ರಮದಲ್ಲಿರುವ ರಾಯುಡುಗೆ ಭಾರತದ ಕ್ರಿಕೆಟಿಗರು ಶುಭಾಶಯ ಕೋರಿದ್ದಾರೆ.

ಕಳೆದ ಎರಡು ಆವೃತ್ತಿಗಳಿಂದ ಚೆನ್ನೈ ಸೂಪರ್​ ಕಿಂಗ್ಸ್​ನಲ್ಲಿ ಆಡುತ್ತಿರುವ ರಾಯುಡು ಒಂದು ಆವೃತ್ತಿಯಲ್ಲಿ ಭರ್ಜರಿ ಆಟವಾಡಿ ಎಲ್ಲರ ಗಮನ ಸೆಳೆದಿದ್ದರು. ಆದರೆ, 2019ರಲ್ಲಿ ಅವರ ಆಟ ಮಂಕಾಗಿತ್ತು. ಅದೇ ಸಂದರ್ಭದಲ್ಲಿ ವಿಶ್ವಕಪ್​ ತಂಡದಿಂದಲೂ ಹೊರಬಿದ್ದಿದ್ದರು. ಇದಾದ ನಂತರ ಕ್ರಿಕೆಟ್​ಗೆ ಗುಡ್​ಬೈ ಹೇಳಿದ್ದ ಅವರು ಮತ್ತೆ ನಿವೃತ್ತಿಯಿಂದ ಹೊರ ಬಂದಿದ್ದರು.

2020ರ ಐಪಿಎಲ್​ನಲ್ಲಿ ಮತ್ತೆ ಉತ್ತಮ ಪ್ರದರ್ಶನ ತೋರಿ ಭಾರತ ತಂಡಕ್ಕೆ ಮರಳುವ ಆಲೋಚನೆಯಲ್ಲಿದ್ದ ರಾಯುಡು ಕೋವಿಡ್​ 19 ಅಡ್ಡಗಾಲಾಗಿ ಪರಿಣಮಿಸಿದೆ. ನವೆಂಬರ್​ನಲ್ಲಿ ಐಪಿಎಲ್​ ಆಯೋಜನೆಗೊಳ್ಳುವ ಸಾಧ್ಯತೆಯಿದ್ದು ಈ ಟೂರ್ನಿ ಆಂಧ್ರ ಆಟಗಾರನಿಗೆ ಮಹತ್ವದ್ದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.