ಹೈದರಾಬಾದ್: ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಟಿವೋನ್ ಕಾನ್ವೆ ಕೇವಲ 59 ಎಸೆತಗಳಲ್ಲಿ ಅಜೇಯ 99ರನ್ಗಳಿಕೆ ಮಾಡಿದ್ದು, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಇವರ ಆಟಕ್ಕೆ ಫಿದಾ ಆಗಿರುವ ಟೀಂ ಇಂಡಿಯಾ ಆಲ್ರೌಂಡರ್ ಆರ್.ಅಶ್ವಿನ್ ಟ್ವೀಟ್ ಮಾಡಿದ್ದು, Devon Conway is just 4 days late, but what a knock ಎಂದು ತಮ್ಮ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. 29 ವರ್ಷದ ನ್ಯೂಜಿಲ್ಯಾಂಡ್ ಕಾನ್ವೆ ಕಳೆದ ನಾಲ್ಕು ದಿನಗಳ ಹಿಂದೆ ನಡೆದ ಐಪಿಎಲ್ನಲ್ಲಿ ಅನ್ಸೋಲ್ಡ್ ಆಗಿದ್ದು, ಇದೇ ವಿಷಯವನ್ನಿಟ್ಟುಕೊಂಡು ಅಶ್ವಿನ್ ಇದೀಗ ಅವರ ಕಾಲೆಳೆದಿದ್ದಾರೆ.
-
Devon Conway is just 4 days late, but what a knock 👏👏👏 #AUSvNZ
— Ashwin 🇮🇳 (@ashwinravi99) February 22, 2021 " class="align-text-top noRightClick twitterSection" data="
">Devon Conway is just 4 days late, but what a knock 👏👏👏 #AUSvNZ
— Ashwin 🇮🇳 (@ashwinravi99) February 22, 2021Devon Conway is just 4 days late, but what a knock 👏👏👏 #AUSvNZ
— Ashwin 🇮🇳 (@ashwinravi99) February 22, 2021
ಓದಿ: ಮಿಂಚಿದ ಸೋಧಿ, ಕಾನ್ವೆ: ಟಿ-20 ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಆಸ್ಟ್ರೇಲಿಯಾಗೆ ಹೀನಾಯ ಸೋಲು
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ ಆರಂಭದಲ್ಲೇ ಗಫ್ಟಿಲ್(0),ಸೀಪರ್ಟ್(1) ವಿಕೆಟ್ ಕಳೆದುಕೊಳ್ತು. ಇದರ ಬೆನ್ನಲ್ಲೇ ಕ್ಯಾಪ್ಟನ್ ವಿಲಿಯಮ್ಸನ್(12)ರನ್ಗಳಿಸಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಈ ವೇಳೆ ಮೈದಾನಕ್ಕಿಳಿದ ಕಾನ್ವೆ ಕೇವಲ 59 ಎಸೆತಗಳಲ್ಲಿ 99ರನ್ಗಳಿಕೆ ಮಾಡಿದ್ರು. ಇದರಲ್ಲಿ 10 ಬೌಂಡರಿ ಹಾಗೂ ಮೂರು ಸಿಕ್ಸರ್ ಸೇರಿಕೊಂಡಿದ್ದವು.
ಇವರ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿಶಹಬ್ಬಾಸ್ಗಿರಿ ನೀಡಿರುವ ಅಶ್ವಿನ್, ಜಸ್ಟ್ 4ಡೇ ಲೇಟ್ ಆಯ್ತು ಎಂದು ಟ್ವೀಟ್ ಮಾಡಿದ್ದಾರೆ.ಅಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಭರ್ಜರಿ ಗೆಲುವು ದಾಖಲು ಮಾಡಿ, 1-0 ಅಂತರದ ಮುನ್ನಡೆ ಪಡೆದುಕೊಂಡಿದೆ.