ETV Bharat / sports

ಟಿ20 ವಿಶ್ವಕಪ್​ ಗೆಲ್ಲುವ ಕೌಶಲ್ಯ, ಸಾಮರ್ಥ್ಯ ಅಫ್ಘನ್​ಗಿದೆ: ರಶೀದ್​ ಖಾನ್​

author img

By

Published : Sep 16, 2020, 4:27 PM IST

2016ರ ವಿಶ್ವಕಪ್​ ಗೆದ್ದಿದ್ದ ವೆಸ್ಟ್​ ಇಂಡೀಸ್​ ತಂಡವನ್ನೇ ಅಫ್ಘಾನಿಸ್ತಾನ ತಂಡ ಲೀಗ್​ ಹಂತದ ಪಂದ್ಯದಲ್ಲಿ ಬಗ್ಗುಬಡಿದಿತ್ತು. ಅದೇ ತಂಡ ಕಳೆದ ವರ್ಷ ಭಾರತದಲ್ಲಿ ನಡೆದಿದ್ದ ವಿಂಡೀಸ್​ ವಿರುದ್ಧದ ಟಿ20 ಸರಣಿಯನ್ನು ಗೆದ್ದಿದೆ.

ರಶೀದ್​ ಖಾನ್​
ರಶೀದ್​ ಖಾನ್​

ಹೈದರಾಬಾದ್​: ಅಫ್ಘಾನಿಸ್ತಾನ ತಂಡಕ್ಕೆ ಟಿ20 ವಿಶ್ವಕಪ್​ ಎತ್ತಿ ಹಿಡಿಯುವ ಸಾಮರ್ಥ್ಯ ಮತ್ತು ಪ್ರತಿಭೆ ಇದೆ ಎಂದು ಟಿ20 ಕ್ರಿಕೆಟ್​ನ ನಂಬರ್​ ಒನ್​ ಸ್ಪಿನ್​ ಬೌಲರ್​ ರಶೀದ್​ ಖಾನ್​ ಅಭಿಪ್ರಾಯಪಟ್ಟಿದ್ದಾರೆ.

ಹೆಚ್ಚಿನ ಪಂದ್ಯಗಳನ್ನು ಉನ್ನತ ದರ್ಜೆಯ ತಂಡಗಳೊಂದಿಗೆ ಆಡಿದರೆ ವಿಶ್ವಕಪ್​ ಗೆಲ್ಲುವ ಕನಸಿಗೆ ಹೆಚ್ಚಿನ ಆತ್ಮವಿಶ್ವಾಸ ಬರುತ್ತದೆ ಎಂದು ಸನ್​ರೈಸರ್ಸ್​ ಪರ ಆಡಲಿರುವ ಯುವ ಸ್ಪಿನ್​ ಬೌಲರ್​ ರಶೀದ್​ ಖಾನ್​ ತಿಳಿಸಿದ್ದಾರೆ.

ಅಫ್ಘಾನಿಸ್ತಾನ ತಂಡ

"ಟೆಸ್ಟ್​ ಕ್ರಿಕೆಟ್​ ಆಡುವುದು ಮತ್ತು ಐಸಿಸಿಯಿಂದ ಪೂರ್ಣ ದರ್ಜೆಯ ತಂಡ ಎಂದು ಕರೆಸಿಕೊಳ್ಳುವುದು ದೇಶದ ದೊಡ್ಡ ಕನಸಾಗಿತ್ತು. ಅದು ನಾವೆಲ್ಲರೂ ದೇಶಕ್ಕಾಗಿ ಆಶಿಸುತ್ತಿದ್ದ ಹಾಗೂ ಪ್ರಾರ್ಥಿಸುತ್ತಿದ್ದ ವಿಷಯ. ಆದರೆ ಅದು ಇಷ್ಟು ಬೇಗ ಸಂಭವಿಸುತ್ತದೆ ಎಂದು ನಾವು ಸಂಭವಿಸಿರಲಿಲ್ಲ. ಅದು ಭಾರತದ ವಿರುದ್ಧ ಭಾರತದಲ್ಲಿ ಆಡುವುದೆಂದರೆ ಕನಸಿಗಿಂತಲೂ ಹೆಚ್ಚು" ಎಂದು ಅವರು ಭಾರತ ತಂಡದ ಆರ್​ ಅಶ್ವಿನ್​ ಅವರ ಯೂಟ್ಯೂಬ್​ ಚಾನೆಲ್​ನ ಡಿಆರ್​ಎಸ್​ ವಿತ್​ ಆಶ್​ ಶೋನಲ್ಲಿ ಹೇಳಿಕೊಂಡಿದ್ದಾರೆ.

"ಅಫ್ಘಾನಿಸ್ತಾನ ತಂಡದ ಬಹುದೊಡ್ಡ ಸಾಧನೆಯೆಂದರೆ ವಿಶ್ವಕಪ್​ ಗೆಲ್ಲುವುದು. ಇದಕ್ಕಾಗಿ ತಂಡ ಹಾಗೂ ದೇಶ ನಿರೀಕ್ಷಿಸುತ್ತಿದೆ. ಟಿ20 ವಿಶ್ವಕಪ್​ ಗೆಲ್ಲಲು ಬೇಕಿರುವ ಎಲ್ಲಾ ಕೌಶಲ್ಯಗಳು ಹಾಗೂ ಪ್ರತಿಭೆಗಳು ಮತ್ತು ಅದನ್ನು ಸಾಧಿಸಲು ಬೇಕಾದ ನಂಬಿಕೆಯನ್ನು ನಾವು ಹೊಂದಿದ್ದೇವೆ" ಎಂದಿದ್ದಾರೆ.

ರಶೀದ್​ ಖಾನ್​
ರಶೀದ್​ ಖಾನ್​

"ಸಾಮರ್ಥ್ಯಗಳಲ್ಲಿ ನಾವು ಉತ್ತಮರಾಗಿದ್ದೇವೆ. ನಾವು ಅತ್ಯುತ್ತಮ ಸ್ಪಿನ್ನರ್​ಗಳನ್ನು ಹೊಂದಿದ್ದೇವೆ, ಉತ್ತಮ ವೇಗಿಗಳು ಹಾಗೂ ಕೌಶಲ್ಯವುಳ್ಳ ಬ್ಯಾಟಿಂಗ್ ಹೊಂದಿದ್ದೇವೆ. ಆದರೆ ದೊಡ್ಡ ರಾಷ್ಟ್ರಗಳ ವಿರುದ್ಧ ಆಡದಿರುವುದು ನಮ್ಮನ್ನು ಕೆಳಗಿಳಿಸಿದೆ. ಏಕೆಂದರೆ ನಾವು ಅವರೊಂದಿಗೆ ಸಾಕಷ್ಟು ಪಂದ್ಯಗಳನ್ನ ಆಡಿಲ್ಲ ಎಂದು ಅವರು ವಿವರಿಸಿದ್ದಾರೆ.

ಮುಂದಿನ ಟಿ20 ವಿಶ್ವಕಪ್​ ಅಕ್ಟೋಬರ್​-ನವೆಂಬರ್​ನಲ್ಲಿ ಭಾರತದಲ್ಲಿ ಆಯೋಜನೆಗೊಳ್ಳಲಿದೆ. ರಶೀದ್​ ಖಾನ್​ 2020ರ ಐಪಿಎಲ್​ ಆವೃತ್ತಿಯಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಅವರು ಸೆಪ್ಟೆಂಬರ್​ 21ರಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ಕಣಕ್ಕಿಳಿಯಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.