ಸೂರತ್: ಇಲ್ಲಿ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕನ್ನಡಿಗ ಅಭಿಮನ್ಯು ಮಿಥುನ್ ಒಂದೇ ಓವರ್ನಲ್ಲಿ ಹ್ಯಾಟ್ರಿಕ್ ಸಹಿತ 5 ವಿಕೆಟ್ ಪಡೆದು ಮಿಂಚಿದ್ದಾರೆ.
- ' class='align-text-top noRightClick twitterSection' data=''>
ಸೆಮಿಫೈನಲ್ ಪಂದ್ಯದ ಅಂತಿಮ ಓವರ್ನಲ್ಲಿ ಬೌಲಿಂಗ್ಗೆ ಇಳಿದ ಕನ್ನಡಿಗ ಅಭಿಮನ್ಯು ಮಿಥುನ್ 6 ಎಸೆತಗಳಲ್ಲಿ ಹ್ಯಾಟ್ರಿಕ್ ಸಹಿತ 5 ವಿಕೆಟ್ ಪಡೆದು ಮಿಂಚಿದ್ದಾರೆ. ಮೊದಲ ಎಸೆತದಲ್ಲಿ ಹಿಮಾಂಶು ರಾಣಾ, ಎರಡನೇ ಎಸೆತದಲ್ಲಿ ರಾಹುಲ್ ತಿವಾಟಿಯ, ಮೂರನೇ ಎಸೆತದಲ್ಲಿ ಸುಮಿತ್ ಕುಮಾರ್ ಅವರನ್ನ ಔಟ್ ಮಾಡುವ ಮೂಲಕ ಹ್ಯಾಟ್ರಿಕ್ ವಿಕೆಟ್ ಪಡೆದುಕೊಂಡ್ರು.
ತಮ್ಮ ವಿಕೆಟ್ ಅಭಿಯಾನ ಮುಂದುವರೆಸಿದ ಅಭಿಮನ್ಯು ಮಿಥುನ್ ನಾಲ್ಕು ಮತ್ತು ಆರನೇ ಎಸೆತದಲ್ಲಿ ಎ ಆರ್ ಮಿಶ್ರಾ ಮತ್ತು ಜೆ ಜೆ ಯಾದವ್ ವಿಕೆಟ್ ಪಡೆದು ಮಿಂಚಿದ್ರು. ಇತ್ತೀಚೆಗಷ್ಟೇ ಮುಕ್ತಾಯವಾಗಿದ್ದ ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲೂ ಮಿಥುನ್ ಹ್ಯಾಟ್ರಿಕ್ ವಿಕೆಟ್ ಪಡೆದುಕೊಂಡಿದ್ದರು.