ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಪೈನಲ್ ಪಂದ್ಯದಲ್ಲಿ ಆತಿಥೇಯ ತಂಡದ ವೇಗದ ಬೌಲರ್ ಅಭಿಮನ್ಯು ಮಿಥುನ್ ಹ್ಯಾಟ್ರಿಕ್ ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದಾರೆ.
49.3, 49.4, 49.5ನೇಎಸೆತದಲ್ಲಿ ಕ್ರಮವಾಗಿ ಶಾರುಖ್ ಖಾನ್, ಎಂ.ಮೊಹಮ್ಮದ್ ಹಾಗೂ ಮುರುಗನ್ ಅಶ್ವಿನ್ರನ್ನು ಔಟ್ ಮಾಡುವ ಮೂಲಕ ವಿಜಯ್ ಹಜಾರೆ ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಕನ್ನಡಿಗ ಎನ್ನುವ ಕೀರ್ತಿಗೆ ಪಾತ್ರರಾದರು.
- ' class='align-text-top noRightClick twitterSection' data=''>
ರಣಜಿ ಟ್ರೋಫಿ ಹಾಗೂ ವಿಜಯ್ ಹಜಾರೆ ಟ್ರೋಫಿಯಲ್ಲಿ ಹ್ರಾಟ್ರಿಕ್ ಸಂಪಾದಿಸಿದ ಎರಡನೇ ಆಟಗಾರ ಎನ್ನುವ ಗೌರವಕ್ಕೂ ಮಿಥುನ್ ಪಾತ್ರರಾಗಿದ್ದಾರೆ. ಮುರಳಿ ಕಾರ್ತಿಕ್ ಮೊದಲಿಗರಾಗಿದ್ದಾರೆ.
ಇಂದಿನ ಆಟದಲ್ಲಿ ಒಟ್ಟಾರೆ 9.5 ಓವರ್ ಎಸೆತದ ಮಿಥುನ್ 34 ರನ್ ನೀಡಿ 5 ವಿಕೆಟ್ ಪಡೆದರು. ಆರಂಭಿಕ ಆಟಗಾರ ಮುರಳಿ ವಿಜಯ್ರನ್ನು ಬಲಿಪಡೆದ ಮಿಥುನ್ ನಂತರದಲ್ಲಿ ವಿಜಯ್ ಶಂಕರ್ನ್ನು ಔಟ್ ಮಾಡಿದರು. ಕೊನೆಯಲ್ಲಿ ಹ್ಯಾಟ್ರಿಕ್ ಪಡೆದು 5 ವಿಕೆಟ್ ಗೊಂಚಲು ಸಾಧನೆಯನ್ನೂ ಮಾಡಿದರು.
-
A Hat-trick for Abhimanyu Mithun in the final over, becomes the first Karnataka bowler to take a hat-trick in #VijayHazare Trophy.
— BCCI Domestic (@BCCIdomestic) October 25, 2019 " class="align-text-top noRightClick twitterSection" data="
Tamil Nadu bowled out for 252 in 49.5 overs#KARvTN @paytm pic.twitter.com/A17K50jAxW
">A Hat-trick for Abhimanyu Mithun in the final over, becomes the first Karnataka bowler to take a hat-trick in #VijayHazare Trophy.
— BCCI Domestic (@BCCIdomestic) October 25, 2019
Tamil Nadu bowled out for 252 in 49.5 overs#KARvTN @paytm pic.twitter.com/A17K50jAxWA Hat-trick for Abhimanyu Mithun in the final over, becomes the first Karnataka bowler to take a hat-trick in #VijayHazare Trophy.
— BCCI Domestic (@BCCIdomestic) October 25, 2019
Tamil Nadu bowled out for 252 in 49.5 overs#KARvTN @paytm pic.twitter.com/A17K50jAxW
ಹುಟ್ಟಹಬ್ಬದ ದಿನವೇ ಮಿಥುನ್ ಮಿಂಚು:
ಇಂದು ತಮ್ಮ 30ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಮಿಥುನ್ ಹ್ಯಾಟ್ರಿಕ್ ಪಡೆಯುವ ಮೂಲಕ ಜನ್ಮದಿನ ಖುಷಿಯನ್ನು ಹೆಚ್ಚಿಸಿಕೊಂಡಿದ್ದಾರೆ.