ETV Bharat / sports

ಭೀಕರ ಕಾರು ಅಪಘಾತ: ಕೋಮಾ ಸೇರಿದ ಅಫ್ಘನ್ ಕ್ರಿಕೆಟಿಗ ನಜೀಬ್ ತಾರಕೈ

author img

By

Published : Oct 3, 2020, 11:15 PM IST

ಜಲಾಲಾಬಾದ್ ನಗರದಲ್ಲಿ 29 ವರ್ಷದ ಕ್ರಿಕೆಟಿಗನಿಗೆ ಅಪಘಾತ ಸಂಭವಿಸಿದೆ. ನಜೀಬ್​ಗೆ ಕಾರು ಡಿಕ್ಕಿ ಹೊಡೆದಿದ್ದು ನಂತರ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಕಳೆದ22 ಗಂಟೆಗಳಿಂದಲೂ ಪ್ರಜ್ಞೆ ಬಂದಿಲ್ಲ ಎಂದು ತಿಳಿದುಬಂದಿದೆ.

ಕೋಮಾ ಸೇರಿದ ಅಫ್ಘನ್ ಕ್ರಿಕೆಟಿಗ ನಜೀಬ್ ತಾರಕೈ
ಕೋಮಾ ಸೇರಿದ ಅಫ್ಘನ್ ಕ್ರಿಕೆಟಿಗ ನಜೀಬ್ ತಾರಕೈ

ನವದೆಹಲಿ: ಅಫ್ಘಾನಿಸ್ತಾನದ ಕ್ರಿಕೆಟಿಗ ನಜೀಬ್ ತಾರಕೈ ಬೀಕರ ಕಾರು ಅಪಘಾತಕ್ಕೆ ಒಳಗಾಗಿದ್ದು, ಕಳೆದ 22 ಗಂಟೆಗಳಿಂದಲೂ ಕೋಮದಲ್ಲಿದ್ದಾರೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯಮಾಜಿ ಮಾಧ್ಯಮ ವ್ಯವಸ್ಥಾಪಕ ಎಂ.ಇಬ್ರಾಹಿಂ ಮೊಮಂಡ್ ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಜಲಾಲಾಬಾದ್ ನಗರದಲ್ಲಿ 29 ವರ್ಷದ ಕ್ರಿಕೆಟಿಗನಿಗೆ ಅಪಘಾತ ಸಂಭವಿಸಿದೆ. ನಜೀಬ್​ಗೆ ಕಾರು ಡಿಕ್ಕಿ ಹೊಡೆದಿದ್ದು ನಂತರ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಕಳೆದ22 ಗಂಟೆಗಳಿಂದಲೂ ಪ್ರಜ್ಞೆ ಬಂದಿಲ್ಲ ಎಂದು ತಿಳಿದುಬಂದಿದೆ.

" ಮಾರಣಾಂತಿಕ ಅಪಘಾತ ಸಂಭವಿಸಿ 22 ಗಂಟೆಗಳಾದರೂ ರಾಷ್ಟ್ರೀಯ ಕ್ರಿಕೆಟಿಗ ನಜೀಬ್​ ತಾರಕೈಗೆ ಇನ್ನು ಕದಲುತ್ತಿಲ್ಲ. ತಲೆಗೆ ಗಾಯವಾಗಿರುವುದರಿಂದ ಅವರು ಈಗಲೂ ಕೋಮದಲ್ಲಿದ್ದಾರೆ. ಅವರಿಗೆ ಜಲಾಲಾಬಾದ್ ನಗರದಲ್ಲಿ ಕಾರು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. ಅವರನ್ನು ಕಾಬೂಲ್ ಅಥವಾ ನೆರೆಯ ರಾಷ್ಟ್ರಗಳ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಅಭಿಮಾನಿಗಳು ಎಸಿಬಿ ಅಧಿಕಾರಿಗಳನ್ನು ಕೇಳಿಕೊಳ್ಳುತ್ತಿದ್ದಾರೆ " ಎಂದು ಅವರು ಟ್ವೀಟ್ ಮಾಡಿದ್ದಾರೆ.

ತಾರಕೈ ಅಫ್ಘಾನಿಸ್ತಾನ ತಂಡದ ಪರ ಕೇವಲ ಒಂದು ಏಕದಿನ ಹಾಗೂ 12 ಟಿ20 ಪಂದ್ಯಗಳನ್ನಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.