ದುಬೈ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 3 ಪಂದ್ಯಗಳಿಂದ ಬರೋಬ್ಬರಿ 27 ವಿಕೆಟ್ ಪಡೆದಿದ್ದ ಅಕ್ಷರ್ ಪಟೇಲ್ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲೂ ಅದ್ವಿತೀಯ ಸಾಧನೆ ಮಾಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ರವೀಂದ್ರ ಜಡೇಜ ಅವರ ಬದಲಿಗೆ ಅವಕಾಶ ಪಡೆದಿದ್ದ ಅಕ್ಷರ್ ಪಟೇಲ್ ತಮಗೆ ಸಿಕ್ಕ ಅವಕಾಶವನ್ನು ಬಾಚಿಕೊಂಡಿದ್ದಾರೆ. ಅದರಲ್ಲೂ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯದಲ್ಲಿ 11 ವಿಕೆಟ್ ಪಡೆದಿದ್ದರು. ಅವರು ಇಡೀ ಟೂರ್ನಿಯಲ್ಲಿ 3 ಪಂದ್ಯಗಳಲ್ಲಿ 27 ವಿಕೆಟ್ ಪಡೆದಿದ್ದಾರೆ. 4 ಬಾರಿ 5 ವಿಕೆಟ್ ಸಾಧನೆ ಕೂಡ ಇದೆ.
ಇದೀಗ ಐಸಿಸಿ ಬುಧವಾರ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ 30ನೇ ಸ್ಥಾನ ಪಡೆದಿದ್ದಾರೆ. ಅವರು 552 ರೇಟಿಂಗ್ ಅಂಕ ಪಡೆಯುವ ಮೂಲಕ ಮೊದಲ ಮೂರು ಪಂದ್ಯಗಳಲ್ಲಿ ಅತಿ ಹೆಚ್ಚು ರೇಟಿಂಗ್ ಅಂಕ ಪಡೆದ ಮೂರನೇ ಹಾಗೂ ಭಾರತದ 2ನೇ ಬೌಲರ್ ಎನಿಸಿಕೊಂಡಿದ್ದಾರೆ.
ಈ ಹಿಂದೆ ಭಾರತದ ನರೇಂದ್ರ ಹಿರ್ವಾನಿ ತಮ್ಮ ಮೊದಲ 3 ಪಂದ್ಯಗಳಲ್ಲಿ 564 ಮತ್ತು ಆಸ್ಟ್ರೇಲಿಯಾದ ಚಾರ್ಲಿ ಟರ್ನರ್ 553 ಅಂಕ ಪಡೆದ ದಾಖಲೆ ಹೊಂದಿದ್ದರು.
ಇದನ್ನೂ ಓದಿ:ಐಸಿಸಿ ಟೆಸ್ಟ್ ರ‍್ಯಾಂಕಿಂಗ್: ಪಂತ್, ರೋಹಿತ್ ಶ್ರೇಷ್ಠ ಸಾಧನೆ, ಅಶ್ವಿನ್ಗೆ 2ನೇ ಸ್ಥಾನ