ETV Bharat / sports

ಭಾರತದಲ್ಲೇ ಐಪಿಎಲ್​ ಆಯೋಜಿಸುವಂತೆ ಗಂಗೂಲಿಗೆ ಪತ್ರ ಬರೆದ ಆದಿತ್ಯ ವರ್ಮಾ - ಯುಎಇನಲ್ಲಿ ಐಪಿಎಲ್​2020

ಐಪಿಎಲ್​ ಸೆಪ್ಟೆಂಬರ್​ 19 ರಿಂದ ನಡೆಯಲಿದ್ದು, ಆಡಳಿತ ಮಂಡಳಿ ಕೇಂದ್ರ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ. ಆದರೆ ವರ್ಮಾ ಐಪಿಎಲ್​ ಅನ್ನು ಭಾರತದಲ್ಲಿ ಏಕೆ ನಡೆಸಬೇಕು ಎಂಬುದಕ್ಕೆ ಕಾರಣ ನೀಡಿ ದಾದಾಗೆ ಪತ್ರ ಬರೆದಿದ್ದಾರೆ.

ಐಪಿಎಲ್​ 2020
ಸೌರವ್​ ಗಂಗೂಲಿ
author img

By

Published : Aug 2, 2020, 1:24 PM IST

Updated : Aug 2, 2020, 5:28 PM IST

ನವದೆಹಲಿ: ಐಪಿಎಲ್​ ಸ್ಪಾಟ್​ಫಿಕ್ಸಿಂಗ್​ನ ಮೂಲ ಅರ್ಜಿದಾರರಾದ ಆದಿತ್ಯ ವರ್ಮಾ 13ನೇ ಆವೃತ್ತಿಯ ಐಪಿಎಲ್​ ಲೀಗ್​ ಅನ್ನು ಭಾರತದಲ್ಲೇ ಆಯೋಜಿಸುವಂತೆ ಸೌರವ್​ ಗಂಗೂಲಿಗೆ ಪತ್ರ ಬರೆದಿರುವುದಾಗಿ ಹೇಳಿದ್ದಾರೆ.

ಈಗಾಗಲೆ ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್​ಅನ್ನು ಯುಎಇನಲ್ಲಿ ಆಯೋಜಿಸುವುದಕ್ಕೆ ಎಲ್ಲಾ ಸಿದ್ಧತೆಗಳು ನಡೆಯುತ್ತಿದೆ. ಆದರೆ ಆದಿತ್ಯ ವರ್ಮ ಯುಎಇ ಐಪಿಎಲ್​ಗೆ ಸುರಕ್ಷಿತ ಸ್ಥಳವಲ್ಲ ಎಂದು ಹೇಳಿದ್ದು, ಭಾರತದಲ್ಲೇ ಆಯೋಜಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್​ ಸೆಪ್ಟೆಂಬರ್​ 19 ರಿಂದ ನಡೆಯಲಿದ್ದು, ಆಡಳಿತ ಮಂಡಳಿ ಕೇಂದ್ರ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ. ಆದರೆ ವರ್ಮಾ ಐಪಿಎಲ್​ ಅನ್ನು ಭಾರತದಲ್ಲಿ ಏಕೆ ನಡೆಸಬೇಕು ಎಂಬುದಕ್ಕೆ ಕಾರಣ ನೀಡಿ ದಾದಾಗೆ ಪತ್ರ ಬರೆದಿದ್ದಾರೆ.

