ಢಾಕಾ: ಬಾಂಗ್ಲಾದೇಶದ ಆತಿಥ್ಯದಲ್ಲಿ ನಡೆಯುತ್ತಿರುವ ತ್ರಿಕೋನ ಟಿ-20 ಸರಣಿಯಲ್ಲಿ ಬಾಂಗ್ಲಾದೇಶ ತಂಡವನ್ನು 25 ರನ್‌ಗಳಿಂದ ಮಣಿಸುವ ಮೂಲಕ ಅಫ್ಘಾನಿಸ್ತಾನ ತಂಡ ಟಿ-20 ಕ್ರಿಕೆಟ್ನಲ್ಲಿ ಸತತ 12ನೇ ಗೆಲುವು ಸಾಧಿಸಿದೆ.
ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸರಣಿಯ 3ನೇ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ತಂಡವನ್ನು ಆಫ್ಘಾನ್ 25 ರನ್‌ಗಳಿಂದ ಮಣಿಸುವ ಮೂಲಕ ಈ ಹಿಂದೆ ಚುಟುಕು ಕ್ರಿಕೆಟ್ನಲ್ಲಿ ಸತತ 11 ಜಯ ಗಳಿಸಿದ್ದ ತನ್ನದೇ ದಾಖಲೆಯನ್ನು ಮುರಿದು ಸತತ 12 ನೇ ಗೆಲುವು ದಾಖಲಿಸಿ ವಿಶ್ವ ದಾಖಲೆ ಬರೆದಿದೆ.
-
Congratulations!
— Afghanistan Cricket Board (@ACBofficials) September 15, 2019 " class="align-text-top noRightClick twitterSection" data="
12th consecutive win in T20Is for Afghanistan as they beat @BCBtigers by 25 runs in Dhaka. #AFGvBAN #Triseries pic.twitter.com/LCeEdZkYhz
">Congratulations!
— Afghanistan Cricket Board (@ACBofficials) September 15, 2019
12th consecutive win in T20Is for Afghanistan as they beat @BCBtigers by 25 runs in Dhaka. #AFGvBAN #Triseries pic.twitter.com/LCeEdZkYhzCongratulations!
— Afghanistan Cricket Board (@ACBofficials) September 15, 2019
12th consecutive win in T20Is for Afghanistan as they beat @BCBtigers by 25 runs in Dhaka. #AFGvBAN #Triseries pic.twitter.com/LCeEdZkYhz
ಅಫ್ಘಾನಿಸ್ತಾನ 2016-17ರಲ್ಲಿ ಸತತವಾಗಿ 11 ಟಿ-20 ಪಂದ್ಯಗಳಲ್ಲಿ ಗೆಲುವು ಸಾಧಿಸಿ ದಾಖಲೆ ಬರೆದಿತ್ತು. ಅಲ್ಲದೆ, ಏಷ್ಯಾದಲ್ಲಿ ತಾನಾಡಿದ ಕಳೆದ ಎಲ್ಲಾ 21 ಪಂದ್ಯಗಳಲ್ಲಿಯೂ ಅಫ್ಘಾನಿಸ್ತಾನ ಗೆಲುವು ಸಾಧಿಸಿರುವುದು ವಿಶೇಷ.
ಸತತ ಹೆಚ್ಚು ಟಿ-20 ಪಂದ್ಯ ಗೆದ್ದ ತಂಡಗಳು:
ಅಫ್ಘಾನಿಸ್ತಾನ -12
ಅಫ್ಘಾನಿಸ್ತಾನ - 11
ಪಾಕಿಸ್ತಾನ -09
ಇಂಗ್ಲೆಂಡ್-08
ಐರ್ಲೆಂಡ್-08
ಪಾಕಿಸ್ತಾನ -08
ದಕ್ಷಿಣ ಆಫ್ರಿಕಾ -07
ಭಾರತ -07