ETV Bharat / sports

ಐಪಿಎಲ್​ ಆಯೋಜಿಸಲು ಲಂಕಾ, ಯುಎಇ ಬಳಿಕ ನ್ಯೂಜಿಲ್ಯಾಂಡ್ ಆಫರ್: ಬಿಸಿಸಿಐ ಉತ್ತರವೇನು ಗೊತ್ತಾ?

ಟಿ-20 ವಿಶ್ವಕಪ್ ಟೂರ್ನಿಯ ಬಗ್ಗೆ ಅಂತಿಮ ನಿರ್ಧಾರಕ್ಕಾಗಿ ಕಾಯುತ್ತಿರುವ ಬಿಸಿಸಿಐ ವಿದೇಶದಲ್ಲಿ 13ನೇ ಆವೃತ್ತಿಯ ಲೀಗ್​ಅನ್ನು ಆಯೋಜಿಸಲು ಮುಂದಾಗಿದೆ ಎಂಬ ಸುದ್ದಿ ಕಳೆದ ಒಂದು ವಾರದಿಂದ ಕೇಳಿ ಬರುತ್ತಿದೆ. ಇದಕ್ಕೆ ಯುಎಇ ಹಾಗೂ ಶ್ರೀಲಂಕಾ ಮಂಡಳಿಗಳು ಸಿದ್ದವಾಗಿದೆ ಎನ್ನಲಾಗಿತ್ತು.

author img

By

Published : Jul 7, 2020, 2:03 PM IST

New Zealand offers to host IPL
ಐಪಿಎಲ್​ 2020

ಮುಂಬೈ: ವಿಶ್ವ ಕ್ರಿಕೆಟ್​ನ ಶ್ರೀಮಂತ ಲೀಗ್ ಆಗಿರುವ ಐಪಿಎಲ್​ ಟೂರ್ನಿಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ಆಯೋಜಿಸುವುದು ಕಷ್ಟಸಾಧ್ಯವಾಗಿದೆ. ಆದರೆ, ಯುಎಇ ಹಾಗೂ ಶ್ರೀಲಂಕಾ ಕ್ರಿಕೆಟ್​ ಮಂಡಳಿಗಳು ತಮ್ಮ ದೇಶದಲ್ಲಿ ಐಪಿಎಲ್​ ನಡೆಸಿಕೊಡುವ ಆಫರ್​ ನೀಡಿದ್ದವು. ಇದೀಗ ಕೊರೊನಾ ಮುಕ್ತ ರಾಷ್ಟ್ರವಾಗಿರುವ ನ್ಯೂಜಿಲ್ಯಾಂಡ್​ ಕೂಡ ಐಪಿಎಲ್​ ಆಯೋಜಿಸಲು ತಾವು ಸಿದ್ದ ಎಂದು ಬಿಸಿಸಿಐಗೆ ಆಫರ್​ ನೀಡಿದೆ.

ಟಿ-20 ವಿಶ್ವಕಪ್ ಟೂರ್ನಿಯ ಬಗ್ಗೆ ಅಂತಿಮ ನಿರ್ಧಾರಕ್ಕಾಗಿ ಕಾಯುತ್ತಿರುವ ಬಿಸಿಸಿಐ ವಿದೇಶದಲ್ಲಿ 13ನೇ ಆವೃತ್ತಿಯ ಲೀಗ್ ​ಅನ್ನು ಆಯೋಜಿಸಲು ಮುಂದಾಗಿದೆ ಎಂಬ ಸುದ್ದಿ ಕಳೆದ ಒಂದು ವಾರದಿಂದ ಕೇಳಿಬರುತ್ತಿದೆ. ಇದಕ್ಕೆ ಯುಎಇ ಹಾಗೂ ಶ್ರೀಲಂಕಾ ಮಂಡಳಿಗಳು ಸಿದ್ದವಾಗಿದೆ ಎನ್ನಲಾಗಿತ್ತು.

ಇದೀಗ ಆ ಪಟ್ಟಿಗೆ ಕೊರೊನಾ ಮುಕ್ತ ರಾಷ್ಟ್ರವಾಗಿರುವ ಕಿವೀಸ್​ ಕ್ರಿಕೆಟ್​ ಮಂಡಳಿ ಕೂಡ ಐಪಿಎಲ್​​ ಆಯೋಜನೆ ಮಾಡಲು ಸಿದ್ದ ಇರುವುದಾಗಿ ತಿಳಿಸಿದೆ ಎಂದು ಬಿಸಿಸಿಐ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

ಆದರೆ, ಬಿಸಿಸಿಐ ಖಜಾಂಚಿ ಅರುಣ್​ ದುಮಾಲ್​ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಐಪಿಎಲ್ ನಡೆಸಲು ಭಾರತವೇ ಮೊದಲ ಆದ್ಯತೆಯಾಗಿದೆ. ಆದರೆ, ಕೊರೊನಾ ಪ್ರಕರಣಗಳು ಹೆಚ್ಚಿದ್ದರೆ, ವಿದೇಶಗಳಲ್ಲಿ ನಡೆಸುವ ಬಗ್ಗೆ ಆಲೋಚಿಸಲಾಗುವುದು. ಯುಎಇ ಹಾಗೂ ಶ್ರೀಲಂಕಾದ ಬಳಿಕ ನ್ಯೂಜಿಲ್ಯಾಂಡ್ ಸಹ ಆತಿಥ್ಯ ವಹಿಸಲು ಆಸಕ್ತಿ ತೋರಿದೆ ಎಂದು ಮಾಹಿತಿ ನೀಡಿದ್ದಾರೆ.

ಐಪಿಎಲ್​ ವಿದೇಶಗಳಲ್ಲಿ ನಡೆಸಲು ಆಲೋಚನೆ ಮಾಡುತ್ತಿರುವುದು ಇದೇ ಮೊದಲೇನಲ್ಲ. 2009ರಲ್ಲಿ ಲೋಕಸಭೆ ಚುನಾವಣೆ ಕಾರಣದಿಂದ ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಗಿತ್ತು. ನಂತರ 2014ರಲ್ಲೂ ಕೆಲವು ಪಂದ್ಯಗಳನ್ನು ಇದೇ ಕಾರಣದಿಂದ ಯುಎಇನಲ್ಲಿ ನಡೆಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.