"ದುಬೈ ರಗ್ಬಿ ಸೆವೆನ್ಸ್ ಯುಎಇನಲ್ಲಿ ಅತಿದೊಡ್ಡ ಇವೆಂಟ್​. ಕೋವಿಡ್​ 19 ಕಾರಣ ನವೆಂಬರ್‌ನಲ್ಲಿ ಆಯೋಜನೆಯಾಗಿದ್ದ ಆ ಟೂರ್ನಿಯನ್ನೇ ಅಲ್ಲಿ ಮುಂದೂಡಲಾಗಿದೆ. ನವೆಂಬರ್​ನಲ್ಲಿ ನಡೆಯವ ಆ ಟೂರ್ನಿಯೇ ರದ್ದಾಗಿರುವಾಗ , ಅದಕ್ಕೂ ಮುನ್ನ ಅದೇ ಸ್ಥಳದಲ್ಲಿ ಐಪಿಎಲ್​ ಹೇಗೆ ಸಾಧ್ಯ? ಹಾಗಾಗಿ ಭಾರತದಲ್ಲಿ ಐಪಿಎಲ್​ ಆಯೋಜಿಸುವುದೇ ಸೂಕ್ತ ಎಂದು ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿಗೆ ಪತ್ರ ಬರೆದಿರುವುದಾಗಿ ಅವರು ವರ್ಮಾ ತಿಳಿಸಿದ್ದಾರೆ.

ಇಂಡಿಯನ್​ ಪ್ರೀಮಿಯರ್ ಲೀಗ್​
ಇಂಡಿಯನ್​ ಪ್ರೀಮಿಯರ್ ಲೀಗ್​

ಇನ್ನು ಭಾರತದಲ್ಲಿ ಸುಮಾರು 5 ಲಕ್ಷಕ್ಕಿಂತ ಹೆಚ್ಚು ಸಕ್ರಿಯ ಕೊರೊನ ಪ್ರಕರಣಗಳಿವೆ. ಈಗಾಗಲೆ 36, 000ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಆದರೂ ವರ್ಮಾ ಲಕ್ಷಕ್ಕೂ ಕಡಿಮೆಯಿರುವ ಯುಎಇಯ ಮೂರು ವಿಭಿನ್ನ ಕ್ರೀಡಾಂಗಣಗಳಲ್ಲಿ ಐಪಿಎಲ್‌ ನಡೆಸುವುದಕ್ಕಿಂತ ಮುಂಬೈನಂತಹ ನಗರದಲ್ಲಿ ಬಯೋ ಸೆಕ್ಯೂರ್ ವಾತಾವರಣ ನಿರ್ಮಾಣ ಮಾಡಿ​ ಐಪಿಎಲ್ ಆಯೋಜಿಸುವುದು ಸೂಕ್ತ ಎಂದು ಹೇಳಿದ್ದಾರೆ.

ಭಾರತದಲ್ಲೇ ಐಪಿಎಲ್​ ಆಯೋಜನೆಗೊಂಡರೆ ವಿದೇಶಿ ಆಟಗಾರರು ಬಾಗವಹಿಸಲು ಹಿಂದೇಟು ಹಾಕಬಹುದು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸದ ಅವರು, ವಿದೇಶಿ ಆಟಗಾರರು ಬಾರದಿದ್ದರೆ ಅವರ ಬದಲು ಸ್ವದೇಶಿ ಆಟಗಾರರನ್ನೇ ಬಳಿಸಿಕೊಂಡು ಟೂರ್ನಿಯನ್ನು ನಡೆಸಬಹುದು ಎಂದು ಉತ್ತರಿಸಿದ್ದಾರೆ.

ಕೋವಿಡ್​ 19 ನಿಂದ ಬಳಲಿರುವ ಭಾರತೀಯರಿಗೆ ಐಪಿಎಲ್​ ಅವರ ಮನಸ್ಥಿತಿಯನ್ನು ಬದಲಾಯಿಸಲು ನೆರವಾಗುತ್ತದೆ. ಒಂದು ವೇಳೆ ನಾವು ಭಾರತದಲ್ಲಿ ಈ ಬಾರಿ ಐಪಿಎಲ್​ ಅನ್ನು ಯಶಸ್ವಿಯಾಗಿ ನಡೆಸಿದರೆ, ಇದೊಂದು ದೊಡ್ಡ ಸಾಧನೆಯಗುತ್ತದೆ ಎಂದು ವರ್ಮಾ ಅಭಿಪ್ರಾಯಪಟ್ಟಿದ್ದಾರೆ.

Last Updated : Aug 2, 2020, 5:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.