ನವದೆಹಲಿ: ವಿಸ್ಡ್ನ್ ಕ್ರಿಕೆಟ್ ಮಾಸಿಕದ ಹೊಸ ಸಂಚಿಕೆಯಲ್ಲಿನ ವಿಶ್ಲೇಷಣೆಯು ರವೀಂದ್ರ ಜಡೇಜಾರನ್ನು 21ನೇ ಶತಮಾನದ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಅತ್ಯಮೂಲ್ಯ ಆಟಗಾರ ಎಂದು ತಿಳಿಸಿದೆ.
ಕ್ರಿಕ್ವಿಜ್ ವಿಶ್ಲೇಷಣೆಯನ್ನು ಆಧರಿಸಿ, ವಿಶ್ವದ ಪ್ರತಿಯೊಬ್ಬ ಕ್ರಿಕೆಟಿಗನ ಪಂದ್ಯದ ಮೇಲೆ ಇತರೆ ಆಟಗಾರರಿಗಿಂತ ಹೊಂದಿರುವ ಪ್ರಭಾವ ಹಾಗೂ ಆಂಕಿ ಅಂಶಗಳನ್ನು ಆಧರಿಸಿ ಎಂವಿಪಿ(ಮೋಸ್ಟ್ ವ್ಯಾಲ್ಯೂಬಲ್ ಪ್ಲೇಯರ್) ಶ್ರೇಯಾಂಕವನ್ನು ನೀಡಲಾಗುತ್ತದೆ. ಭಾರತದ ಸ್ಪಿನ್ ಬೌಲಿಂಗ್ ಆಲ್ರೌಂಡರ್ ರವೀಂದ್ರ ಜಡೇಜಾ ಅವರನ್ನು ಭಾರತದ ನಂಬರ್ ಒನ್ ಆಗಿ ನೋಡಿದರೆ ಆಶ್ಚರ್ಯವಾಗಬಹುದು ಎಂದು ಕ್ರಿಕ್ವಿಜ್ನ ಫ್ರೆಡ್ಡಿ ವೈಲ್ಡ್ ಹೇಳಿದ್ದಾರೆ.
-
Not Kohli, not Dravid, not Tendulkar, but Ravindra Jadeja. Surprised?https://t.co/qtM8CKq2uF
— Wisden (@WisdenCricket) June 30, 2020 " class="align-text-top noRightClick twitterSection" data="
">Not Kohli, not Dravid, not Tendulkar, but Ravindra Jadeja. Surprised?https://t.co/qtM8CKq2uF
— Wisden (@WisdenCricket) June 30, 2020Not Kohli, not Dravid, not Tendulkar, but Ravindra Jadeja. Surprised?https://t.co/qtM8CKq2uF
— Wisden (@WisdenCricket) June 30, 2020
ಏಕೆಂದರೆ ಜಡೇಜಾ ಅವರು ಭಾರತ ತಂಡದ ಖಾಯಂ ಟೆಸ್ಟ್ ಆಟಗಾರನಾಗಿಲ್ಲ. ಆದರೂ ಅವರು ಆಡುವಾಗ ಅವರನ್ನು ಮಂಚೂಣಿ ಬೌಲರ್ ಆಗಿ ಆಯ್ಕೆ ಮಾಡಲಾಗುತ್ತದೆ. ಮತ್ತು 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಉಪಯುಕ್ತ ಕೊಡುಗೆ ನೀಡಿರುವುದು ಅವರು 21ನೇ ಶತಮಾನದ ಭಾರತದ ಅತ್ಯಮೂಲ್ಯ ಟೆಸ್ಟ್ ಆಟಗಾರನಾಗಿರುವುದಕ್ಕೆ ಕಾರಣವಾಗಿದೆ.
31 ವರ್ಷದ ಆಲ್ರೌಂಡರ್ 24.62 ಬೌಲಿಂಗ್ ಸರಾಸರಿ ಹೊಂದಿದ್ದು, ಆಸ್ಟ್ರೇಲಿಯಾದ ಶೇನ್ವಾರ್ನ್ಗಿಂತ ಉತ್ತಮವಾಗಿದೆ. 35.26 ಬ್ಯಾಟಿಂಗ್ ಸರಾಸರಿ ಹೊಂದಿರುವ ಅವರು ಶೇನ್ವಾಟ್ಸನ್ ಅವರಿಗೆ ಉತ್ತಮ ಎನಿಸಿಕೊಂಡಿದ್ದಾರೆ.
ಅವರ ಬ್ಯಾಟಿಂಗ್ ಮತ್ತು ಬೌಲಿಂಗ್ ಸರಾಸರಿ 10.62 ರನ್ ಡಿಫರೆನ್ಸಿಯಲ್ ಇದೆ. ಇವರು ಈ ಶತಮಾನದಲ್ಲಿ 1000ಕ್ಕೂ ಹೆಚ್ಚು ರನ್ ಗಳಿಸಿ 150 ವಿಕೆಟ್ ಪಡೆದಿರುವ ಎರಡನೇ ಆಟಗಾರ. ಅಲ್ಲದೆ ಅತ್ಯುನ್ನತ ಗುಣಮಟ್ಟದ ಆಲ್ರೌಂಡರ್ ಎಂದು ಫ್ರೆಡ್ಡಿ ಬಣ್ಣಿಸಿದ್ದಾರೆ.