ಲಂಡನ್: ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಸಂಶಯಾಸ್ಪದ ಬೌಲಿಂಗ್ ಮಾಡಿದ ಸಂಬಂಧ ತನಿಖೆಗೆ ಗುರಿಯಾಗಿದ್ದ ಶ್ರೀಲಂಕಾ ಸ್ಪಿನ್ನರ್ ಅಕಿಲ ಧನಂಜಯ ಅವರಿಗೆ ಐಸಿಸಿ ಒಂದು ವರ್ಷ ನಿಷೇಧವೇರಿದೆ.
10 ತಿಂಗಳ ಅವಧಿಯಲ್ಲಿ ಎರಡು ಬಾರಿ ಶಂಕಾಸ್ಪದ ಬೌಲಿಂಗ್ ಮಾಡಿ ಸಿಕ್ಕಿಬಿದ್ದ ಹಿನ್ನಲೆಯಲ್ಲಿ ಧನಂಜಯ ಒಂದು ವರ್ಷ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಬೌಲಿಂಗ್ ಮಾಡದಂತೆ ಐಸಿಸಿಯಿಂದ ನಿಷೇಧದ ಶಿಕ್ಷೆಗೆ ಗುರಿಯಾಗಿದ್ದಾರೆ.
2018ರ ಆಗಸ್ಟ್ನಲ್ಲಿ ಚೆನ್ನೈನಲ್ಲಿ ಧನಂಜಯ ಬೌಲಿಂಗ್ ಶೈಲಿ ಹಾಗೂ ಕಳೆದ ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ನಲ್ಲಿ ಧನಂಜಯ ಐಸಿಸಿ ನಿಯಮವನ್ನು ಮುರಿದು ಸಂಶಯಾಸ್ಪದ ಬೌಲಿಂಗ್ ಮಾಡಿ ಸಿಕ್ಕಿಬಿದ್ದ ಹಿನ್ನಲೆ ಅವರ ವಿರುದ್ಧ ಐಸಿಸಿ ಕಠಿಣ ನಿಲುವು ತಳೆದಿದೆ. 12 ತಿಂಗಳ ನಿಷೇಧದ ಅವಧಿ ಮುಗಿದ ನಂತರ ಧನಂಜಯ ಅವರು ತಮ್ಮ ಬೌಲಿಂಗ್ನ ವಿಮರ್ಶೆಗಾಗಿ ಐಸಿಸಿಯನ್ನು ಸಂಪರ್ಕಿಸಬಹುದಾಗಿದೆ.
ಧನಂಜಯ ಏಕದಿನ ಕ್ರಿಕೆಟ್ನಲ್ಲಿ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಆದ್ದರಿಂದಲೇ ವಿಶ್ವಕಪ್ ತಂಡಕ್ಕೂ ಆಯ್ಕೆಯಾಗಿರಲಿಲ್ಲ. ಆದರೆ ಕಿವೀಸ್ ವಿರುದ್ಧದ ಗಾಲೆ ಟೆಸ್ಟ್ನಲ್ಲಿ ಕಿವೀಸ್ ವಿರುದ್ಧ 80 ರನ್ ನೀಡಿ 5 ವಿಕೆಟ್ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಟಿ20 ಸರಣಿಯಲ್ಲಿ 6 ವಿಕೆಟ್ ಪಡೆದು ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ 2ನೇ ಬೌಲರ್ ಎನಿಸಿಕೊಂಡಿದ್ದರು.
ಧನಂಜಯ 6 ಟೆಸ್ಟ್ ಪಂದ್ಯ, 36 ಎಕದಿನ ಹಾಗೂ 22 ಟಿ20 ಪಂದ್ಯಗಳಲ್ಲಿ ಶ್ರೀಲಂಕಾ ತಂಡವನ್ನು ಪ್ರತಿನಿಧಿಸಿದ್ದಾರೆ.
-
Sri Lanka bowler Akila Dananjaya has been banned from bowling in international cricket for 12 months.
— ICC (@ICC) September 19, 2019 " class="align-text-top noRightClick twitterSection" data="
FULL STORY ⬇️ https://t.co/3sXzaJIDuq
">Sri Lanka bowler Akila Dananjaya has been banned from bowling in international cricket for 12 months.
— ICC (@ICC) September 19, 2019
FULL STORY ⬇️ https://t.co/3sXzaJIDuqSri Lanka bowler Akila Dananjaya has been banned from bowling in international cricket for 12 months.
— ICC (@ICC) September 19, 2019
FULL STORY ⬇️ https://t.co/3sXzaJIDuq