ನವದೆಹಲಿ: ಭಾರತದ ವಿರುದ್ಧ ಆಡುವಾಗ ಸ್ಪಿನ್ನರ್ ಹರ್ಭಜನ್ ಸಿಂಗ್ಗೆ ವಿಕೆಟ್ ಒಪ್ಪಿಸಿದ ಸಂದರ್ಭವನ್ನು ಆಸೀಸ್ ತಂಡದ ಖ್ಯಾತ ಮಾಜಿ ಕ್ರಿಕೆಟಿಗ ಗಿಲ್‌ಕ್ರಿಸ್ಟ್ ನೆನಪಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ಫೀಲ್ಡರ್ಸ್ ನಾವು ಔಟಾದಾಗಲೆಲ್ಲಾ ಬಳಸುತ್ತಿದ್ದ ಪದದ ಬಗ್ಗೆ ಸಂದರ್ಶನದಲ್ಲಿ ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ವಿಕೆಟ್ ಪಡೆಯುವುದರಲ್ಲಿ ಹರ್ಭಜನ್ ಸಿಂಗ್ ನಿಸ್ಸೀಮರಾಗಿದ್ದರು. ಅವರು ಟೆಸ್ಟ್ ಕ್ರಿಕೆಟ್ನಲ್ಲಿ ರಿಕಿ ಪಾಂಟಿಂಗ್ ಅವರನ್ನು 10 ಬಾರಿ, ಮ್ಯಾಥ್ಯೂ ಹೇಡನ್ರನ್ನು 9 ಬಾರಿ ಹಾಗೂ ಆ್ಯಡಂ ಗಿಲ್ಕ್ರಿಸ್ಟ್ರನ್ನು 7 ಬಾರಿ ಔಟ್ ಮಾಡಿದ್ದರು. ಹರ್ಭಜನ್ ಸಿಂಗ್ ವಿಕೆಟ್ ಪಡೆದಾಗಲೆಲ್ಲಾ ಭಾರತೀಯ ಕ್ಷೇತ್ರ ರಕ್ಷಕರು ಒಂದು ನಿರ್ಧಿಷ್ಟ ಪದವನ್ನು ಬಳಸುತ್ತಿದ್ದರು ಎಂದು ಗಿಲ್ಲಿ ತಿಳಿಸಿದ್ದಾರೆ.
"ಆ ಪದ ಏನು ಎಂಬುದು ನನಗೆ ನೆನಪಿಲ್ಲ.ಆದರೆ ಪ್ರತಿ ಬಾರಿ ಹರ್ಭಜನ್ ಸಿಂಗ್ ನನ್ನ ಔಟ್ ಮಾಡಿದಾಗ, ಆ ಪದ ಹೆಚ್ಚು ಕೇಳುತ್ತಿತ್ತು" ಎಂದು ಹೇಳಿದ್ದಾರೆ.
2001ರ ಆಸ್ಟ್ರೇಲಿಯಾ ವಿರುದ್ದ ಟೆಸ್ಟ್ ಸರಣಿಯಲ್ಲಿ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದ ಹರ್ಭಜನ್ ಸಿಂಗ್ ಒಂದು ಹ್ಯಾಟ್ರಿಕ್ ಸಹಿತ 32 ವಿಕೆಟ್ ಪಡೆದು ಮಿಂಚಿದ್ದರು. ಆ ಸರಣಿಯಲ್ಲಿ ಭಜ್ಜಿ ಏಕಾಂಗಿಯಾಗಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು. ಅದರಲ್ಲೂ ರಿಕಿ ಪಾಂಟಿಂಗ್ ಮತ್ತು ಆ್ಯಡಂ ಗಿಲ್ಕಿಸ್ಟ್ರನ್ನು ರನ್ಗಳಿಸದಂತೆ ಮಾಡಿದ್ದರು.
ಹರ್ಭಜನ್ ಸಿಂಗ್ ಆಸ್ಟ್ರೇಲಿಯಾ ವಿರುದ್ಧ 18 ಟೆಸ್ಟ್ ಪಂದ್ಯಗಳನ್ನಾಡಿದ್ದು, 29ರ ಸರಾಸರಿಯಲ್ಲಿ 95 ವಿಕೆಟ್ ಪಡೆದಿದ್ದಾರೆ.