ETV Bharat / sports

ಇದು ಗೂಂಡಾ ವರ್ತನೆಯ ಪರಮಾವಧಿ: ಜನಾಂಗೀಯ ನಿಂದನೆ ವಿರುದ್ಧ ಕೊಹ್ಲಿ ಕೆಂಡ - ವಿರಾಟ್​ ಕೊಹ್ಲಿ ಲೇಟೆಸ್ಟ್​ ನ್ಯೂಸ್​

ಮೂರನೇ ಟೆಸ್ಟ್​ ವೇಳೆ ಭಾರತೀಯ ಆಟಗಾರರ ಮೇಲಿನ ಜನಾಂಗೀಯ ನಿಂದನೆ ಘಟನೆಯನ್ನು ಕೊಹ್ಲಿ ಖಂಡಿಸಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಟ್ವಿಟರ್​ನಲ್ಲಿ ಒತ್ತಾಯಿಸಿದ್ದಾರೆ.

ಜನಾಂಗೀಯ ನಿಂದನೆ ವಿರುದ್ಧ ಕೊಹ್ಲಿ ಆಕ್ರೋಶ
ಜನಾಂಗೀಯ ನಿಂದನೆ ವಿರುದ್ಧ ಕೊಹ್ಲಿ ಆಕ್ರೋಶ
author img

By

Published : Jan 10, 2021, 7:31 PM IST

ಮುಂಬೈ: ಸಿಡ್ನಿ ಕ್ರಿಕೆಟ್​ ಮೈದಾನದಲ್ಲಿ ಭಾರತೀಯ ಬೌಲರ್​ಗಳಾದ ಮೊಹಮ್ಮದ್ ಸಿರಾಜ್​ ಮತ್ತು ಜಸ್ಪ್ರೀತ್​ ಬುಮ್ರಾ ಅವರನ್ನು ಪ್ರೇಕ್ಷಕರು ಜನಾಂಗೀಯವಾಗಿ ನಿಂದಿಸಿರುವುದಕ್ಕೆ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಕಟುವಾಗಿ ಟೀಕಿಸಿದ್ದಾರೆ.

ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕೊಹ್ಲಿ ಸದ್ಯ ಆಸ್ಟ್ರೇಲಿಯಾ ಪ್ರವಾಸದಿಂದ ಹೊರಬಂದಿದ್ದಾರೆ.

  • The incident needs to be looked at with absolute urgency and seriousness and strict action against the offenders should set things straight for once.

    — Virat Kohli (@imVkohli) January 10, 2021 " class="align-text-top noRightClick twitterSection" data=" ">

"ಜನಾಂಗೀಯ ನಿಂದನೆ ಸ್ವೀಕಾರಾರ್ಹವಲ್ಲ. ಬೌಂಡರಿ ಗೆರೆಯಲ್ಲಿ ಇಂತಹ ಅಸಹ್ಯವೆನಿಸುವ ಅನೇಕ ಘಟನೆಗಳು ನಡೆಸದಿರುವುದು ರೌಡಿ ವರ್ತನೆಯ ಪರಮಾವಧಿ. ಮೈದಾನದಲ್ಲಿ ಇಂತಹ ಘಟನೆ ಸಂಭವಿಸುತ್ತಿರುವುದು ಬೇಸರದ ಸಂಗತಿಯಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಹಿಂದೆಯೂ ಸಿಡ್ನಿ ಪ್ರೇಕ್ಷಕರಿಂದ ಜನಾಂಗೀಯ ನಿಂದನೆ ಅನುಭವಿಸಿದ್ದೇವೆ: ರವಿಚಂದ್ರನ್​ ಅಶ್ವಿನ್​

ಈ ಘಟನೆಯನ್ನು ಆದಷ್ಟು ತುರ್ತಾಗಿ ಮತ್ತು ಗಂಭೀರತೆಯಿಂದ ನೋಡಬೇಕಾಗಿದೆ. ಅಲ್ಲದೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಮೂಲಕ ಮುಂದೆ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕಾಗಿದೆ ಎಂದು ಮತ್ತೊಂದು ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ:ಸಿರಾಜ್​ರನ್ನು ಪ್ರೇಕ್ಷಕರು ಕಂದು ನಾಯಿ, ದೊಡ್ಡ ಕೋತಿ ಎಂದು ನಿಂದಿಸಿದ್ದಾರೆ : ಬಿಸಿಸಿಐ ಮೂಲ

ಭಾನುವಾರ ಸಿರಾಜ್​ರನ್ನು ನಿಂದಿಸಿದ ಪ್ರೇಕ್ಷಕರನ್ನು ಮೈದಾನದಿಂದ ಹೊರಕಳುಹಿಸಿ ನ್ಯೂ ​ಸೌತ್​ ವೇಲ್ಸ್​ ಪೊಲೀಸರಿಗೆ ಒಪ್ಪಿಸಲಾಗಿದೆ. ಈ ಘಟನೆಗೆ ಈಗಾಗಲೇ ಕ್ರಿಕೆಟ್​ ಆಸ್ಟ್ರೇಲಿಯಾ ಭಾರತೀಯರ ಕ್ಷಮೆ ಕೋರಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಭರವಸೆ ನೀಡಿದೆ.

ಇದನ್ನೂ ಓದಿ: ಇದು ನಾಚಿಕೆಗೇಡು, ನನ್ನ ಜೀವನದಲ್ಲಿ ಕಾಡುವ ಘಟನೆ.. ಜನಾಂಗೀಯ ನಿಂದನೆ ಬಗ್ಗೆ ಲ್ಯಾಂಗರ್​ ಕಿಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.